ಚಂದ್ರಶೇಖರ ಗುರೂಜಿ ಕೊಲೆ ಘಟನೆ ಇದೀಗ ಇಡೀ ಕರ್ನಾಟಕವೇ ಬೆಚ್ಚಿ ಬಿದ್ದಿದೆ. ಅದರಲ್ಲೂ ಅವರ ಆಪ್ತರೇ ಹತ್ಯೆ ನಡೆಸಿದ್ದು ಬೆಳಕಿಗೆ ಬಂದಿದೆ. ಭಕ್ತರ ಸೋಗಿನಲ್ಲಿ ಬಂದು 60 ಬಾರಿ ಚಾಕುವಿನಿಂದ ಇರಿದು ಬರ್ಬರ ಹತ್ಯೆಗೈದಿದ್ದು ಇಡೀ ಕರ್ನಾಟಕದಾದ್ಯಂತ ಇದೀಗ ಚರ್ಚೆಯಾಗುತ್ತಿದೆ.
ಆದರೆ ಅವರ ಸಾವಿನ ನಂತರ ಸಾಮಾಜಿಕ ಜಾಲತಾಣದಲ್ಲಿ, ಚಂದ್ರ ಶೇಖರ ಗುರೂಜಿಯವರು ಬೆಳೆದು ಬಂದು ಹಾದಿಯ ಬಗ್ಗೆ ಒಂದು ಕಡೆ ಚರ್ಚೆಯಾಗುತ್ತಿದ್ದರೆ ಮತ್ತೊಂದು ಕಡೆ ಅವರು ಎರಡು ಮಾದುವೆಯಾಗಿದ್ದಾರೆ ಇವರು ಯಾವ ತರಹದ ಗುರೂಜಿ ಎಂದೆಲ್ಲಾ ಕಮೆಂಟ್ ಮಾಡುತ್ತಿದ್ದಾರೆ. ಆದರೆ ಚಂದ್ರ ಶೇಖರ ಎರಡು ಮದುವೆಯಾಗಿದ್ದಾರೆಯೇ? ಹಾಗಾದ್ರೆ ಚಂದ್ರಶೇಖರ್ ಯಾರು? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಚಂದ್ರಶೇಖರ ಗುರೂಜಿ ಪರಿಚಯ-
ಸರಳ ವಾಸ್ತು ತಜ್ಞ ಚಂದ್ರಶೇಖರ ಮೂಲತಃ ಬಾಗಲಕೋಟೆ ನಗರದ ಮೋಟಗಿಗಲ್ಲಿಯ ನಿವಾಸಿಯಾಗಿದ್ದರು. ಬಾಗಲಕೋಟೆಯ ಬಸವೇಶ್ವರ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡಿದ್ದರು. ಹುಬ್ಬಳ್ಳಿಯ ವಿದ್ಯಾ ನಗರದಲ್ಲಿ ನಿವಾಸ ಹೊಂದಿದ್ದರು. ಮೋಟಗಿಗಲ್ಲಿಯ ವಿರುಪಾಕ್ಷಪ್ಪ ಅಂಗಡಿ ಹಾಗೂ ನೀಲವ್ವ ಅಂಗಡಿ ಅವರ ಮೂರನೇ ಪುತ್ರ ಚಂದ್ರಶೇಖರ್.
ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿದ್ದ ಚಂದ್ರಶೇಖರ್ ನಂತರ ಸರಳವಾಸ್ತುವಿನತ್ತ ಮುಖಮಾಡಿದ್ದರು. ನಂತರ ಅದೇ ವೃತ್ತಿಯಾಗಿ ಬದಲಾಗಿ ಅವರ ಸರಳ ವಾಸ್ತು ಶಾಸ್ತ್ರ ಬಾಗಲಕೋಟೆಯಿಂದ ಬೆಂಗಳೂರು, ಮುಂಬೈ, ಸಿಂಗಾಪುರದವರೆಗೂ ವಿಸ್ತರಿಸಿತ್ತು. ಸರಳವಾಸ್ತು ಪರಿಕಲ್ಪನೆಯಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು.
ಚಂದ್ರಶೇಖರ ಗುರೂಜಿಗೆ ಎರಡು ಮದುವೆ!?
ಹೌದು, ಚಂದ್ರ ಶೇಖರ್ ಇಬ್ಬರು ಪತ್ನಿಯರನ್ನು ಹೊಂದಿದ್ದರು. ಚಂದ್ರ ಶೇಖರ ಗುರೂಜಿಯವರ ಮೊದಲ ಪತ್ನಿ ನಿಧನರಾಗಿದ್ದಾರೆ. ಅವರಿಗೆ ಪುತ್ರಿ ಇದ್ದಾರೆ. ಇನ್ನೊಬ್ಬರು ಪತ್ನಿ ಇದ್ದು ಅವರಿಗೆ ಮಕ್ಕಳಿಲ್ಲ . ಚಂದ್ರ ಶೇಖರ ಗುರೂಜಿ ಅವರ ಎರಡನೇ ಪತ್ನಿ ಅಂಕಿತಾ ಶಿವಮೊಗ್ಗ ಜಿಲ್ಲೆಯಮಂಡಗದ್ದೆ ಹೋಬಳಿಯ ಹೆಮ್ಮಕ್ಕಿ ಗ್ರಾಮದ ಮೂಲದವರು. ಚಂದ್ರ ಶೇಖರ್ ಗುರೂಜಿ ಮೊದಲ ಪತ್ನಿಯ ಮರಣದ ನಂತರ ಅಂಕಿತರನ್ನು ಮದುವೆಯಾಗಿದ್ದರು. ಪ್ರಸ್ತುತ ಅಂಕಿತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.