• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 16, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬೆಂಗಳೂರಿನಲ್ಲೊಂದು ಅಮಾನವೀಯ ಘಟನೆ : ಬೀದಿ ನಾಯಿ ಮೇಲೆ ಕಾರು ಹರಿಸಿದ ಕಾರು ಚಾಲಕ !

Any Mind by Any Mind
April 21, 2022
in ಕರ್ನಾಟಕ
0
ಬೆಂಗಳೂರಿನಲ್ಲೊಂದು ಅಮಾನವೀಯ ಘಟನೆ : ಬೀದಿ ನಾಯಿ ಮೇಲೆ ಕಾರು ಹರಿಸಿದ ಕಾರು ಚಾಲಕ !
Share on WhatsAppShare on FacebookShare on Telegram

ಅದೊಂದು ಬಡಜೀವ ಕೊಂಚ ತಾಳಿದರೆ ಬದುಕಿ ಉಳಿಯುತ್ತಿತ್ತು. ಆದರೆ ಕಾರು ಚಾಲಕನ ನಿರ್ಲಕ್ಷ್ಯವೋ..? ಉದ್ದಟತನವೋ..? ಆ ಜೀವ ನಡು ರಸ್ತೆಯಲ್ಲೇ ಒದ್ದಾಡಿ ಉಸಿರು ಚೆಲ್ಲಿದೆ. ಹೌದು, ನಗರದಲ್ಲಿ ಜ್ಞಾನಭಾರತಿಯಲ್ಲಿ ಬೀದಿ ನಾಯಿ ಮೇಲೆ ಕಾರು ಹತ್ತಿಸಿ, ನಾಯಿ ಸಾವಿಗೀಡಾದ ಘಟನೆ ನಡೆದಿದೆ. 

ADVERTISEMENT

ಅದು ಏಪ್ರಿಲ್ 19, ಬೆಳಗ್ಗೆ 9 ಗಂಟೆ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ನಾಗದೇವನಹಳ್ಳಿಯ ಸರ್ ಎಂವಿ ಲೇಔಟ್ ನ ಮೊದಲ ಬ್ಲಾಕ್ ನಲ್ಲಿ ಬೀದಿ ನಾಯಿ ಮೇಲೆ ಕಾರು ಚಾಲಕನೊಬ್ಬ ಕಾರು ಹರಿಸಿ ಪರಾರಿಯಾಗಿದ್ದಾನೆ. ಪರಿಣಾಮ, ಆ ಮೂಕಪ್ರಾಣಿ ನೋವಿನೊಂದಿಗೆ ವಿಲವಿಲ ಒದ್ದಾಡಿ ಪ್ರಾಣ ಚೆಲ್ಲಿದೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆ ಭೀಕರ ಘಟನೆ ಮನಕಲಕುವಂತಿದೆ. ಹೌದು, ಆ ಕಾರು ಚಾಲಕ ಒಂದು ಕ್ಷಣ ಕಾರು ನಿಲ್ಲಿಸಿ ಬಿಟ್ಟಿದ್ದರೆ ಆ ಜೀವ ಬದುಕುಳಿಯುತ್ತಿತ್ತು. ಆದರೆ ಕಾರು ಚಾಲಕನ ಅಸಡ್ಡೆಗೆ ಬೀದಿ ನಾಯಿ ಬಲಿಯಾಗಿದೆ.

ಈ ಘಟನೆ ನಡೆಯುವ ವೇಳೆ ಯಶು ಎಂಬ ಯುವಕ ಅಲ್ಲೇ ಪಕ್ಕದಲ್ಲಿದ್ದ. ಕಾರಿನ ಗಾಲಿಗೆ ಸಿಲುಕಿ ಒದ್ದಾಡುತ್ತಿದ್ದ ನಾಯಿಗೆ ತಕ್ಷಣವೇ ನೀರು ಕುಡಿಸಿ, ಬದುಕಿಸುವ ಪ್ರಯತ್ನ ಮಾಡಿದ್ದರೂ ಕೂಡ ಜೀವ ಉಳಿಯಲಿಲ್ಲ. ಅಲ್ಲೇ ಪಕ್ಕದಲ್ಲಿ ಜನರಲ್ ಸ್ಟೋರ್ ಇಟ್ಟುಕೊಂಡಿರುವ ಯಶ್ ಅಂಗಡಿಗೆ ಪ್ರತಿ ದಿನ ಈ ನಾಯಿ ಹೋಗುತ್ತಿತ್ತು. ಇದನ್ನು ನೆನೆಸಿಕೊಂಡು ಸಂಕಟಪಟ್ಟ ಯಶು, ಪ್ರತಿ ದಿನ ಈ ನಾಯಿಗೆ ಊಟ ಕೊಡುತ್ತಿದ್ದೆವು. ಕಾರು ಚಾಲಕ ಮನಸ್ಸು ಮಾಡಿದ್ದರೆ ನಾಯಿ ಬದುಕುಳಿಯುತ್ತಿತ್ತು ಎಂದಿದ್ದಾನೆ.

ಘಟನೆ ನಡೆದ ದಿನ ಸಂಜೆ ರಾಮಚಂದ್ರ ಭಟ್ಟ ಎಂಬವರಿಗೆ ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಪಡೆದುಕೊಂಡು ಸಿಸಿಟಿವಿ ರಿಕವರಿ ಮಾಡಿಕೊಂಡಿದ್ದಾರೆ. ಸಿಸಿಟಿವಿ ಆಧರಿಸಿ ಜ್ಞಾನಭಾರತಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಲು ಮುಂದಾಗಿದ್ದಾರೆ. ಆರಂಭದಲ್ಲಿ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರಂತೆ. ಬಳಿಕ ಪ್ರಾಣಿ ಸಂಘದ ಸಹಾಯದಿಂದ ದೂರು ದಾಖಲಿಸಿ FIR ದಾಖಲಿಸಿದ್ದಾರೆ. ಅಲ್ಲದೆ ಕಾರು ಸೀಜ್ ಮಾಡುವುದಲ್ಲದೆ, ಕಾರು ಚಾಲಕನ ಲೈಸೆನ್ಸ್ ರದ್ದು ಮಾಡುವಂತೆ ಆಗ್ರಹಿಸಿದ್ದಾರೆ.

