• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Sunday, April 12, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಬಿ ರಿಪೋರ್ಟ್​ ಬಗ್ಗೆ ಕೋರ್ಟ್​ನಲ್ಲಿ ಏನೇನು ವಾದ – ಪ್ರತಿವಾದ ಆಗಿತ್ತು ಗೊತ್ತಾ..?

ಕೃಷ್ಣ ಮಣಿ by ಕೃಷ್ಣ ಮಣಿ
April 15, 2025
in ಕರ್ನಾಟಕ, ರಾಜಕೀಯ
0
ಬಿ ರಿಪೋರ್ಟ್​ ಬಗ್ಗೆ ಕೋರ್ಟ್​ನಲ್ಲಿ ಏನೇನು ವಾದ – ಪ್ರತಿವಾದ ಆಗಿತ್ತು ಗೊತ್ತಾ..?
Share on WhatsAppShare on FacebookShare on Telegram

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಕೇಸ್​ನಲ್ಲಿ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್​ ಸಲ್ಲಿಕೆ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇಂದು ಬಿಗ್ ಡೇ ಆಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ಆದೇಶ ಹೊರ ಬೀಳಲಿದೆ. ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ತಕರಾರು ಅರ್ಜಿಗಳ ವಿಚಾರಣೆ ಪೂರ್ಣಗೊಂಡಿದ್ದು, ನ್ಯಾ. ಗಜಾನನ ಭಟ್ ಅವರು ಎರಡೂ ತಕರಾರು ಅರ್ಜಿಗಳ ಆದೇಶ ಪ್ರಕಟ ಮಾಡಲಿದ್ದಾರೆರ. ಜಾರಿ ನಿರ್ದೇಶನಾಲಯ ಪರವಾಗಿ ವಾದಿಸಿದ್ದ ವಕೀಲ ಮಧುಕರ್ ದೇಶಪಾಂಡೆ, ಲೋಕಾಯುಕ್ತರ ಪರವಾಗಿ ವಾದಿಸಿದ್ದ ಎಸ್​ಪಿಪಿ ವೆಂಕಟೇಶ್ ಅರಬಟ್ಟಿ. ಲೋಕಯುಕ್ತ ಬಿ ರಿಪೋರ್ಟ್ ಪ್ರಶ್ನಿಸಿ ವಾದಿಸಿದ್ದ ಸ್ನೇಹಮಯಿ ಕೃಷ್ಣ.

ADVERTISEMENT

ಎಸ್​ಪಿಪಿ ವಾದ ಮಂಡಿಸಿ ಇಡಿ ತಕರಾರು ಅರ್ಜಿಯನ್ನ ಪರಿಗಣಿಸಬಾರದು. ಇದೇ ರೀತಿಯ ಪ್ರಕರಣದ ಬಗ್ಗೆ ಬಾಂಬೇ ಹೈಕೋರ್ಟ್ ಆದೇಶವೊಂದನ್ನು ನೀಡಿದೆ. ಇದೊಂದು ಖಾಸಗಿ ದೂರು. ದೂರುದಾರರು ಈಗಾಗಲೇ ತಕರಾರು ಸಲ್ಲಿಸಿದ್ದಾರೆ. ಜಾರಿ ನಿರ್ದೇಶನಾಲಯ ಈ ಪ್ರಕರಣದಲ್ಲಿ ನೊಂದ ವ್ಯಕ್ತಿ ಅಲ್ಲ. ಈ ಪ್ರಕರಣದಲ್ಲಿ ಇ.ಡಿಗೆ ತಕರಾರು ಸಲ್ಲಿಸುವ ಅಧಿಕಾರ ಇಲ್ಲ. PMLA, FEMA ಅಡಿ ಇ.ಡಿ ತನಿಖೆ ನಡೆಸಬಹುದು. ಮತ್ತೊಂದು ತನಿಖಾ ಸಂಸ್ಥೆ ನಡೆಸಿರುವ ತನಿಖೆಯನ್ನ ಇ.ಡಿ ಪ್ರಶ್ನಿಸುವ ಅಧಿಕಾರ ಇಲ್ಲ. ಇಡಿ ಸಲ್ಲಿಸಿರುವ ತಕರಾರು ಅರ್ಜಿಯನ್ನ ವಜಾ ಮಾಡಬೇಕು. ಇ.ಡಿ ತಕರಾರು ಅರ್ಜಿ ವಜಾಗೊಳಿಸುವಂತೆ ಲೋಕಾಯುಕ್ತ ಎಸ್​ಪಿಪಿ ವೆಂಕಟೇಶ್ ಅರಬಟ್ಟಿ ಮನವಿ ಮಾಡಿದ್ದಾರೆ.

ಇ.ಡಿ ಪರವಾಗಿ ಮಧುಕರ್ ದೇಶಪಾಂಡೆ ವಾದ ಮಂಡಿಸಿ ಲೋಕಾಯುಕ್ತ ಪೊಲೀಸರು ದಾಖಲೆಗಳಲ್ಲಿ ಇ.ಡಿ ಸಂಗ್ರಹಿಸಿದ ದಾಖಲೆ ಉಲ್ಲೇಖವಿದೆ. ಬಿ ರಿಪೋರ್ಟ್ ಸಲ್ಲಿಕೆಗೆ ಇ.ಡಿ ತಕರಾರಿದೆ. ಲೋಕಾಯುಕ್ತ ಪೊಲೀಸ್ರಿಗೆ ಇ.ಡಿಯೇ ಮಾಹಿತಿದಾರನಾಗಿದೆ. ಇ.ಡಿ ದಾಖಲೆ ಪರಿಗಣಿಸಿ ತಪ್ಪು ನಿರ್ಧಾರಕ್ಕೆ ಬಂದಿದ್ದಾರೆ. ಲೋಕಾಯುಕ್ತ ಅಭಿಪ್ರಾಯಕ್ಕೆ ಇ.ಡಿ ವಿರೋಧವಿದೆ. ಇ.ಡಿಯೂ ಈ ಕೇಸ್​ನಲ್ಲಿ ತನಿಖೆ ನಡೆಸಿದೆ.. ಕೋರ್ಟ್ ಬಿ ರಿಪೋರ್ಟ್ ಪರಿಗಣಿಸಿದರೆ ಇ.ಡಿಗೆ ಸಮಸ್ಯೆ ಆಗಲಿದೆ. ಅನುಸೂಚಿತ ಸೆಕ್ಷನ್ ಇಲ್ಲದಿದ್ದರೆ ಇ.ಡಿ ತನಿಖೆ ನಡೆಸಲಾಗದು. ಹೀಗಾಗಿ ಇ.ಡಿ ಸಲ್ಲಿಸಿದ ವರದಿ ಪರಿಗಣಿಸಬೇಕೆಂದು ಮನವಿ ಮಾಡಿದ್ದಾರೆ..

ಲೋಕಾಯುಕ್ತ ಬಿ ರಿಪೋರ್ಟ್​ ಪ್ರಶ್ನಿಸಿರುವ ದೂರುದಾರ ಸ್ನೇಹಮಯಿ ಕೃಷ್ಣ ವಾದ ಮಂಡಿಸಿದ್ದು, ಒಂದೇ ಪ್ರಕರಣದ ಬಗ್ಗೆ ಎರಡು ತನಿಖಾ ಸಂಸ್ಥೆಗಳು ತನಿಖೆ ನಡೆಸಿವೆ. ಯಾವುದೇ ವ್ಯಕ್ತಿ ಮಾಹಿತಿ ನೀಡಿದ್ರು ಅವರನ್ನ ಸಾಕ್ಷಿಯಾಗಿ ಪರಿಗಣಿಸಬೇಕು. ಆದ್ರೆ ಲೋಕಾಯುಕ್ತ ಪೊಲೀಸರು ಒಂದು ರೀತಿ, ಇ.ಡಿ ಅಧಿಕಾರಿಗಳ ವರದಿ ಮತ್ತೊಂದು ರೀತಿ ಹೇಳುತ್ತದೆ. ಡಿನೋಟಿಫಿಕೇಷನ್ ಕಾನೂನು ಬಾಹಿರ ಎಂದು ಇ.ಡಿ ಹೇಳ್ತಿದೆ. ಯಾವುದೇ ತನಿಖಾ ಸಂಸ್ಥೆಯಾದ್ರೂ ಸಮಾಜದ ಸ್ವಾಸ್ಥ್ಯ ಕಾಪಾಡಬೇಕು. ಇ.ಡಿ ನೀಡ್ತಿರುವ ಮಾಹಿತಿಗಳನ್ನ ಪರಿಗಣಿಸಬೇಕು. ಲೋಕಾಯುಕ್ತ ಅಧಿಕಾರಿಗಳು ನ್ಯಾಯಾಲಯದ ದಿಕ್ಕು ತಪ್ಪಿಸುವ ಕೆಲಸ ಮಾಡ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ತನಿಖಾ ಸಂಸ್ಥೆಗಳು ಈ ರೀತಿ ಮಾಡಿದ್ರೆ ನಮ್ಮಂತಹ ಹೋರಾಟಗಾರರು ಏನು ಮಾಡಬೇಕು..? ಇ.ಡಿ ನೀಡುತ್ತಿರುವ ದಾಖಲೆಗಳನ್ನ ಪರಿಗಣಿಸುವಂತೆ ನ್ಯಾಯಾಧೀಶರಿಗೆ ಸ್ನೇಹಮಯಿ ಕೃಷ್ಣ ಮನವಿ ಮಾಡಿದ್ದಾರೆ..

