• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, April 14, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಭಾರತದಲ್ಲಿ ನಿಷೇಧಗೊಂಡಿದ್ದರೂ PUBG ಇನ್ನೂ ಏಕೆ ಲಭ್ಯವಿದೆ? ಮಕ್ಕಳ ರಕ್ಷಣಾ ಆಯೋಗ ಪ್ರಶ್ನೆ

ಫೈಝ್ by ಫೈಝ್
June 16, 2022
in ದೇಶ
0
ಭಾರತದಲ್ಲಿ ನಿಷೇಧಗೊಂಡಿದ್ದರೂ PUBG ಇನ್ನೂ ಏಕೆ ಲಭ್ಯವಿದೆ? ಮಕ್ಕಳ ರಕ್ಷಣಾ ಆಯೋಗ ಪ್ರಶ್ನೆ
Share on WhatsAppShare on FacebookShare on Telegram

ಭಾರತದಲ್ಲಿ PUBG ಇನ್ನೂ ಏಕೆ ಲಭ್ಯವಿದೆ ಎಂಬುದನ್ನು ವಿವರಿಸಿ: ಕೇಂದ್ರಕ್ಕೆ ಪ್ರಶ್ನೆ ಹಾಕಿದ ಮಕ್ಕಳ ಹಕ್ಕುಗಳ ಆಯೋಗ  

ADVERTISEMENT

PUBG ಆನ್‌ಲೈನ್ ವಿಡಿಯೋ ಗೇಮ್ ಭಾರತದಲ್ಲಿ ಇನ್ನೂ ಏಕೆ ಲಭ್ಯವಿದೆ ಎಂಬುದನ್ನು ವಿವರಿಸುವಂತೆ ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗವು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯನ್ನು ಕೇಳಿದೆ ಎಂದು ANI ಮಂಗಳವಾರ ವರದಿ ಮಾಡಿದೆ.

ಕೇಂದ್ರ ಸರ್ಕಾರವು PUBG ಮೊಬೈಲ್ ಮತ್ತು ಅದರ ಆವೃತ್ತಿ PUBG ಲೈಟ್ ಸೇರಿದಂತೆ 118 ಚೀನೀ ಅಪ್ಲಿಕೇಶನ್‌ಗಳನ್ನು ಸೆಪ್ಟೆಂಬರ್ 2, 2020 ರಂದು ನಿಷೇಧಿಸಿತ್ತು. ಈ ಅಪ್ಲಿಕೇಶನ್‌ಗಳು “ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ಭಾರತದ ರಕ್ಷಣೆ, ರಾಜ್ಯದ ಭದ್ರತೆ ಮತ್ತು ಸುರಕ್ಷತೆಗೆ ಪೂರ್ವಾಗ್ರಹ ಪೀಡಿತವಾಗಿವೆ ಎಂದು ಸರ್ಕಾರ ಹೇಳಿತ್ತು.

ಅಕ್ಟೋಬರ್ 30, 2020 ರಂದು, PUBG ತನ್ನ ಮೊಬೈಲ್ ಆವೃತ್ತಿಯನ್ನು ಇನ್ನು ಮುಂದೆ ಭಾರತದಲ್ಲಿನ ಬಳಕೆದಾರರಿಗೆ ಲಭ್ಯವಾಗುವುದಿಲ್ಲ ಎಂದು ಹೇಳಿತ್ತು. ಅದಾಗ್ಯೂ, ಪಬ್‌ ಜಿ ಮೊಬೈಲ್‌ ಗೇಮ್‌ ಭಾರತದಲ್ಲಿ ಲಭ್ಯವಾಗುತ್ತಿದೆ.

