ಬಿಬಿಎಂಪಿ ಎಲೆಕ್ಷನ್ ಯಾವುದೇ ಕ್ಷಣದಲ್ಲಿ ಘೋಷಣೆಯಾಗೋ ಸಾಧ್ಯತೆ ಇದೆ. ಇದಕ್ಕೆ ಬೇಕಾದ ಸಿದ್ಧತೆಗಳನ್ನೂ ಚುನಾವಣಾಧಿಕಾರಿಗಳು ಮಾಡಿಕೊಳ್ತಿದ್ದಾರೆ. ಹೀಗಿರುವಾಗ ಚುನಾವಣೆ ಘೋಷಣೆಗೂ ಮುನ್ನವೇ ನಕಲಿ ವೋಟರ್ಸ್ ಗೆ ಚುನಾವಣಾ ಆಯೋಗ ಶಾಕ್ ನೀಡಿದೆ.
ಬಿಬಿಎಂಪಿ ಚುನಾವಣೆಗೂ ಮುನ್ನ ನಕಲಿ ವೋಟರ್ಸ್ಗೆ ಗೇಟ್ ಪಾಸ್
ಕಳೆದ ಬಾರಿಯ ಎಂಎಲ್ಎ ಎಲೆಕ್ಷನ್ನಲ್ಲಿ ನಕಲಿ ವೋಟರ್ ಐಡಿ ಬೆಂಗಳೂರು ವ್ಯಾಪ್ತಿಯಲ್ಲಿ ಭಾರಿ ಸದ್ದು ಮಾಡಿತ್ತು. ನಕಲಿ ವೋಟರ್ ಐಡಿ ಕಾರಣದಿಂದಾಗೇ ಆರ್ ಆರ್ ನಗರ ಎಲೆಕ್ಷನ್ ಸಹ ಮುಂದೂಡಿಕೆಯಾಗಿತ್ತು. ಈ ಹಿನ್ನಲೆ ಚುನಾವಣಾ ಆಯೋಗ ಈ ಬಾರಿ ಎಚ್ಚೆತ್ತುಕೊಂಡಿದೆ. ನಕಲಿ ಮತದಾರ ಗುರುತಿನ ಚೀಟಿಗೆ ಬ್ರೇಕ್ ಹಾಕೋಕೆ ನಾನಾರೀತಿಯ ಕಸರತ್ತು ಆರಂಭಿಸಿದೆ. ಅದ್ರಲ್ಲೊಂದಿಷ್ಟು ಸಕ್ಸಸ್ ಸಹ ಕಂಡಿದೆ. ನಿಜ ಬಿಬಿಎಂಪಿ ಎಲೆಕ್ಷನ್ ಘೋಷಣೆಗೂ ಮುನ್ನ ನಕಲಿ ವೋಟರ್ಸ್ ಚುನಾವಣಾಧಿಕಾರಿಗಳು ಶಾಕ್ ನೀಡಿದ್ದಾರೆ. ಎರಡು ಮೂರು ಕಡೆ ವೋಟರ್ ಐಡಿಗಳನ್ನ ಹೊಂದಿದ್ದವರ ವೋಟರ್ ಐಡಿ ರಾತ್ರೋ ರಾತ್ರಿ ಡಿಲೀಟ್ ಮಾಡಲಾಗಿದೆ.
ರಾತ್ರೋ ರಾತ್ರಿ ಡಿಲೀಟಾದ 4 ಲಕ್ಷ ನಕಲಿ ವೋಟರ್ ಐಡಿ ಕಾರ್ಡ್
ಬೆಂಗಳೂರು ವ್ಯಾಪ್ತಿಯಲ್ಲಿ ಬರೊಬ್ಬರಿ 4 ಲಕ್ಷ ವೋಟರ್ ಐಡಿಗಳನ್ನ ಚುನಾವಣಾಧಿಕಾರಿಗಳು ಕ್ಯಾನ್ಸಲ್ ಮಾಡಿದ್ದಾರೆ. ಹೀಗೆ ನಕಲಿ ವೋಟರ್ ಐಡಿ ಕಾರ್ಡ್ ಕಂಡುಹಿಡಿಯಲು ಫೇಸ್ ಕಂಪ್ಯಾರಿಷನ್ ಮೆಥಡ್ ಪ್ರಕ್ರಿಯೆ ಅನುಸರಿಸಲಾಗುತ್ತಿದೆ. ಐಡಿಕಾರ್ಡ್ನಲ್ಲಿ ಫೋಟೋ ಲಸಾಮ್ಯತೆ ಬಂದ ತಕ್ಷಣ ಪರಿಶೀಲಿಸಿ ಅಧಿಕಾರಿಗಳು ವೋಟರ್ ಐಡಿ ಡಿಲೀಟ್ ಮಾಡ್ತಿದ್ದಾರೆ. ಇನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಕಳೆದ ಕೆಲವೇ ದಿನಗಳಲ್ಲಿ 4 ಲಕ್ಷ ವೋಟರ್ ಐಡಿಗಳನ್ನ ಅಧಿಕಾರಿಗಳು ಡಿಲೀಟ್ ಮಾಡಿದ್ದಾರೆ.
ಸದ್ಯ ಆಧಾರ್ ಗೆ ವೋಟರ್ ಐಡಿ ಕಾರ್ಡ್ ಲಿಂಕ್ ಮಾಡೋ ಪ್ರಕ್ರೀಯೆಯೂ ಚಾಲನೆಯಲ್ಲಿದೆ. ಅದ್ರಲ್ಲೂ ಸಹ ನಕಲಿ ವೋಟರ್ ಐಡಿ ಕಾರ್ಡ್ ಪತ್ತೆಯಾಗುತ್ತೆ. ಇದರ ಜೊತೆಗೆ ದೊಡ್ಡ ಪ್ರಮಾಣದಲ್ಲಿ ಫೋಟೋ ಕಂಪ್ಯಾರಿಷನ್ ನಡೆಸ್ತಿರೋದ್ರಿಂದ ನಕಲಿ ವೋಟರ್ ಐಡಿ ಪತ್ತೆಯಾಗ್ತಿದೆ. ಇಲ್ಲಿ ಕೆಲವರು ಮನೆ ಬದಲಾವಣೆ ಕಾರಣದಿಂದ ಎರಡೆರಡು ಕಡೆ ಐಡಿ ಕಾರ್ಡ್ ಹೊಂದಿರೋದು ಬೆಳಕಿಗೆ ಬಂದಿದೆ. ಹೀಗೆ ಉದ್ದೇಶಪೂರ್ವಕವಲ್ಲದೆಯೂ ಜನ ಎರಡೆರಡು ವೋಟರ್ ಐಡಿ ಹೊಂದಿದ್ದಾರೆ. ಆದರೆ ಈಗ ಫೋಟೋ ಕಂಪ್ಯಾರಿಷನ್ ವೇಳೆ ಒಬ್ಬ ವ್ಯಕ್ತಿ ಒಂದೇ ವೋಟರ್ ಐಡಿಕಾರ್ಡ್ ಹೊಂದುವಂತೆ ಎಲೆಕ್ಷನ್ ಕಮಿಷನ್ ನೋಡಿಕೊಳ್ತಿದೆ.