• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

CM Siddaramaiah: ಕನಕದಾಸರ ಆದರ್ಶಗಳನ್ನು ಕೇಳಿ ಮರೆಯಬಾರದು: ಜೀವನದಲ್ಲಿ ಅಳವಡಿಸಿಕೊಳ್ಳಿ..!!

ಪ್ರತಿಧ್ವನಿ by ಪ್ರತಿಧ್ವನಿ
October 17, 2025
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ
0
Share on WhatsAppShare on FacebookShare on Telegram

ಕನಕದಾಸರು- ನಾರಾಯಣಗುರು ಆದರ್ಶಗಳನ್ನು ಜೀವನದಲ್ಲಿ ಪಾಲಿಸಿ: ಸಿ.ಎಂ. ನಾರಾಯಣಗುರು ಆದರ್ಶಗಳನ್ನು ಕೇವಲ ಕೇಳಿ ಎದ್ದು ಹೋಗಬಾರದು. ಅವನ್ನು ಜೀವನದಲ್ಲಿ ಪಾಲಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಕರೆ ನೀಡಿದರು.

ADVERTISEMENT

ಮಲ್ಲತ್ತಳ್ಳಿಯ ಕಲಾಗ್ರಾಮದಲ್ಲಿ ನಡೆದ “ಕನಕ‌ ಕಾವ್ಯ ದೀವಿಗೆ” ಮೂರು ದಿನಗಳ ಕನಕ ಸಂಭ್ರಮ, ಸಂಸ್ಕೃತಿಯನ್ನು ಉದ್ಘಾಟಿಸಿ ಮಾತನಾಡಿದರು.

16ನೇ ಶತಮಾನದಲ್ಲೇ ಕನಕದಾಸರು ಜನಿಸಿದ್ದರು. ಪಾಳೇಗಾರರ ಕುಟುಂಬದಲ್ಲಿ ಜನಿಸಿದರೂ ಸಂತರಾದರು ಮಾತ್ರವಲ್ಲ ಕವಿ, ದಾರ್ಶನಿಕರು, ಸಾಮಾಜಿಕ ಹೋರಾಟಗಾರರೂ ಆಗಿದ್ದರು. ಸಮಾಜದ ಅಸಮಾನತೆ ವಿರುದ್ಧ ಬಂಡಾಯ ಹೂಡಿದರು. ಬುದ್ದ, ಬಸವ, ನಾರಾಯಣಗುರು ಕನಕದಾಸರು ಜಾತಿ ವ್ಯವಸ್ಥೆ, ವರ್ಗ ವ್ಯವಸ್ಥೆ ಹೋಗಲಾಡಿಸಲು ಶ್ರಮಿಸಿದರು ಎಂದು ವಿವರಿಸಿದರು.

ಯಾವ ದೇವಸ್ಥಾನಕ್ಕೆ ನಿಮ್ಮನ್ನು ಬಿಡುವುದಿಲ್ಲವೂ ಆ ದೇವಸ್ಥಾನಕ್ಕೆ ಹೋಗಬೇಡಿ. ನಿಮ್ಮದೇ ದೇವರುಗಳಿಗೆ ನಿಮ್ಮದೇ ದೇವಸ್ಥಾನ ಕಟ್ಟಿಸಿ ಎಂದು ನಾರಾಯಣಗುರುಗಳು ಕರೆ ನೀಡಿದ್ದರು. ನಿಮ್ಮನ್ನು ಯಾವ ದೇವಸ್ಥಾನಕ್ಕೆ ಸೇರಿಸುವುದಿಲ್ಲವೋ ಆ ದೇವಸ್ಥಾನಕ್ಕೆ ಹೋಗಿ ಇಣುಕುವ ಅಗತ್ಯ ಏನಿದೆ? ಹೊರಗೇ ನಿಂತು ಕೈ ಮುಗಿಯುವುದಕ್ಕಿಂತ ನಿಮ್ಮದೇ ಗುಡಿ ನಿರ್ಮಿಸಿ ಎನ್ನುವ ನಾರಾಯಣಗುರುಗಳ ಆದರ್ಶ ಪಾಲನೆ ಆಗಬೇಕು ಎಂದರು.