Tags: cm siddaramaiah gets clean chit in muda casecm siddaramaiah muda caseed on muda caseed probe in muda caselokayukta gives clean chit to cm siddaramaiah in muda casemoney Laundering caseMuda Casemuda case explainedmuda case in kannadamuda case livemuda case mysoremuda case newsmuda case siddaramaiahmuda case todaymuda case today newsmuda case updatemuda scam casesiddaramaiah casesiddaramaiah muda case
Previous Post

ಜಾತಿ ಜನಗಣತಿ ಬೆಂಬಲಿಸಿದ ಚಲುವರಾಯಸ್ವಾಮಿ.. ಇಂದು ಏನ್ ಮಾಡ್ತಾರೆ..?

Next Post

ಲಾರಿ ಮುಷ್ಕರ.. ಸಂಕಷ್ಟ ಎದುರಾಗುವ ಮುನ್ನ ಎಚ್ಚೆತ್ತ ಸರ್ಕಾರ..

Related Posts

ಸಿದ್ದರಾಮಯ್ಯ ಬೆಂಕಿ ಇದ್ದಂತೆ, ಯಾರಿಂದಲೂ ಮುಟ್ಟೋಕಾಗೋಲ್ಲಾ ಮುಟ್ಟಿದ್ರೆ ಭಸ್ಮ ಆಗ್ತಾರೆ.
ರಾಜಕೀಯ

ದಾವಣಗೆರೆ ದಕ್ಷಿಣ ಉಪಚುನಾವಣೆ: ಕಾಂಗ್ರೆಸ್ ಒಳಜಗಳ ತೀವ್ರ, ಸಚಿವ ಜಮೀರ್ ವಿರುದ್ಧ ಗಂಭೀರ ಆರೋಪ

by ಪ್ರತಿಧ್ವನಿ
April 12, 2026
0

ದಾವಣಗೆರೆ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ರಾಜಕೀಯ ಪೈಪೋಟಿಯಷ್ಟೇ ಅಲ್ಲದೆ, ಕಾಂಗ್ರೆಸ್ ಪಕ್ಷದ ಒಳಜಗಳದ ವೇದಿಕೆಯಾಗಿಯೂ ಪರಿಣಮಿಸಿದೆ. ಸ್ವಪಕ್ಷದ ಅಭ್ಯರ್ಥಿಯನ್ನೇ ಸೋಲಿಸಲು ಸಂಚು ರೂಪಿಸಿದ ಆರೋಪದ...

Read moreDetails
ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

April 11, 2026
ವಿದ್ಯಾರ್ಥಿಗಳ ದುಡುಕಿನ ನಿರ್ಧಾರಕ್ಕೆ ಸಿಎಂ ಸಿದ್ದರಾಮಯ್ಯ ಸಲಹೆ

ಇನ್ನು ಪಿಯುಸಿ ಅಂಕಪಟ್ಟಿ ಮುಂದಿನ ವರ್ಷದಿಂದ  ಹೀಗಿರಲಿದೆ ! ಮಧು ಬಂಗಾರಪ್ಪ ಮಹತ್ವದ ಹೇಳಿಕೆ

April 10, 2026
ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಶೇ.86 ಉತ್ತೀರ್ಣ – ದಾಖಲೆಯ ಸಾಧನೆ, ಜಿಲ್ಲಾವಾರು ಪಟ್ಟಿ ಇಲ್ಲಿದೆ

April 9, 2026
ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

ದೇವನಹಳ್ಳಿ ಭೂ ಹಗರಣದಲ್ಲಿ ಅಧಿಕಾರಿ ಬಿ.ಕೆ.ಮಮತಾ ಪಾತ್ರವೇನು..? : ತಪ್ಪಿಲದಿದ್ರೆ ಪ್ರತಿಕ್ರಿಯೆಗೆ ನಿರಾಕರಣೆ ಯಾಕೆ..?

April 9, 2026
Next Post
ಲಾರಿ ಮುಷ್ಕರ.. ಸಂಕಷ್ಟ ಎದುರಾಗುವ ಮುನ್ನ ಎಚ್ಚೆತ್ತ ಸರ್ಕಾರ..

ಲಾರಿ ಮುಷ್ಕರ.. ಸಂಕಷ್ಟ ಎದುರಾಗುವ ಮುನ್ನ ಎಚ್ಚೆತ್ತ ಸರ್ಕಾರ..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada