ಡಸ್ಟ್ ಅಲರ್ಜಿ ಅನ್ನುವಂಥದ್ದು ಇತ್ತೀಚಿನ ದಿನಗಳಲ್ಲಿ ತುಂಬಾನೇ ಕಾಮನ್ ಸಮಸ್ಯೆಯಾಗಿದೆ, ದೊಡ್ಡವರು ಮಾತ್ರವಲ್ಲದೆ ಚಿಕ್ಕ ಮಕ್ಕಳಿಗೂ ಬೇಗನೆ ಉಂಟಾಗುತ್ತದೆ.ಇನ್ನು ಡಸ್ಟ್ ಅಲರ್ಜಿ ಪ್ರಮುಖ ಸಿಂಟಮ್ಸ್ ಗಳು ಯಾವುದೆಂದರೆ ಸೀನುವಿಕೆ, ಸ್ರವಿಸುವ ಮೂಗು, ಕಿರಿಕಿರಿಯುಂಟುಮಾಡುವ ಕಣ್ಣುಗಳು, ಗಂಟಲು ಕಿರಿ ಕಿರಿ,ಕೆಮ್ಮು, ಉಬ್ಬಸ ಮತ್ತು ಉಸಿರಾಟದ ತೊಂದರೆ. ಡಸ್ಟ್ ಅಲರ್ಜಿಯಿಂದಾಗಿ ಅಸ್ತಮಾ ಕೂಡ ಹೆಚ್ಚಾಗುತ್ತದೆ. ಕೆಲವರಿಗೆ ಹೊರಗಡೆಯ ಪೊಲ್ಲ್ಯೂಷನ್ ಇಂದ ಡಸ್ಟ್ ಅಲರ್ಜಿ ಯಾತ್ರೆ ಮನೆಯಲ್ಲಿದ್ದರೂ ಕೂಡ ಈ ಅಲರ್ಜಿ ಆಗುವಂತಹ ಚಾನ್ಸಸ್ ಹೆಚ್ಚಿರುತ್ತದೆ ಹೇಗೆ ಅನ್ನುವವರ ಪ್ರಶ್ನೆಗೆ ಉತ್ತರ ಇಲ್ಲಿದೆ.

- ಮನೆಯಲ್ಲಿ ಕಸ ಗುಡಿಸುವಾಗ ಅಥವಾ ಧೂಳುಗೊಳಿಸುವಾಗ ಚಿಕ್ಕ ಪಾರ್ಟಿಕಲ್ಸ್ ನಮ್ಮ ದೇಹದೊಳಗೆ ಸೇರಿದಾಗ ಇದರಿಂದಾಗಿ ಡಸ್ಟ್ ಅಲರ್ಜಿ ಉಂಟಾಗುತ್ತದೆ ಹಾಗೂ ನೆಗಡಿ ಗಂಟಲು ಕಿರಿಕಿರಿ ಕಾಡುತ್ತದೆ.
- ಮಲಗುವ ವೇಳೆಯಲ್ಲಿ ನಾವು ಬಳಸುವಂತಹ ಬ್ಲಾಂಕೆಟ್ ಅಥವಾ ಬೆಡ್ ಶೀಟ್ ಇಂದನು ಕೂಡ ಡಸ್ಟ್ ಅಲರ್ಜಿ ಉಂಟಾಗುತ್ತದೆ. ಹಾಗಾಗಿ ತಪ್ಪದೇ ವಾರಕ್ಕೊಮ್ಮೆ ಬೆಡ್ ಶೀಟ್ ಹಾಗೂ ಬ್ಲಾಂಕೆಟ್ ಚೇಂಜ್ ಮಾಡುವುದು ಉತ್ತಮ.
- ಮನೆಯ ಕಿಟಕಿಗಳಿಗೆ ಬಳಸಲಾಗಿರುವಂತಹ ಕರ್ಟನ್ ಧೂಳಿನಿಂದಲೂ ಕೂಡ ಬೆಸ್ಟ್ ಅಲರ್ಜಿ ಆಗುವಂಥ ಚಾನ್ಸಸ್ ಜಾಸ್ತಿ ಇರುತ್ತದೆ ಹಾಗಾಗಿ ಆಗಾಗ ಕರ್ಟನ್ ಗಳನ್ನ ವಾಶ್ ಮಾಡ್ತಾ ಇರಬೇಕು ಅಥವಾ ಚೇಂಜ್ ಮಾಡುವುದು ಉತ್ತಮ.
- ಇನ್ನು ಮಕ್ಕಳು ಹೊರಗಡೆ ಆಟವಾಡುವ ವೇಳೆ ಡೆಸ್ಟ್ ಅಲರ್ಜಿ ಹೆಚ್ಚಾಗುತ್ತದೆ ಇದರ ಬಗ್ಗೆ ತಾಯಿ ತಂದೆಯರು ಹೆಚ್ಚಿನ ಕಾಳಜಿ ವಹಿಸುವುದು ಉತ್ತಮ.
- ಮನೆಯೊಳಗೆ ಮಕ್ಕಳು ಆಟವಾಡಲು ಇರುವಂತಹ ಡಾಲ್ಗಳಿಂದ ಉದಾಹರಣೆಗೆ ಟೆಡ್ಡಿಬೇರ್ ನಂತಹ ಗೊಂಬೆಗಳಿಂದ ಕೂಡ ಡಸ್ಟ್ ಅಲರ್ಜಿ ಆಗುತ್ತದೆ. ಇವುಗಳಲ್ಲಿನ ಚಿಕ್ಕ ಪಾರ್ಟಿಕಲ್ಸ್ ದೇಹದೊಳಗೆ ಹೋದಾಗ ಸೀನುವಿಕೆ, ಸ್ರವಿಸುವ ಮೂಗು, ಕಿರಿಕಿರಿಯುಂಟುಮಾಡುವ ಕಣ್ಣುಗಳು, ಗಂಟಲು ಕಿರಿ ಕಿರಿ ಹೆಚ್ಚಾಗುತ್ತದೆ.
- ಇನ್ನು ಟ್ರಾವೆಲ್ ಮಾಡುವಾಗ ಬಿಸಿಲಿನಲ್ಲಿ ಅಥವಾ ಧೂಳಿನಲ್ಲಿ ಹೆಚ್ಚು ಓಡಾಡುವುದರಿಂದ ಕೂಡ ಡಸ್ಟ್ ಅಲರ್ಜಿ ಆಗುತ್ತದೆ.

ಒಟ್ಟಿನಲ್ಲಿ ಡಸ್ಟ್ ಅಲರ್ಜಿ ಪ್ರಾಬ್ಲಮ್ ನಿಮಗಿದೆ ಎಂದು ತಿಳಿದಿದ್ದರೆ, ಯಾವುದೇ ಕೆಲಸವನ್ನ ಮಾಡುವಾಗ ಮಾಸ್ಕ್ ಧರಿಸುವುದು ಉತ್ತಮ.