16 ನೇ ಶತಮಾನದಲ್ಲಿ ಕನಕರು, ಕುಲ ಕುಲ ಕುಲ ಎಂದು ಬಡಿದಾಡದಿರಿ ಎಂದರು. 12 ನೇ ಶತಮಾನಲ್ಲಿ ಬಸವಣ್ಣನವರು ಇವನಾರವ, ಇವನಾರವ ಎನ್ನದಿರಿ. ಇವ ನಮ್ಮವ ಎಂದೆಣಿಸಯ್ಯಾ ಎಂದು ಹೇಳಿದರು. ಆದರೂ ಇವತ್ತಿಗೂ ಕುಲ ಮತ್ತು ಇವನಾರವ ಎನ್ನುವ ಜಾತಿ ತಾರತಮ್ಯ ಆಚರಣೆಯಲ್ಲಿದೆ ಎಂದರು.

ಜಾತಿ ವ್ಯವಸ್ಥೆಗೆ ಪಟ್ಟಭದ್ರರು ಇನ್ನೂ ನೀರೆರೆಯುತ್ತಲೇ ಇದ್ದಾರೆ. ಹೀಗಾಗಿ ಸಮಾಜದ ಬದಲಾವಣೆಗೆ ಧೈರ್ಯ ಬೇಕಾಗುತ್ತದೆ. ವೈಜ್ಞಾನಿಕತೆ, ವೈಚಾರಿಕತೆಯ ಶಕ್ತಿಯಿಂದ ಸಮಾಜದ ಅಸಮಾನತೆ ಅಳಿಸಬೇಕು ಎಂದರು. ವಿಜ್ಞಾನ‌ ಓದಿದವರೂ ಕೂಡ ಮೂಢ ನಂಬಿಕೆ, ಕಂದಾಚಾರ, ಕರ್ಮ ಸಿದ್ಧಾಂತ, ಹಣೆಬರಹವನ್ನು ನಂಬುತ್ತಾರೆ. ಇವರು ವಿಜ್ಞಾನದ ಡಿಗ್ರಿ ತಗೊಂಡಿದ್ದೂ ದಂಡ ಆಗಲ್ವಾ ಎಂದು ಪ್ರಶ್ನಿಸಿದರು.

ಸ್ವರ್ಗ, ನರಕ, ಮುಂದಿನ ಜನ್ಮ ಎನ್ನುವುದೆಲ್ಲಾ ಯಾವುದೂ ಇಲ್ಲ. ಇದನ್ನೆಲ್ಲಾ ಬುದ್ದ, ಬಸವಣ್ಣನವರು ಒಪ್ಪಿರಲಿಲ್ಲ. ನಂಬಿರಲಿಲ್ಲ ಎಂದರು‌. ಜನ್ಮ, ಸ್ವರ್ಗ, ನರಕದ ಹೆಸರಲ್ಲಿ ಹೆದರಿಸುವುದನ್ನು ಬುದ್ದ, ಬಸವಣ್ಣ, ಅಂಬೇಡ್ಕರ್ ಒಪ್ಪುತ್ತಿರಲಿಲ್ಲ ಎಂದರು. ಕನಕದಾಸರ ರಾಮಧಾನ್ಯ ಚರಿತೆ, ಬಸವಣ್ಣನವರ ದಾಸೋಹ ಎರಡೂ ಶ್ರಮಿಕ ಸಂಸ್ಕೃತಿಯನ್ನು, ಕಾಯಕ ಮಾಡಿ ಬದುಕುವುದನ್ನು ಸಾರುತ್ತದೆ. ಹೀಗಾಗಿ ಕನಕ, ಬಸವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ಮಾತ್ರವಲ್ಲ, ಜೀವನದಲ್ಲಿ ಇವರ ಆದರ್ಶಗಳನ್ನು ಪಾಲಿಸಬೇಕು ಎಂದರು.

ಚಾತುವರ್ಣ ವ್ಯವಸ್ಥೆಯನ್ನು ಪಟ್ಟಭದ್ರರು ಹುಟ್ಟು ಹಾಕದೇ ಹೋಗಿದ್ದರೆ ಜಾತಿ ತಾರತಮ್ಯ, ಅಸಮಾನತೆ ಸಮಾಜದಲ್ಲಿ ಇರುತ್ತಿರಲಿಲ್ಲ. ಕನಕದಾಸರ ಆದರ್ಶಗಳನ್ನು ಕೇಳಿ ಮರೆಯುವುದಲ್ಲ. ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು. ಅಸಮಾನತೆ ಅಳಿಯದ ಹೊರತು ಅಸಮಾನತೆಯಿಂದ ನರಳಿದವರೇ ದೇಶದ ಸ್ವಾತಂತ್ರ್ಯವನ್ನು ದ್ವಂಸ ಮಾಡುತ್ತಾರೆ ಎನ್ನುವ ಅಂಬೇಡ್ಕರ್ ಅವರ ಎಚ್ಚರಿಕೆಯ ಮಾತುಗಳನ್ನು ನೆನಪಿಡಬೇಕು ಎಂದರು.

