ಮುಂಬೈನಿಂದ ಹೊರಟಿದ್ದ ಸ್ಪೈಸ್ಜೆಟ್ Q400 ವಿಮಾನವು ವಿಂಡ್‌ಶೀಲ್ಡ್‌ನಲ್ಲಿ ಬಿರುಕು ಕಾಣಿಸಿಕೊಂಡ ಕಾರಣ ತುರ್ತು ಭೂಸ್ಪರ್ಶ ಮಾಡಿದೆ.
17 ದಿನಗಳ ಅಂತರದಲ್ಲಿ ಇದು 7ನೇ ಅವಾಂತರವಾಗಿದ್ದು ವಿಮಾನ ಸಂಸ್ಥೆಗೆ ತೀವ್ರ ಮುಜುಗರ ಉಂಟು ಮಾಡಿದೆ.
ಇಂದು ಮಧ್ಯಾಹ್ನ ದೆಹಲಯಿಂದ ದುಬೈಗೆ ಹೊರಟಿದ್ದ ಕಂಪನಿಯ ವಿಮಾನವು ತಾಂತ್ರಿಕ ದೋಷದಿಂದಾಗಿ ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಿತ್ತು.

ನಾಗರೀಕ ವಿಮಾನಯಾನ ನಿರ್ದೇಶಾನಲಯ (DGCA) ಮಂಗಳವಾರ ನಡೆದ ಎರಡು ಪ್ರತ್ಯೇಕ ಘಟನೆಗಳ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ತಿಳಿಸಿದೆ.
ಕಾಂಡ್ಲಾ – ಮುಂಬೈ ನಡುವಿನ ವಿಮಾನವು ಆಕಾಶದಲ್ಲಿ 23 ಸಾವಿರ ಅಡಿ ಎತ್ತರ ಹಾರಿದ ಸಮಯದಲ್ಲಿ ವಿಂಡ್‌ಶೀಲ್ಡ್‌ನ ಹೊರ ಭಾಗವು ಬಿರುಕು ಬಿಟ್ಟಿದ ಕಾರಣ ತುರ್ತು ಭೂಸ್ಪರ್ಶ ಮಾಡಲಾಯಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.