ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಎರಡು ತಿಂಗಳು ಕಳೆದಿದೆ ಆದರೂ ಕೂಡ ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ ಪ್ರಕ್ರಿಯೆ ಮುಗಿದಿಲ್ಲ ಈವರೆಗೂ ಕೂಡ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಯಾರು ಎಂಬ ಗೊಂದಲ ಬಗೆಹರಿದಿಲ್ಲ ಕರ್ನಾಟಕದ ಇತಿಹಾಸದಲೇ ಮೊಟ್ಟ ಮೊದಲ ಬಾರಿಗೆ ವಿಪಕ್ಷ ನಾಯಕನಿಲ್ಲದೆ ಬಜೆಟ್ ಮಂಡನೆಯಾಗಿದೆ ಇದು ಬಿಜೆಪಿ ಪಾಳಯಕ್ಕೆ ಬಹುದೊಡ್ಡ ಮುಜುಗರದ ಸಂಗತಿಯಾಗಿತ್ತು.

ಈಗಾಗಲೇ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಿದ್ದು ನಾಳೆ ಅಂದರೆ ಸೋಮವಾರ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನಾ ಪ್ರಸ್ತಾಪದ ಜೊತೆಗೆ ಬಜೆಟ್ ಮೇಲಿನ ಚರ್ಚೆಯು ಕೂಡ ಶುರುವಾಗಲಿದೆ. ಹೀಗಾಗಿ ನಾಳೆಯು ಕೂಡ ಬಹುದೊಡ್ಡ ಮುಜುಗರದಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದಾಗಿ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಲು ಬಿಜೆಪಿಯ ಹೈಕಮಾಂಡ್ ಮುಂದಾಗಿದ್ದು ನಾಳೆಯ ಒಳಗೆ ಪ್ರತಿಪಕ್ಷ ನಾಯಕನ ಆಯ್ಕೆ ಆಗುವ ಸಾಧ್ಯತೆ ಇದೆ ಅಂತ ಬಿಜೆಪಿಯ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ

ಈ ಹಿಂದೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ದೆಹಲಿಗೆ ಕರೆಸಿಕೊಂಡಿದ್ದ ಬಿಜೆಪಿಯ ಹೈಕಮಾಂಡ್ ಪ್ರತಿಪಕ್ಷ ನಾಯಕನ ಆಯ್ಕೆಗೆ ಸಂಬಂಧಿಸಿದಂತೆ ಹಲವು ಹೊತ್ತು ದೀರ್ಘ ಮಾತುಕತೆಗಳನ್ನ ನಡೆಸಿತ್ತು ಇದಾದ ಬಳಿಕ ಹೈಕಮಾಂಡ್ ಬೆಂಗಳೂರಿಗೆ ವೀಕ್ಷಕರನ್ನ ಕಳುಹಿಸಿತ್ತು ಈ ವೇಳೆ ವೀಕ್ಷಕರಾಗಿ ಆಗಮಿಸಿದ್ದ ಕೇಂದ್ರ ಸಚಿವ ಮನಸು ಮಾಂಡವಿಯ ಮತ್ತು ಮಹಾರಾಷ್ಟ್ರ ಮಾಜಿ ಸಚಿವ ವಿನೋದ್ ತಾವಡೆ ಪ್ರತಿಪಕ್ಷ ನಾಯಕನ ಆಯ್ಕೆಯ ಸಂಬಂಧಿಸಿದಂತೆ ಬಿಜೆಪಿಯ ಎಲ್ಲಾ ಶಾಸಕರುಗಳಿಂದ ಅಭಿಪ್ರಾಯಗಳನ್ನು ಸಂಗ್ರಹ ಮಾಡಿ ವರಿಷ್ಠರಿಗೆ ತಲುಪಿಸಿದ್ದಾರೆ ಎನ್ನಲಾಗುತ್ತಿದೆ ಇಂದು ಸಂಜೆ ಅಥವಾ ನಾಳೆ ಬೆಳಗ್ಗೆಯ ಒಳಗಾಗಿ ವಿಧಾನ ಸಭೆಯ ಬಿಜೆಪಿ ನಾಯಕನ ಆಯ್ಕೆಯಾಗುವ ಸಾಧ್ಯತೆಗಳು ಇದೆ ಅಂತ ಬಿಜೆಪಿಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ
ಪುಟರಿಯಾಗಿ ಇಂದು ಅಥವಾ ನಾಳೆಯ ಒಳಗಾಗಿ ಬಿಜೆಪಿ ನಾಯಕನ ಆಯ್ಕೆ ಆಗಲಿದ್ದು ಹೀಗಾಗಿ ಬಿಜೆಪಿಯ ಒಳಗಡೆ ಚಟುವಟಿಕೆಗಳು ಗರಿಗೆದರಿದೆ ಸಾಕಷ್ಟು ಮಂದಿಗೆ ಯಾರು ನಾಯಕರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ ಇದಕ್ಕೆ ಉತ್ತರ ಬಿಜೆಪಿಯ ಹೈಕಮಾಂಡ್ ಸ್ಪಷ್ಟವಾಗಿ ನೀಡಲಿದೆ