ಮಕ್ಕಳ ಹಕ್ಕುಗಳ ಸಂಸ್ಥೆಯ ಮುಖ್ಯಸ್ಥ ಪ್ರಿಯಾಂಕ್ ಕಾನೂಂಗೊ ಅವರು ತಮ್ಮ ಪತ್ರದಲ್ಲಿ, ಲಕ್ನೋದಲ್ಲಿ 16 ವರ್ಷದ ಬಾಲಕ ತನ್ನ ತಾಯಿಯನ್ನು ಆಟವಾಡಲು ಬಿಡಲಿಲ್ಲ ಎಂಬ ಕಾರಣಕ್ಕೆ ಗುಂಡಿಕ್ಕಿ ಕೊಂದ ಘಟನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಪಬ್‌ ಜಿ ಯನ್ನು ದೇಶದಲ್ಲಿ ಕಾನೂನುಬದ್ಧವಾಗಿ ನಿರ್ಬಂಧಿಸಿದ್ದರೂ ಆಟ ಏಕೆ ಲಭ್ಯವಿದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಅಜಯ್ ಪ್ರಕಾಶ್ ಸಾಹ್ನಿ ಅವರನ್ನು  ಪ್ರಿಯಾಂಕ್ ಕಾನೂಂಗೊ ಕೇಳಿದ್ದಾರೆ.

NCPCR wrote to MeitY Secy over media reports that boy shot dead his mother for stopping him from playing PUBG

"It is beyond understanding of the Commission, that how a banned game in India, which has been blocked by GoI is still available for use by minors," reads the letter

— ANI (@ANI) June 14, 2022

“ಅಂತಹ ಘಟನೆಗಳಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ಆಯೋಗಕ್ಕೆ ತಿಳಿಸಬೇಕು. ಮತ್ತು ಈ ಪತ್ರವನ್ನು ಸ್ವೀಕರಿಸಿದ 10 ದಿನಗಳ ಒಳಗಾಗಿ ಅಪ್ರಾಪ್ತ ವಯಸ್ಕರು ಬಳಸುತ್ತಿರುವ ಅಂತಹ ಆಟಗಳ ಪಟ್ಟಿಯನ್ನು ಅವರ ನಿಯಂತ್ರಣ ಸಂಸ್ಥೆಗಳು ಮತ್ತು ನಿಯಂತ್ರಣ ಕಾರ್ಯವಿಧಾನಗಳೊಂದಿಗೆ ಒದಗಿಸುವಂತೆ ವಿನಂತಿಸಲಾಗಿದೆ, ” ಕಾನೂಂಗೊ ಹೇಳಿದ್ದಾರೆ.

ಜೂನ್ 4 ರಂದು 16 ವರ್ಷದ ಹುಡುಗ ತನ್ನ ತಂದೆಯ ಪರವಾನಗಿ ಪಡೆದ ರಿವಾಲ್ವರ್‌ನಿಂದ ಗೇಮ್‌ ಆಡಲು ಬಿಡದ ತಾಯಿಯ ತಲೆಗೆ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ವಲ್ಪ ಸಮಯದ ನಂತರ ಮಹಿಳೆ ಸಾವನ್ನಪ್ಪಿದರು ಮತ್ತು ಹುಡುಗ ಆಕೆಯ ಶವವನ್ನು ಅವರ ಮನೆಯಲ್ಲಿ ಎರಡು ದಿನಗಳ ಕಾಲ ಬಚ್ಚಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೊಳೆತ ದೇಹದ ದುರ್ವಾಸನೆ ಮುಚ್ಚಿಕೊಳ್ಳಲು ರೂಮ್ ಫ್ರೆಶ್ನರ್ ಬಳಸಿದ್ದ ಎನ್ನಲಾಗಿದೆ.

ಹತ್ಯೆಯ ಸಮಯದಲ್ಲಿ ಬಾಲಕನ ಒಂಬತ್ತು ವರ್ಷದ ಸಹೋದರಿ ಮನೆಯಲ್ಲಿದ್ದಳು. ಗುಂಡಿನ ದಾಳಿಯ ಬಗ್ಗೆ ಯಾರಿಗಾದರೂ ಹೇಳಿದರೆ ಆಕೆಯ ಸಹೋದರಿಯನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಹಿಂದೂಸ್ತಾನ್ ಟೈಮ್ಸ್ ಪ್ರಕಾರ ಬಾಲಕನ ಅಜ್ಜಿ ಆತನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಆತನ ಮೇಲೆ ಕೊಲೆ ಪ್ರಕರಣ ದಾಖಲಾಗಿದ್ದು, ಜೂನ್ 10 ರಂದು ವೀಕ್ಷಣಾಲಯಕ್ಕೆ ಕಳುಹಿಸಲಾಗಿತ್ತು.

