ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ಕಾರಿಗೆ ಹಿಟ್ ಅಂಡ್ ರನ್ ಮಾಡಿದ್ದ ಆರೋಪಿಯನ್ನು ಕೊನೆಗೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸಚಿವೆಯ ಕಾರಿಗೆ ಗುಡ್ಡಿ ಲಾರಿ ನಿಲ್ಲಿಸಿದೆ ಎಸ್ಕೇಪ್ ಆಗಿದ್ದ ಆಸಾಮಿಯನ್ನು ೩ ತಿಂಗಳ ಬಳಿಕ ಪೊಲೀಸರು ಲಾಕ್ ಮಾಡಿದ್ದಾರೆ. ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ಗ್ರಾಮದ ಮಧುಕರ ಸೋಮವಂಶಿ ಎಂಬಾತನನ್ನು ಅರೆಸ್ಟ್ ಮಾಡಲಾಗಿದೆ.ಇನ್ನು ಅಪಘಾತ ಎಸಗಿದ ಲಾರಿಯನ್ನೂ ಕೂಡ ಕಿತ್ತೂರು ಠಾಣೆ ಪೊಲೀಸರು ಜಪ್ತಿ ಮಾಡಿದ್ದಾರೆ.

ಜ. 14 ರಂದು ಬೆಳಗಿನ ಜಾವ ಸಚಿವೆ ಹೆಬ್ಬಾಳ್ಕರ್ ಕಾರಿಗೆ ಲಾರಿ ತಾಗಿಸಿ ಚಾಲಕ ಪರಾರಿಯಾಗಿದ್ದ. ಬೆಂಗಳೂರಿನಿಂದ ಬೆಳಗಾವಿಗೆ ಬರುವಾಗ ಕಿತ್ತೂರು ಸಮೀಪದ ಅಂಬಡಗಟ್ಟಿಯಲ್ಲಿ ಈ ಅಪಘಾತ ಸಂಭವಿಸಿತ್ತು.ಈ ಘಟನೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೆನ್ನಿಗೆ ಗಂಭೀರ ಗಾಯವಾಗಿತ್ತು.ಹೀಗಾಗಿ ಈ ಕುರಿತು ಕಿತ್ತೂರು ಠಾಣೆಯಲ್ಲಿ ಸಚಿವೆ ಹೆಬ್ಬಾಳ್ಕರ್ ಕಾರು ಚಾಲಕ ಶಿವಪ್ರಸಾದ್ ದೂರು ದಾಖಲಿಸಿದ್ದರು.ಈ ದೂರಿನ ಅನ್ವಯ ಪ್ರಕರಣದ ವಿಚಾರಣೆ ಆರಂಭಿಸಿದ್ದ ಕಿತ್ತೂರು ಠಾಣೆ ಪೊಲೀಸರು ಹಿರೇಬಾಗೇವಾಡಿ ಟೋಲ್ ಬಳಿಯ ಸಿಸಿ ಟಿವಿ ದೃಶ್ಯಾವಳಿ ಆಧರಿಸಿ 69 ಲಾರಿ ಚಾಲಕರ ವಿಚಾರಣೆ ನಡೆಸಿದ್ದರು.

ಈ ವೇಳೆ ಮೊದಲು ಅಪಘಾತ ಎಸಗಿಲ್ಲ ಎಂದಿದ್ದ ಚಾಲಕ ಮಧುಕರ ಸೋಮವಂಶಿ ತಪ್ಪೊಪ್ಪಿಕೊಂಡಿರಲಿಲ್ಲ.ಆ ನಂತರ ಅಪಘಾತದಲ್ಲಿ ಭಾಗಿಯಾದ ವಾಹನದ ಬಣ್ಣ ಎಫ್ಎಸ್‌ಎಲ್‌ಗೆ ರವಾನೆ ಮಾಡಲಾಗಿ ವಲಕ ಸಿಕ್ಕಿಬಿದ್ದಿದ್ದಾನೆ.ಅಲ್ಲದೇ ಘಟನೆ ವೇಳೆ ಫೋನ್ ಕಾಲ್ ಡಿಟೇಲ್ ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ.






