ಹರ್ಷ ಕೊಲೆ ಆರೋಪಿ ಭಜರಂಗದಳದ ಕಾರ್ಯಕರ್ತ ಬೆಂಗಳೂರು ಜೈಲಿನಲ್ಲಿದ್ದರೂ ಫೋಟೊ ಹಾಗೂ ವೀಡಿಯೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವುದು ಪೊಲೀಸ್ ಇಲಾಖೆಯ ವ್ಯವಸ್ಥೆ ಬಗ್ಗೆ ಚರ್ಚೆಗಳು ಆರಂಭವಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಭಜರಂಗ ದಳ ಕಾರ್ಯಕರ್ತ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಾಗೂ ವೀಡಿಯೊಗಳನ್ನು ಅಪ್ ಲೋಡ್ ಮಾಡಿದ್ದಾನೆ. ಈ ಘಟನೆ ಬಗ್ಗೆ ರಾಜ್ಯ ಸರಕಾರ ಆದೇಶಿಸಿದೆ.

ಫೆಬ್ರವರಿ 20ರಂದು 27 ವರ್ಷದ ಹರ್ಷನನ್ನು ಭಜರಂಗ ದಳದ ಕಾರ್ಯಕರ್ತರು ಹತ್ಯೆ ಮಾಡಿದ್ದರು. ಘಟನೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಎನ್ ಐಎ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.
ಹರ್ಷ ಕುಟುಂಬ ಜೈಲಿನಲ್ಲಿರುವ ಆರೋಪಿಯ ವೀಡಿಯೊ ಮತ್ತು ಫೋಟೊಗಳನ್ನು ನೋಡಿ ಆಘಾತಕ್ಕೆ ಒಳಗಾಗಿದ್ದು, ಈ ವಿಷಯವನ್ನು ಬಹಿರಂಗಪಡಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ವೀಡಿಯೋದಲ್ಲಿ ಸಹಚರರೊಂದಿಗೆ ಮಾತನಾಡುವುದು ದಾಖಲಾಗಿದೆ.