ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಿ.ಎಸ್ ಯಡಿಯೂರಪ್ಪರನ್ನು ಯಾವುದಾದ್ರೂ ಒಂದು ರಾಜ್ಯಕ್ಕೆ ರಾಜ್ಯಪಾಲರನ್ನಾಗಿ ನೀಮಿಸಲಾಗುತ್ತದೆ ಎಂಬ ಸುದ್ದಿ ಇತ್ತೀಚೆಗೆ ತುಸು ಹೆಚ್ಚೇ ಹರಿದಾಡುತ್ತಿತ್ತು.
ಆದರೆ, ಇಂದು ತನ್ನ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಾತಾಡಿದ ಬಿ.ಎಸ್ ಯಡಿಯೂರಪ್ಪ ಅವರು, ಯಾವುದೇ ಕಾರಣಕ್ಕೂ ನಾನು ರಾಜ್ಯಪಾಲ ಸೇರಿದಂತೆ ಯಾವುದೇ ಕೇಂದ್ರದ ಹುದ್ದೆ ಒಪ್ಪಿಕೊಳ್ಳುವುದಿಲ್ಲ. ಬದಲಿಗೆ ರಾಜ್ಯದಲ್ಲೇ ಇದ್ದು ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಹೊಸ ಸಿಎಂ ಘೋಷಣೆಗೆ ಬಿಜೆಪಿ ವರಿಷ್ಠರ ಮೀನಾಮೇಷ ಏಕೆ?
ನನಗೆ ಹಲವು ಬಾರಿ ಕೇಂದ್ರಕ್ಕೆ ಬರುವಂತೆ ರಾಷ್ಟ್ರೀಯ ನಾಯಕರು ಕೇಳಿಕೊಂಡಿದ್ದರು. ಒಮ್ಮೆ ಮಾಜಿ ಪ್ರಧಾನ ಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರೇ ಖುದ್ದು ಕೇಂದ್ರ ಸಚಿವ ಸ್ಥಾನ ನೀಡಿದಾಗಲೂ ಬೇಡ ಅಂದಿದ್ದೆ. ಈಗಲೂ ಅದೇ ನಿರ್ಧಾರಕ್ಕೆ ಬದ್ಧನಾಗಿದ್ದೇನೆ. ನನಗೆ ಯಾವುದೇ ಕೇಂದ್ರದ ಹುದ್ದೆ ಬೇಡ. ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡುತ್ತೇನೆ ಹೊರತು ಇನ್ನೊಂದು ರಾಜ್ಯದ ರಾಜ್ಯಪಾಲನಾಗುವುದಿಲ್ಲ ಎಂದರು.

ಸಿಎಂ ಪುತ್ರ ವಿಜಯೇಂದ್ರಗೆ ದೆಹಲಿಯಲ್ಲಿ ಸಿಕ್ಕ ಸೂಚನೆ ಏನು?
ರಾಷ್ಟ್ರೀಯ ನಾಯಕರ ಬಳಿ ಯಾವುದೇ ಸ್ಥಾನಮಾನ ಕೇಳಿಲ್ಲ. ನನಗೆ ಈ ರಾಜ್ಯಪಾಲರ ಹುದ್ದೆಯೂ ಬೇಡ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಗೆಲ್ಲಿಸಿಕೊಂಡು ಬರೋದು ನನ್ನ ಜವಾಬ್ದಾರಿ ಎನ್ನುವ ಮೂಲಕ ರಾಜ್ಯಪಾಲರಾಗೋದಿಲ್ಲ ಎಂದು ಚರ್ಚೆಗೆ ತೆರೆ ಎಳೆದರು.
ರಾಜೀನಾಮೆ ಬಳಿಕ ಯಡಿಯೂರಪ್ಪರನ್ನು ಗೌರವಯುತವಾಗಿ ನಡೆಸಿಕೊಳ್ಳಲು ಕೇಂದ್ರದ ನಾಯಕರು ರಾಜ್ಯಪಾಲರ ಹುದ್ದೆ ನೀಡುತ್ತದೆ ಎನ್ನಲಾಗಿತ್ತು. ಬಿ.ಎಸ್ ಯಡಿಯೂರಪ್ಪ ನೆರೆ ರಾಜ್ಯ ಆಂಧ್ರಪ್ರದೇಶದ ಗವರ್ನರ್ ಆಗಲಿದ್ದಾರೆಂಬ ವಿಚಾರ ಭಾರೀ ಸದ್ದು ಮಾಡಲು ಆರಂಭಿಸಿತ್ತು.
ಮುಖ್ಯಮಂತ್ರಿ ಪದವಿಗೆ ರಾಜಿನಾಮೆ ನೀಡುವುದಾಗಿ ಘೋಷಿಸಿದ ಬಿಎಸ್ ಯಡಿಯೂರಪ್ಪ
ಇನ್ನು, ಬಿ.ಎಸ್ ಯಡಿಯೂರಪ್ಪ ಆಂಧ್ರದ ರಾಜ್ಯಪಾಲರು ಆಗಲಿದ್ದಾರೆ ಎಂಬ ವಿಚಾರ ಭಾರೀ ಚರ್ಚೆಯಾಯ್ತು. ಸುಮಾರು ಎರಡು ತಿಂಗಳಿನಿಂದ ತೆಲುಗು ಮಾಧ್ಯಮಗಳಲ್ಲಿ ಇದೇ ವಿಚಾರ ಚರ್ಚೆಯಾಗುತ್ತಿತ್ತು.
ಇತ್ತೀಚೆಗೆ ಆಂಧ್ರದ ರಾಜ್ಯಪಾಲ ಬಿಶ್ವಭೂಷಣ ಅವರ ಅವಧಿ ಜುಲೈ 23ಕ್ಕೆ ಅಂತ್ಯಗೊಂಡಿದೆ. ಹೀಗಾಗಿ ಇವರ ಹುದ್ದೆಗೆ ಬಿ. ಎಸ್ ಯಡಿಯೂರಪ್ಪ ಹೆಸರು ಮುನ್ನಲೆಗೆ ಬಂದಿತ್ತು. ಆಂಧ್ರದಲ್ಲಿ ಬಿ.ಎಸ್ ಯಡಿಯೂರಪ್ಪ ಮತ್ತಷ್ಟು ಬೆಳೆಸಿ ಮುಂದಿನ ಚುನಾವಣೆ ಗೆಲ್ಲಬೇಕು ಎಂಬುದು ಬಿಜೆಪಿ ಪ್ಲಾನ್ ಆಗಿತ್ತು.
ಆದರೆ, ಸುದೀರ್ಘ ರಾಜಕಾರಣದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಬಿಎಸ್ ಯಡಿಯೂರಪ್ಪ ಅವರಿಗೆ ನಾಮಾಕವಸ್ಥೆ ಹುದ್ದೆಯಲ್ಲಿರುವುದು ಕಿಂಚಿತ್ತು ಇಷ್ಟವಿಲ್ಲ ಎನ್ನಲಾಗಿದೆ. ಹಾಗಾಗಿ, ರಾಜ್ಯಪಾಲ ಸೇರಿದಂತೆ ಅಂತಹ ಹುದ್ದೆಗಳನ್ನು ಯಡಿಯೂರಪ್ಪ ನಿರಾಕರಿಸಿ ರಾಜ್ಯ ರಾಜಕಾರಣದಲ್ಲೇ ಮುಂದುವರೆಯುವುದಾಗಿ ತಿಳಿಸಿದ್ದಾರೆ.
 
			
 
                                 
                                 
                                