Tags: CM Siddaramaiahcm siddaramaiah budgetcm siddaramaiah cabinetcm siddaramaiah dancecm siddaramaiah dasaracm siddaramaiah latest newscm siddaramaiah livecm siddaramaiah newscm siddaramaiah patriotic momentcm siddaramaiah press meetcm siddaramaiah speechcm siddaramaiah speech 2025cm siddaramaiah statuscm siddaramaiah today newscm siddaramaiah videoKanakadasarukarnataka cm siddaramaiahkarnataka next cm siddaramaiahmla munirathnaMunirathnaSiddaramaiah CMsiddaramaiah karnataka cm
Previous Post

CM Siddaramaiah: ನೆಫ್ರೋ ಯೂರೋಲಜಿ ಸಂಸ್ಥೆಗೆ ರಾಷ್ಟ್ರೀಯ ಮಾನ್ಯತೆ..!

Next Post

MB Patil: ಬೆಂಗಳೂರು ಸುತ್ತಮುತ್ತ ಅರ್ಬನ್ ಫಾರೆಸ್ಟ್ ಗೆ ಅವಕಾಶ..!!

Related Posts

ಗುಜರಾತ್‌ಗೆ ಗೆಲುವು ತಂದುಕೊಟ್ಟ ಆರ್‌ಸಿಬಿ ಕಳಪೆ ಪ್ರದರ್ಶನ : ಸೋಲಿಗೆ ಕಾರಣ ಬಿಚ್ಚಿಟ್ಟ ಪಾಟಿದಾರ್..‌!
Top Story

ಗುಜರಾತ್‌ಗೆ ಗೆಲುವು ತಂದುಕೊಟ್ಟ ಆರ್‌ಸಿಬಿ ಕಳಪೆ ಪ್ರದರ್ಶನ : ಸೋಲಿಗೆ ಕಾರಣ ಬಿಚ್ಚಿಟ್ಟ ಪಾಟಿದಾರ್..‌!

by ಪ್ರತಿಧ್ವನಿ
May 1, 2026
0

ಅಹಮದಾಬಾದ್‌ : ಇಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಆಲೌಟ್‌ ಆಗುವ ಮೂಲಕ ಆರ್‌ಸಿಬಿ ಹೀನಾಯ ಸೋಲು ಕಂಡಿದೆ. ಆರಂಭದಲ್ಲಿ...

Read moreDetails
ಪಶ್ಚಿಮ ಬಂಗಾಳದಲ್ಲಿ ಮತದಾನ ಗೊಂದಲ: ಇವಿಎಂ ತೊಂದರೆ ಆರೋಪ, ಮರುಮತದಾನ ಚಿಂತನೆ

ಪಶ್ಚಿಮ ಬಂಗಾಳದಲ್ಲಿ ಮತದಾನ ಗೊಂದಲ: ಇವಿಎಂ ತೊಂದರೆ ಆರೋಪ, ಮರುಮತದಾನ ಚಿಂತನೆ

May 1, 2026
ಆಧಿಪತ್ಯದ ಪರಂಪರೆಯಿಂದ ಒಳಗೊಳ್ಳುವ ಸಂಸ್ಕೃತಿಯೆಡೆಗೆ

ಆಧಿಪತ್ಯದ ಪರಂಪರೆಯಿಂದ ಒಳಗೊಳ್ಳುವ ಸಂಸ್ಕೃತಿಯೆಡೆಗೆ

May 1, 2026
227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

227 ಕೋಟಿ ರೂ. ವೆಚ್ಚದಲ್ಲಿ ವಿಜಯಪುರದಲ್ಲಿ ಕೆ.ಎಸ್.ಡಿ.ಎಲ್ ಘಟಕ: ಯೋಜನೆಗೆ ಸಂಪುಟ ಸಭೆ ಅಸ್ತು

April 30, 2026
ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

ಒಂದು ಮಳೆಯ ಅಬ್ಬರಕ್ಕೆ ಸಿಲಿಕಾನ್ ಸಿಟಿ ಶಾಕ್: ಫುಟ್‌ಪಾತ್ ವ್ಯಾಪಾರಕ್ಕೆ ಬ್ರೇಕ್

April 30, 2026
Next Post

MB Patil: ಬೆಂಗಳೂರು ಸುತ್ತಮುತ್ತ ಅರ್ಬನ್ ಫಾರೆಸ್ಟ್ ಗೆ ಅವಕಾಶ..!!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada