ಬೆಂಗಳೂರು :ಏ.06: ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವ ಸಿನಿಮಾ ಕಲಾವಿದರ ಕಾರ್ಯಕ್ರಮಗಳ ಪ್ರಸಾರವನ್ನು ಚುನಾವಣೆ ಮುಗಿಯುವ ತನಕ ನಿಲ್ಲಿಸಬೇಕು ಎಂದು ಆಗ್ರಹಿಸಿ ಕೆ.ಆರ್.ಎಸ್ ಪಕ್ಷದ ಸಂಸ್ಥಾಪಕ ರವಿಕೃಷ್ಣಾ ರೆಡ್ಡಿ ಅವರು ಚುನಾವಣಾ ಆಯೋಗಕ್ಕೆ ಆಗ್ರಹಿಸಿದ್ದಾರೆ.



ಈ ಕುರಿತು ಚುನಾವಣಾ ಆಯೋಗಕ್ಕೆ ಪತ್ರ ಬರೆದಿರುವ ಅವರು, ಸಿನಿಮಾ ನಟರು, ಕಲಾವಿದರು ಎಲೆಕ್ಷನ್ ಪ್ರಚಾರದಲ್ಲಿ ಪಾಲ್ಗೊಳ್ಳುವುದನ್ನ ತಡೆಯಬೇಕು ಮತ್ತು ಅವರು ರಾಜಕೀಯ ಪಕ್ಷಗಳಿಂದ ಪಡೆಯುವ ಹಣದ ಬಗ್ಗೆ ತನಿಖೆ ನಡೆಸಬೇಕು ಒತ್ತಾಯಿಸಿದ್ದಾರೆ.