ನ್ಯಾಯಾಂಗಕ್ಕೆ ಉಪದೇಶ ಮಾಡಲು ಬರಬೇಡಿ ಎಂದು ಸುಪ್ರೀಂಕೋರ್ಟ್, ಭೂಗತ ಪಾತಕಿ ಅಬು ಸಲೇಂ ಪ್ರಕರಣದಲ್ಲಿ ಸಲಹೆ ನೀಡಿದ ಕೇಂದ್ರ ಸರಕಾರಕ್ಕೆ ಚಾಟಿ ಬೀಸಿದೆ.
ಅಬು ಸಲೇಂಗೆ ೨೫ ವರ್ಷಗಳ ಶಿಕ್ಷೆ ವಿಧಿಸುವ ಕುರಿತು ನಿರ್ಧರಿಸಲು ನಮಗೆ ಇದು ಸೂಕ್ತ ಸಮಯವಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ನೀಡಿದ ವರದಿಗೆ ಅಸಮಾಧಾನ ವ್ಯಕ್ತಪಡಿಸಿದ ಸುಪ್ರೀಂಕೋರ್ಟ್, ನಾವು ಏನು ನಿರ್ಧರಿಸಬೇಕು ಎಂಬ ಬಗ್ಗೆ ನೀವು ನಿರ್ಧರಿಸುತ್ತೇವೆ ಎಂಬ ನಿಲುವು ಸರಿಯಲ್ಲ ಎಂದು ಹೇಳಿದೆ.

ಪ್ರಕರಣದ ಕುರಿತು ತೀರ್ಮಾನ ಕೈಗೊಳ್ಳುವ ಕುರಿತು ನಮಗೆ ಹೇಳುವ ಯಾವುದೇ ಅಧಿಕಾರ ಗೃಹ ಸಚಿವಾಲಯಕ್ಕೆ ಇಲ್ಲ. ಇಂತಹ ಉತ್ತರಗಳನ್ನ ನಾವು ನಿರೀಕ್ಷಿಸುವುದಿಲ್ಲ ಮತ್ತು ಸೌಮ್ಯವಾಗಿ ತೆಗೆದುಕೊಳ್ಳುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.





