ಲೋಕಸಭಾ ಚುನಾವಣೆ ನಡುವೆ ವಿದ್ಯುತ್ ಬಳಕೆದಾರರಿಗೆ ಗುಡ್ ನ್ಯೂಸ್ (Good news) ಸಿಕ್ಕಿದೆ. ಇಂದಿನಿಂದ ಕೆಇಆರ್ಸಿ (KERC) ನೂತನ ವಿದ್ಯುತ್ ಜಾರಿಗೆ ಬರಲಿದ್ದು, ಆ ಮೂಲಕ ನೂತನ ವಿದ್ಯುತ್ ದರ ಪರಿಷ್ಕರಣೆಯಾಗಲಿದೆ. 100 ಯೂನಿಟ್ಗಿಂತ (100 unit) ಹೆಚ್ಚಾಗಿ ವಿದ್ಯುತ್ ಬಳಕೆ ಮಾಡೋ ಗ್ರಾಹಕರಿಗೆ ಯುನಿಟ್ಗೆ ಒಂದು ರೂಪಾಯಿಗೆ 10 ಪೈಸೆ ಕಡಿತಗೊಳ್ಳಿದೆ. ಇನ್ನು 15 ವರ್ಷಗಳ (15 years) ಬಳಿಕ ವಿದ್ಯುತ್ ದರ ಇಳಿಕೆ ಕಂಡಿದ್ದು ಗ್ರಾಹಕರಿಗೆ ಕೊಂಚ ರಿಲೀಫ್ ಆಗಿದೆ.

15 ವರ್ಷದ ಬಳಿಕ ಎಲ್ಲಾ ವರ್ಗದ ಗ್ರಾಹಕರಿಗೆ ವಿದ್ಯುತ್ ಬಿಲ್ (current bill) ಸ್ವಲ್ಪ ಕಡಿತ ಕಂಡಿದೆ. ಗೃಹ ಬಳಕೆಯ (domestic use) 100 ಯೂನಿಟ್ಗಳಿಗಿಂತ ಹೆಚ್ಚು ವಿದ್ಯುತ್ ಬಳಸುವ ಗ್ರಾಹಕರಿಗೆ ಪ್ರತಿ ಯೂನಿಟ್ ಮೇಲೆ 1.10 ರೂ. ಇಳಿಕೆಯಾಗಿದೆ. ಗೃಹ ಬಳಕೆಯಲ್ಲಿ ಪ್ರಸ್ತುತ ಪ್ರತಿ ಯೂನಿಟ್ ದರ 7 ರೂ. ಇತ್ತು. ಈಗ ಗೃಹ ಬಳಕೆಯ ಶುಲ್ಕದ ಸ್ಲ್ಯಾಬ್ ರದ್ದು ಮಾಡಲಾಗಿದೆ. ಗ್ರಾಹಕರು ಎಷ್ಟೇ ಯೂನಿಟ್ ಖರ್ಚು ಮಾಡಿದರೆ ಪ್ರತಿ ಯೂನಿಟ್ಗೆ 5.90 ರೂ. ದರ ನಿಗದಿ ಮಾಡಲಾಗಿದೆ.

ಸರ್ಕಾರ 200 ಯೂನಿಟ್(200 unit) ಒಳಗೆ ಬಳಸುವವರಿಗೆ ಗೃಹಜ್ಯೋತಿ (gruha jyothi scheme) ಯೋಜನೆಯಡಿ ಉಚಿತ ವಿದ್ಯುತ್ ನೀಡುವುದರಿಂದ ಈ ಸೌಲಭ್ಯಕ್ಕೆ ಒಳಪಟ್ಟವರಿಗೆ ದರ ಇಳಿಕೆಯ ಪ್ರಯೋಜನ ಸಿಗುವುದಿಲ್ಲ.ಈ ಯೋಜನೆಯ ಸೌಲಭ್ಯ ಪಡೆಯದವರು ಹಾಗೂ ತಿಂಗಳಿಗೆ 100 ಯೂನಿಟ್ಗಿಂತ ಹೆಚ್ಚು ವಿದ್ಯುತ್ ಬಳಸುವವರಿಗೆ ಇದರ ಲಾಭ ಸಿಗಲಿದೆ.ಗ್ರಾಹಕರಿಗೆ ದರ ಕಡಿತದ ಲಾಭ ಏಪ್ರಿಲ್ (April) ಬಿಲ್ನಲ್ಲಿ ಬರುವುದಿಲ್ಲ. ಮೇ (may) ತಿಂಗಳಿನಲ್ಲಿ ಬರುವ ಬಿಲ್ನಲ್ಲಿ ಈ ದರ ಅನ್ವಯವಾಗಲಿದೆ.