ಬೆಳಗಾವಿ : ಎಕ್ಸಿಟ್ ಪೋಲ್ಸ್ ಕೇವಲ ಎಕ್ಸಿಟ್ ಪೋಲ್ಸ್ ಅಷ್ಟೇ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಸವದತ್ತಿಯಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಳೆದ ಬಾರಿಯಂತೆ ಈ ಬಾರಿಯೂ ಎಕ್ಸಿಟ್ ಪೋಲ್ ಸುಳ್ಳಾಗಲಿದೆ ಎಂದು ಹೇಳಿದ್ದಾರೆ.
ಕಳೆದ ಬಾರಿ ಎಕ್ಸಿಟ್ ಪೋಲ್ ನಲ್ಲಿ ಕಾಂಗ್ರೆಸ್ ಗೆ 107, ಬಿಜೆಪಿ 80 ಹೇಳಲಾಗಿತ್ತು. ಆದರೆ ಅದು ಉಲ್ಟಾ ಆಗಿತ್ತು. ನಮಗೆ 104, ಅವರಿಗೆ 80 ಬಂತು ಉತ್ತರ ಪ್ರದೇಶದಲ್ಲಿ ಯೋಗಿ ಗೆಲ್ಲೋದಿಲ್ಲ ಅಂದಿದ್ದರು. ಅಲ್ಲಿ ಸಂಪೂರ್ಣ ಬಹುಮತದಿಂದ ಬಿಜೆಪಿ ಗೆದ್ದಿತು ಎಂದರು.
ಪ್ರತಿ ಬಾರಿಯಂತೆ ಈ ಬಾರಿಯೂ ದೇವಿಯ ಆಶೀರ್ವಾದ ಪಡೆಯಲು ಸವದತ್ತಿಗೆ ಬಂದಿದ್ದೇನೆ . ಮನೆ ದೇವರಾದ ಯಲ್ಲಮ್ಮನ ದರ್ಶನ ಮಾಡಿ ದೇವಿ ಆಶೀರ್ವಾದ ಪಡೆಯಲು ಆಗಮಿಸಿದ್ದೇನೆ. ಈ ಸಂಪ್ರದಾಯವನ್ನು ಮೊದಲಿನಿಂದಲೂ ಪಾಲಿಸಿಕೊಂಡು ಬಂದಿದ್ದೇನೆ ಎಂದು ಹೇಳಿದರು.