ಕರೋನಾ ವೈರಸ್ಸನ್ನು ಜೈವಿಕ ಅಸ್ತ್ರವಾಗಿ ಬಳಸುವ ಬಗ್ಗೆ ಚೀನಾ ವಿಜ್ಞಾನಿಗಳು ಚರ್ಚಿಸಿದ್ದರೇ..?

ಚೀನಾದ ವಿಜ್ಞಾನಿಗಳು ಮತ್ತು ಆರೋಗ್ಯ ಅಧಿಕಾರಿಗಳು 2015 ರಲ್ಲಿ ಬರೆದ ಒಂದು ಪತ್ರದಲ್ಲಿ “SARS ಕೊರೊನಾ ವೈರಸ್‌ಗಳು ‘ಹೊಸ ಯುಗದ ಜೈವಿಕ ಅಸ್ತ್ರ’ವಾಗಿದ್ದು, ಅದನ್ನು  ‘ಮಾನವ ರೋಗ ವೈರಸ್ ಆಗಿ ಕೃತಕವಾಗಿ ಸೃಷ್ಟಿಸಿ ಶಸ್ತ್ರಾಸ್ತ್ರವಾಗಿ ಉಪಯೋಗಿಸಬಹುದು” ಎಂದು ತಿಳಿಸರುವುದಾಗಿ ‘ವೀಕೆಂಡ್ ಆಸ್ಟ್ರೇಲಿಯನ್’ ವರದಿ ಮಾಡಿದೆ.

‘The Unnatural Origin of SARS and New Species of Man-Made Viruses as Genetic Bioweapons’ ಎಂಬ‌ ಶೀರ್ಷಿಕೆಯ ಪತ್ರವು  ಮೂರನೆಯ ಮಹಾಯುದ್ಧವನ್ನು ಜೈವಿಕ ಶಸ್ತ್ರಾಸ್ತ್ರಗಳೊಂದಿಗೆ ಹೋರಾಡಬಹುದು ಎಂದು ಸಲಹೆ ನೀಡಿದೆ. ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೆ ಐದು ವರ್ಷಗಳ ಮೊದಲೇ ಚೀನಾದ ಮಿಲಿಟರಿ ವಿಜ್ಞಾನಿಗಳು SARS ಕರೋನವೈರಸ್‌ಗಳ ಶಸ್ತ್ರಾಸ್ತ್ರೀಕರಣದ ಬಗ್ಗೆ ಚರ್ಚಿಸುತ್ತಿದ್ದರು ಎಂಬುವುದನ್ನು ಈ ಡಾಕ್ಯುಮೆಂಟ್ ಬಹಿರಂಗಪಡಿಸಿದೆ.

“ಇದು ಮಹತ್ವದ್ದಾಗಿದೆ ಎಂದು ನಾನು ಭಾವಿಸುತ್ತೇನೆ ಏಕೆಂದರೆ ಚೀನಾದ ವಿಜ್ಞಾನಿಗಳು ಕರೋನವೈರಸ್‌ನ ವಿವಿಧ ತಳಿಗಳನ್ನು ಮಿಲಿಟರಿ ಅಪ್ಲಿಕೇಶನ್‌ಗಳಲ್ಲಿ ಹೇಗೆ ಬಳಸಬಹುದು ಎಂದು  ಮತ್ತು ಅದನ್ನು ಹೇಗೆ ನಿಯೋಜಿಸಬಹುದು ಎಂಬುದರ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ಸ್ಪಷ್ಟವಾಗಿ ತೋರಿಸುತ್ತದೆ” ಎಂದು ಹೇಳುತ್ತಾರೆ ‘Australian strategic policy institute’ ಕಾರ್ಯನಿರ್ವಾಹಕ ನಿರ್ದೇಶಕರಾದ ಪೀಟರ್ ಜೆನ್ನಿಂಗ್ಸ್. ಕೋವಿಡ್ -19 ರ ಮೂಲದ ಬಗ್ಗೆ ವಿದೇಶೀ ತನಿಖೆಗೆ ಚೀನಾ ಏಕೆ ಸಹಕರಿಸಲಿಲ್ಲ ಎನ್ನುವುದು ಸೋರಿಕೆ ಆದ ನಂತರ ಅರ್ಥವಾಗುತ್ತಿದೆ ಎಂದೂ ಅವರು ಹೇಳಿದರು.

‘ದಿ ಆಸ್ಟ್ರೇಲಿಯಾ’ವು ಸೈಬರ್ ಭದ್ರತಾ ತಜ್ಞ ರಾಬರ್ಟ್ ಪಾಟರ್ ಅವರನ್ನು ಈ ಕಾಗದವನ್ನು ಪರಿಶೀಲಿಸಲು ಕೇಳಿಕೊಂಡಾಗ ಅಮೂಲಾಗ್ರವಾಗಿ‌ ಪರಿಶೀಲಿಸಿದ ಅವರು ಖಂಡಿತವಾಗಿಯೂ ಪತ್ರ ನಕಲಿಯಲ್ಲ ಎಂದು‌ ಸ್ಪಷ್ಟ ಪಡಿಸಿದ್ದಾರೆ.

ಕೋವಿಡ್ -19 ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಇವತ್ತಿನ ವರೆಗೆ ವಿಶ್ವದಾದ್ಯಂತ 157 ದಶಲಕ್ಷಕ್ಕೂ ಹೆಚ್ಚು ಪ್ರಕರಣಗಳು ಮತ್ತು 3.28 ದಶಲಕ್ಷ ಸಾವುಗಳು ಸಂಭವಿಸಿವೆ. ಯುದ್ಧದ ಉದ್ದೇಶದಿಂದ ಮಾನವ ನಿರ್ಮಿತ ವೈರಸ್‌ ಆಗಿದ್ದರೆ ಇಷ್ಟೊಂದು ಪ್ರಮಾಣದ ಸಾವು, ನೋವು, ಆರ್ಥಿಕ ನಷ್ಟಕ್ಕೆ ಯಾರು ಹೊಣೆ ಹೊರಬೇಕು? ಚೀನಾದಿಂದ ಸೃಷ್ಟಿಸಿದ ವೈರಸ್ ಇದು ಎಂದು ಖಚಿತವಾದರೆ ಇಡೀ ಜಗತ್ತು ಅದರಲ್ಲೂ ಚೀನಾದ ಕಡು ವಿರೋಧಿ ಎಂದೇ ಗುರುತಿಸಿಕೊಳ್ಳುತ್ತಿರುವ ಅಮೆರಿಕ ಹೇಗೆ ಪ್ರತಿಕ್ರಿಯಿಸೀತು? ವಿಶ್ವ ಸಂಸ್ಥೆ ಬಲಾಢ್ಯ ದೇಶವಾದ ಚೀನಾದ ಮೇಲೆ ಯಾವ ಕ್ರಮ ಕೈಗೊಳ್ಳಬಹುದು? ಅಥವಾ ಇದು ಮತ್ತೊಂದು ಮಹಾಯುದ್ಧಕ್ಕೆ ಕರಣವಾಗಬಲ್ಲುದೆ ಎಂಬ ಪ್ರಶ್ನೆ, ಆತಂಕಗಳು ಜನಸಾಮಾನ್ಯರನ್ನು‌ ಕಾಡುತ್ತಿದೆ.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...