Tags: BJPCongress PartyExplain why PUBG is still available in India child rights body asks Centreನರೇಂದ್ರ ಮೋದಿಬಿಜೆಪಿ
Previous Post

ಹವಾಮಾನ ಗುರಿಗಳು ಮತ್ತು ವಿದ್ಯುತ್ ಬಳಕೆ ಬೇಡಿಕೆಗಳನ್ನು ಭಾರತ ಒಟ್ಟಾಗಿ ನಿಭಾಯಿಸಬಲ್ಲುದೇ?

Next Post

ರಾಷ್ಟ್ರಪತಿ ಚುನಾವಣೆ 2022 | ಮೊದಲ ದಿನವೇ 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ; ಒಂದು ಅರ್ಜಿ ತಿರಸ್ಕಾರ!

Related Posts

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..
Top Story

ಬಿಹಾರದಲ್ಲಿ ನಿತೀಶ್‌ ಯುಗಾಂತ್ಯ : ಸಿಎಂ ಸ್ಥಾನಕ್ಕೆ ಹಿರಿಯ ನಾಯಕನ ರಾಜೀನಾಮೆ..

by ಪ್ರತಿಧ್ವನಿ
April 14, 2026
0

ಬೆಂಗಳೂರು : ಸುಮಾರು ಎರಡು ದಶಕಗಳ ಕಾಲ 10 ಬಾರಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸಿದ ನಂತರ ಬಿಹಾರದ (Bihar CM) ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್...

Read moreDetails
ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

ದೀದಿ ರಾಜ್ಯದಲ್ಲಿ ಮೋದಿ “SIR” : ಎಷ್ಟು ಲಕ್ಷ ಮತದಾರರ ಭವಿಷ್ಯ ಅತಂತ್ರ ಗೊತ್ತಾ..?

April 14, 2026
ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

ಕೈ ಅಲ್ಪಸಂಖ್ಯಾತ ನಾಯಕರ ಬುಡ ಅಲ್ಲಾಡಿಸುತ್ತಿರುವ ದಾವಣಗೆರೆ ದಂಗಲ್‌ : ಜಬ್ಬಾರ್‌, ನಜೀರ್‌ ಆಯ್ತು ಮುಂದೆ ಜಮೀರ್..?

April 14, 2026
“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

“SIR” ಹೆಸರಲ್ಲಿ ಮತದಾನದ ಹಕ್ಕನ್ನು ಕಿತ್ತುಕೊಳ್ಳುವುದು ಒಪ್ಪಲು ಸಾಧ್ಯವಿಲ್ಲ : ಚುನಾವಣಾ ಆಯೋಗಕ್ಕೆ ಸುಪ್ರೀಂ ಚಾಟಿ :

April 14, 2026
ರಾಜ್ಯದ 15,032 ಜನರಿಗೆ ಉದ್ಯೋಗಾವಕಾಶದ ತೀರ್ಮಾನ : ಸಿಎಂ ಸಿದ್ದರಾಮಯ್ಯ ಬಿಗ್‌ ಅಪ್ಡೇಟ್..

ರಾಜ್ಯದ 15,032 ಜನರಿಗೆ ಉದ್ಯೋಗಾವಕಾಶದ ತೀರ್ಮಾನ : ಸಿಎಂ ಸಿದ್ದರಾಮಯ್ಯ ಬಿಗ್‌ ಅಪ್ಡೇಟ್..

April 13, 2026
Next Post
ರಾಷ್ಟ್ರಪತಿ ಚುನಾವಣೆ 2022 | ಮೊದಲ ದಿನವೇ 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ; ಒಂದು ಅರ್ಜಿ ತಿರಸ್ಕಾರ!

ರಾಷ್ಟ್ರಪತಿ ಚುನಾವಣೆ 2022 | ಮೊದಲ ದಿನವೇ 11 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ; ಒಂದು ಅರ್ಜಿ ತಿರಸ್ಕಾರ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada