

ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಕೇಸ್ನಲ್ಲಿ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಇಂದು ಬಿಗ್ ಡೇ ಆಗಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ಆದೇಶ ಹೊರ ಬೀಳಲಿದೆ. ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ತಕರಾರು ಅರ್ಜಿಗಳ ವಿಚಾರಣೆ ಪೂರ್ಣಗೊಂಡಿದ್ದು, ನ್ಯಾ. ಗಜಾನನ ಭಟ್ ಅವರು ಎರಡೂ ತಕರಾರು ಅರ್ಜಿಗಳ ಆದೇಶ ಪ್ರಕಟ ಮಾಡಲಿದ್ದಾರೆರ. ಜಾರಿ ನಿರ್ದೇಶನಾಲಯ ಪರವಾಗಿ ವಾದಿಸಿದ್ದ ವಕೀಲ ಮಧುಕರ್ ದೇಶಪಾಂಡೆ, ಲೋಕಾಯುಕ್ತರ ಪರವಾಗಿ ವಾದಿಸಿದ್ದ ಎಸ್ಪಿಪಿ ವೆಂಕಟೇಶ್ ಅರಬಟ್ಟಿ. ಲೋಕಯುಕ್ತ ಬಿ ರಿಪೋರ್ಟ್ ಪ್ರಶ್ನಿಸಿ ವಾದಿಸಿದ್ದ ಸ್ನೇಹಮಯಿ ಕೃಷ್ಣ.

ಎಸ್ಪಿಪಿ ವಾದ ಮಂಡಿಸಿ ಇಡಿ ತಕರಾರು ಅರ್ಜಿಯನ್ನ ಪರಿಗಣಿಸಬಾರದು. ಇದೇ ರೀತಿಯ ಪ್ರಕರಣದ ಬಗ್ಗೆ ಬಾಂಬೇ ಹೈಕೋರ್ಟ್ ಆದೇಶವೊಂದನ್ನು ನೀಡಿದೆ. ಇದೊಂದು ಖಾಸಗಿ ದೂರು. ದೂರುದಾರರು ಈಗಾಗಲೇ ತಕರಾರು ಸಲ್ಲಿಸಿದ್ದಾರೆ. ಜಾರಿ ನಿರ್ದೇಶನಾಲಯ ಈ ಪ್ರಕರಣದಲ್ಲಿ ನೊಂದ ವ್ಯಕ್ತಿ ಅಲ್ಲ. ಈ ಪ್ರಕರಣದಲ್ಲಿ ಇ.ಡಿಗೆ ತಕರಾರು ಸಲ್ಲಿಸುವ ಅಧಿಕಾರ ಇಲ್ಲ. PMLA, FEMA ಅಡಿ ಇ.ಡಿ ತನಿಖೆ ನಡೆಸಬಹುದು. ಮತ್ತೊಂದು ತನಿಖಾ ಸಂಸ್ಥೆ ನಡೆಸಿರುವ ತನಿಖೆಯನ್ನ ಇ.ಡಿ ಪ್ರಶ್ನಿಸುವ ಅಧಿಕಾರ ಇಲ್ಲ. ಇಡಿ ಸಲ್ಲಿಸಿರುವ ತಕರಾರು ಅರ್ಜಿಯನ್ನ ವಜಾ ಮಾಡಬೇಕು. ಇ.ಡಿ ತಕರಾರು ಅರ್ಜಿ ವಜಾಗೊಳಿಸುವಂತೆ ಲೋಕಾಯುಕ್ತ ಎಸ್ಪಿಪಿ ವೆಂಕಟೇಶ್ ಅರಬಟ್ಟಿ ಮನವಿ ಮಾಡಿದ್ದಾರೆ.

ಇ.ಡಿ ಪರವಾಗಿ ಮಧುಕರ್ ದೇಶಪಾಂಡೆ ವಾದ ಮಂಡಿಸಿ ಲೋಕಾಯುಕ್ತ ಪೊಲೀಸರು ದಾಖಲೆಗಳಲ್ಲಿ ಇ.ಡಿ ಸಂಗ್ರಹಿಸಿದ ದಾಖಲೆ ಉಲ್ಲೇಖವಿದೆ. ಬಿ ರಿಪೋರ್ಟ್ ಸಲ್ಲಿಕೆಗೆ ಇ.ಡಿ ತಕರಾರಿದೆ. ಲೋಕಾಯುಕ್ತ ಪೊಲೀಸ್ರಿಗೆ ಇ.ಡಿಯೇ ಮಾಹಿತಿದಾರನಾಗಿದೆ. ಇ.ಡಿ ದಾಖಲೆ ಪರಿಗಣಿಸಿ ತಪ್ಪು ನಿರ್ಧಾರಕ್ಕೆ ಬಂದಿದ್ದಾರೆ. ಲೋಕಾಯುಕ್ತ ಅಭಿಪ್ರಾಯಕ್ಕೆ ಇ.ಡಿ ವಿರೋಧವಿದೆ. ಇ.ಡಿಯೂ ಈ ಕೇಸ್ನಲ್ಲಿ ತನಿಖೆ ನಡೆಸಿದೆ.. ಕೋರ್ಟ್ ಬಿ ರಿಪೋರ್ಟ್ ಪರಿಗಣಿಸಿದರೆ ಇ.ಡಿಗೆ ಸಮಸ್ಯೆ ಆಗಲಿದೆ. ಅನುಸೂಚಿತ ಸೆಕ್ಷನ್ ಇಲ್ಲದಿದ್ದರೆ ಇ.ಡಿ ತನಿಖೆ ನಡೆಸಲಾಗದು. ಹೀಗಾಗಿ ಇ.ಡಿ ಸಲ್ಲಿಸಿದ ವರದಿ ಪರಿಗಣಿಸಬೇಕೆಂದು ಮನವಿ ಮಾಡಿದ್ದಾರೆ..