ಮಿಜೋರಾಂ ಮತ ಎಣಿಕೆ ದಿನಾಂಕವನ್ನು ಡಿ.3 ರಿಂದ ಡಿ.4 ಕ್ಕೆ ಚುನಾವಣಾ ಆಯೋಗವು ಮುಂದೂಡಿದೆ.
ಮಧ್ಯಪ್ರದೇಶ, ಛತ್ತೀಸ್‌ಗಢ, ರಾಜಸ್ಥಾನ ಮತ್ತು ತೆಲಂಗಾಣದ ಮತ ಎಣಿಕೆ ದಿನವಾದ ಡಿ.3 ರಂದೇ ಮಿಜೋರಾಂ ಮತ ಎಣಿಕೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಡಿ.3 ಭಾನುವಾರ ಆಗಿರುವುದರಿಂದ ಮಿಜೋರಾಂ ನ ಬಹುಸಂಖ್ಯಾತ ಕ್ರೈಸ್ತರಿಗೆ ತಮ್ಮ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳಲು ತೊಂದರೆ ಆಗುತ್ತದೆ ಎಂದು ದಿನಾಂಕವನ್ನು ಮುಂದೂಡಲು ಬೇಡಿಕೆ ಇಡಲಾಗಿತ್ತು.
ಪ್ರಮುಖ ರಾಜಕೀಯ ಪಕ್ಷಗಳು, ನಾಗರಿಕ ಸಮಾಜಗಳ ಸಂಘಟನೆ ಮತ್ತು ಇತರರು ಚರ್ಚ್ ಕಾರ್ಯಕ್ರಮಗಳಿಗೆ ಹೊಂದಿಕೆಯಾಗುವ ಭಾನುವಾರದಂದು ಮತ ಎಣಿಕೆ ಮಾಡದೆ, ದಿನಾಂಕವನ್ನು ಬದಲಾಯಿಸುವಂತೆ ಚುನಾವಣಾ ಸಮಿತಿಯನ್ನು ಒತ್ತಾಯಿಸಿದ್ದರು.
“ಈ ಮನವಿಗಳನ್ನು ಪರಿಗಣಿಸಿದ ಆಯೋಗವು, 2023 ರ ಡಿಸೆಂಬರ್ 3 ರಿಂದ 2023 ರ ಡಿಸೆಂಬರ್ 4 ಕ್ಕೆ ಮಿಜೋರಾಂನ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆಯ ಎಣಿಕೆಯ ದಿನಾಂಕವನ್ನು ಪರಿಷ್ಕರಿಸಲು ನಿರ್ಧರಿಸಿದೆ” ಎಂದು ಚುನಾವಣಾ ಆಯೋಗವು ತಿಳಿಸಿದೆ.