ಈ ಹಿಂದೆಯೂ ರಾಜಧಾನಿ ಬೆಂಗಳೂರಿನಲ್ಲಿ ಇಂಥಾ ಹಲವು ಘಟನೆಗಳು ನಡೆದಿವೆ. ಬೀದಿ ನಾಯಿಗಳ ಮೇಲೆ ಏಕಾಏಕಿ ಕಾರು ಚಲಾಯಿಸಿ ಕೊಂದವರಿದ್ದಾರೆ. ಈಗ ಅದು ಮುಂದುವರೆದಿದೆ. ಇಲ್ಲಿ ನಮ್ಮಂಥೆ ಮೂಕಪ್ರಾಣಿಗಳೂ ಬದುಕುವ ಹಕ್ಕಿದೆ‌. ಅದನ್ನು ಕಾರು ಚಾಲಕರು ಗಮನದಲ್ಲಿಟ್ಟುಕೊಂಡು ಕಾರು ಚಲಾಯಿಸಿದರೆ ಬಡ ಜೀವಗಳು ಬಾಳಿ ಬದುಕುತ್ತದೆ.

Tags: accidentinhumanity
Previous Post

ಅಲ್ಪಸಂಖ್ಯಾತರ ಕಡೆಗಣನೆ; ಸಮಾಜವಾದಿ ಪಕ್ಷಕ್ಕೆ ರಾಜೀನಾಮೆ ನೀಡಿದ ಮುಸ್ಲಿಂ ನಾಯಕರು

Next Post

ನಮಗೆ ಉಪದೇಶ ಮಾಡಲು ಬರಬೇಡಿ: ಕೇಂದ್ರಕ್ಕೆ ಸುಪ್ರೀಂ ಚಾಟಿ!

Related Posts

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..
Top Story

ಕುಡಿಯುವ ನೀರಿಗೆ ತೊಂದರೆಯಾದ್ರೆ ಡಿಸಿಗಳೇ ಹೊಣೆ : ಹೈ ವೋಲ್ಟೇಜ್‌ ಸಭೆಯಲ್ಲಿ ಸಿಎಂ ಖಡಕ್‌ ಸೂಚನೆ..

by ಪ್ರತಿಧ್ವನಿ
April 16, 2026
0

ಬೆಂಗಳೂರು :  ರಾಜ್ಯದ ಐದು ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಕೊರತೆ ನಿರೀಕ್ಷಿಸಲಾಗಿದ್ದು, ಕುಡಿಯುವ ನೀರಿಗೆ ತೊಂದರೆಯಾಗದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ  ಮುಖ್ಯಮಂತ್ರಿ...

Read moreDetails
ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

ಮುಸ್ಲಿಮರಿಗೆ ಧರ್ಮಾಧಾರಿತ ಯಾವುದೇ ಮೀಸಲಾತಿ ಅಸಂವಿಧಾನಿಕ : ಬೇಕಾದ್ರೆ ನಿಮ್ಮ ಎಲ್ಲಾ ಟಿಕೆಟ್‌ ಅವರಿಗೇನೆ ಕೊಟ್ಬಿಡಿ : ಅಖಿಲೇಶ್‌ಗೆ ತಿವಿದ ಅಮಿತ್ ಶಾ..

April 16, 2026
ಎಸ್‌ಎಸ್‌ಎಲ್‌ಸಿ ಪರೀಕ್ಷೆ: ತೃತೀಯ ಭಾಷೆಗೆ ಅಂಕಗಳ ಬಗ್ಗೆ ಹೈಕೋರ್ಟ್ ನಿರ್ದೇಶನ ಇಲ್ಲಿದೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ತೃತೀಯ ಭಾಷೆಗೆ ಅಂಕಗಳ ಬಗ್ಗೆ ಹೈಕೋರ್ಟ್ ನಿರ್ದೇಶನ ಇಲ್ಲಿದೆ

April 16, 2026
ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

ವಿಜಯಪುರದಲ್ಲಿ ಗುಂಡಿನ ಸದ್ದು; ಗ್ರಾಮ ಪಂಚಾಯಿತಿ ಸದಸ್ಯನ ಹತ್ಯೆ

April 14, 2026
ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

ಸಂಪೂರ್ಣವಾಗಿ ಸಮಾನತೆಯನ್ನು ಸಾಧಿಸಲಾಗಿಲ್ಲ ಎನ್ನುವುದು ನನ್ನ ನೋವಾಗಿದೆ : ಸಿಎಂ ಸಿದ್ದರಾಮಯ್ಯ ಬೇಸರ..!

April 14, 2026
Next Post
ವಿದೇಶದಿಂದ ದಾನ ಪಡೆಯುವುದು ಸರಿಯಲ್ಲ: ಎಫ್‌ ಸಿಆರ್‌ ಎ ಬಗ್ಗೆ ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು

ನಮಗೆ ಉಪದೇಶ ಮಾಡಲು ಬರಬೇಡಿ: ಕೇಂದ್ರಕ್ಕೆ ಸುಪ್ರೀಂ ಚಾಟಿ!

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada