• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 8, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ

ಪ್ರತಿಧ್ವನಿ by ಪ್ರತಿಧ್ವನಿ
April 11, 2026
in ಕರ್ನಾಟಕ
0
ರಾಜ್ಯದ ಮೊದಲ ಸರ್ಕಾರಿ ಶಾಲೆಯಲ್ಲಿ ಎಐ ಟೀಚರ್ ‘ಐರಿಸ್’ ಪ್ರವೇಶ
Share on WhatsAppShare on FacebookShare on Telegram

ಕುಂದಾಪುರ:

ADVERTISEMENT

ವಂಡ್ಸೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮುಂದಿನ ಶೈಕ್ಷಣಿಕ ವರ್ಷದಿಂದ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಶಿಕ್ಷಕರ ಜೊತೆಗೂಡಿ ಎಐ (Artificial Intelligence) ಆಧಾರಿತ ‘ಐರಿಸ್’ ಎಂಬ ರೋಬೋ ಶಿಕ್ಷಕಿಯನ್ನು ಪರಿಚಯಿಸುವ ಮೂಲಕ ರಾಜ್ಯದಲ್ಲೇ ಪ್ರಥಮ ಸರ್ಕಾರಿ ಶಾಲೆಯಾಗಿ ಗುರುತಿಸಿಕೊಂಡಿದೆ.

Veereshwara Swamiji : ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಮಾಜವನ್ನು ಬಲಿಪಶು ಮಾಡಿದ್ದಾರೆ.. #pratidhvani

ಒಮ್ಮೆ ಮುಚ್ಚುವ ಹಂತಕ್ಕೆ ತಲುಪಿದ್ದ ಈ ಶಾಲೆ, ಇಂದು ಮಾದರಿ ಶಾಲೆಯಾಗಿ ಹೊರಹೊಮ್ಮಿದೆ. ದಶಕದ ಹಿಂದೆ ಕೇವಲ 89 ವಿದ್ಯಾರ್ಥಿಗಳಿದ್ದರೆ, ಈಗ ವಿದ್ಯಾರ್ಥಿಗಳ ಸಂಖ್ಯೆ 334ಕ್ಕೆ ಏರಿಕೆಯಾಗಿದೆ. ಈ ಬದಲಾವಣೆಗೆ ಶ್ರೀ ಮೂಕಾಂಬಿಕಾ ಚಾರಿಟೇಬಲ್ ಟ್ರಸ್ಟ್‌ ಮಹತ್ವದ ಪಾತ್ರವಹಿಸಿದೆ. 2016ರಲ್ಲಿ ಟ್ರಸ್ಟ್ ಶಾಲೆಯನ್ನು ದತ್ತು ಪಡೆದು, ನಾವೀನ್ಯತೆ ಮತ್ತು ತಂತ್ರಜ್ಞಾನವನ್ನು ಅಳವಡಿಸಿ ಶಾಲೆಯನ್ನು ಅಭಿವೃದ್ಧಿಪಡಿಸಿದೆ.

Kumaraswamy Temple Visit : ನಂಜುಂಡೇಶ್ವರನ ಸನ್ನಿಧಿಗೆ ಪತ್ನಿ ಜೊತೆ ಬಂದ ಕುಮಾರಸ್ವಾಮಿ..!  #jds

2026-27ನೇ ಸಾಲಿನಲ್ಲಿ ತರಗತಿಗಳಲ್ಲಿ ಎಐ ಟೀಚರ್ ‘ಐರಿಸ್’ ಬೋಧನೆ ನಡೆಸಲಿದ್ದು, ಈಗಾಗಲೇ ಇದರ ಅನಾವರಣ ನಡೆದಿದೆ. ಇದೇ ಸಂದರ್ಭದಲ್ಲಿ ರೈನ್‌ಬೋ ಎಜುಕೇಷನ್ ಫೆಸ್ಟ್ ಹಾಗೂ ಕಿಂಡರ್‌ಗಾರ್ಡನ್ ವಿಭಾಗಕ್ಕೂ ಚಾಲನೆ ನೀಡಲಾಗಿದೆ. ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಒ ಪ್ರತೀಕ್ ಬಾಯಲ್, ವಿದ್ಯಾಂಗ ಉಪನಿರ್ದೇಶಕ ಲೋಕೇಶ್ ಸಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

KRS Party Protest :ಗೃಹ ಸಚಿವ ಪರಮೇಶ್ವರ್‌ ವಿರುದ್ಧ ರೊಚ್ಚಿಗೆದ್ದ KRS ಪಕ್ಷದ ಕಾರ್ಯಕರ್ತರು..!

111 ವರ್ಷಗಳ ಇತಿಹಾಸ ಹೊಂದಿರುವ ಈ ಶಾಲೆ 2016ರಲ್ಲಿ ಶತಮಾನೋತ್ಸವ ಆಚರಿಸಿದ್ದು, ಟ್ರಸ್ಟ್, ಎಸ್‌ಡಿಎಂಸಿ, ಹಳೆ ವಿದ್ಯಾರ್ಥಿ ಸಂಘ ಮತ್ತು ಶಿಕ್ಷಕರ ಸಹಕಾರದಿಂದ ನಿರಂತರ ಅಭಿವೃದ್ಧಿ ಕಂಡಿದೆ.

ಎಐ ಶಿಕ್ಷಕಿ ‘ಐರಿಸ್’ ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಸುಮಾರು 20 ಭಾಷೆಗಳಲ್ಲಿ ಸಂವಹನ ನಡೆಸುವ ಸಾಮರ್ಥ್ಯ ಹೊಂದಿದ್ದು, ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ತಕ್ಷಣ ಉತ್ತರ ನೀಡಲಿದೆ. ಎಲ್‌ಕೆಜಿಯಿಂದ ಎಸ್‌ಎಸ್‌ಎಲ್‌ಸಿವರೆಗಿನ ಪಾಠಗಳನ್ನು ಬೋಧಿಸುವ ಜೊತೆಗೆ, ನೋಟ್ಸ್ ನೀಡುವ ಹಾಗೂ ಸಾಮಾನ್ಯ ಜ್ಞಾನಕ್ಕೂ ಸ್ಪಂದಿಸುವ ವೈಶಿಷ್ಟ್ಯ ಹೊಂದಿದೆ. ಸುಮಾರು ₹3.50 ಲಕ್ಷ ವೆಚ್ಚದಲ್ಲಿ ಈ ತಂತ್ರಜ್ಞಾನ ಅಳವಡಿಸಲಾಗಿದ್ದು, ದಾನಿಗಳು ಮತ್ತು ಹಳೆ ವಿದ್ಯಾರ್ಥಿಗಳ ಸಹಕಾರದಿಂದ ಇದು ಸಾಧ್ಯವಾಗಿದೆ.

Priyank Kharge : ಏನ್‌ ಗೊತ್ತಾ ಹೇಮಂತ್‌ ಭೀಷ್ವಾ ಶರ್ಮಾಗೆ ಖಡಕ್‌ ಟಾಂಗ್‌ ಕೊಟ್ಟ ಪ್ರಿಯಾಂಖ ಖರ್ಗೆ.! #pratidhvani

ಶಾಲಾ ಅಭಿವೃದ್ಧಿಗಾಗಿ ಟ್ರಸ್ಟ್ ಕಳೆದ 10 ವರ್ಷಗಳಲ್ಲಿ ಸುಮಾರು ₹3 ಕೋಟಿ ವೆಚ್ಚ ಮಾಡಿದ್ದು, ಸ್ಮಾರ್ಟ್ ತರಗತಿಗಳು, ಉಚಿತ ನೋಟ್‌ಬುಕ್‌ಗಳು, ಸಮವಸ್ತ್ರ, ಸಾರಿಗೆ ಸೌಲಭ್ಯ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಿದೆ. ಗ್ರಾಮೀಣ ಪ್ರದೇಶದಲ್ಲಿಯೂ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ಪರಿಚಯಿಸುವ ಮೂಲಕ ವಂಡ್ಸೆ ಶಾಲೆ ಹೊಸ ದಿಕ್ಕು ತೋರಿಸಿದೆ.

Tags: AI TeacherDigital LearningGovernment School InnovationIris RobotKarnataka EducationpratidavaniRural EducationSmart ClassroomTechnology in Education
Previous Post

ಭೂಮಿಗೆ ಮೀರಿದ ಜನಸಂಖ್ಯೆ ಒತ್ತಡ: 2070ರೊಳಗೆ ಗಂಭೀರ  ಸಂಕಟದ ಎಚ್ಚರ

Next Post

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

Related Posts

ಜಿಬಿಎ ವ್ಯಾಪ್ತಿಯ 5 ಪಾಲಿಕೆಗಳ ಚುನಾವಣೆಗೆ ಮುಹೂರ್ತ ಫಿಕ್ಸ್!‌ : ರಾಜ್ಯ ಸರ್ಕಾರಕ್ಕೆ ಬಿಗ್‌ ಶಾಕ್..!
Top Story

ಜಿಬಿಎ ವ್ಯಾಪ್ತಿಯ 5 ಪಾಲಿಕೆಗಳ ಚುನಾವಣೆಗೆ ಮುಹೂರ್ತ ಫಿಕ್ಸ್!‌ : ರಾಜ್ಯ ಸರ್ಕಾರಕ್ಕೆ ಬಿಗ್‌ ಶಾಕ್..!

by ಪ್ರತಿಧ್ವನಿ
May 8, 2026
0

ಬೆಂಗಳೂರು : ಸುಪ್ರೀಂ ಕೋರ್ಟ್‌ ಸೂಚನೆಯಂತೆ ಜೂ. 20 ರಿಂದ 24ರೊಳಗೆ ಗ್ರೇಟರ್‌ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಚುನಾವಣೆ ನಡೆಸಲಾಗುವುದು ಎಂದು ರಾಜ್ಯ...

Read moreDetails
ಸಾಕ್ಷಿ ಹೇಳಲು ತೆರಳಿದ್ದ ವ್ಯಕ್ತಿ ಗಡಿಭಾಗದಲ್ಲಿ ಶವವಾಗಿ ಪತ್ತೆ: ಜೋಡಿ ಕೊಲೆ ಪ್ರಕರಣಕ್ಕೆ ಹೊಸ ತಿರುವು!

ಸಾಕ್ಷಿ ಹೇಳಲು ತೆರಳಿದ್ದ ವ್ಯಕ್ತಿ ಗಡಿಭಾಗದಲ್ಲಿ ಶವವಾಗಿ ಪತ್ತೆ: ಜೋಡಿ ಕೊಲೆ ಪ್ರಕರಣಕ್ಕೆ ಹೊಸ ತಿರುವು!

May 8, 2026
ರಾಜಾಹುಲಿಯ ಅಭಿಮಾನೋತ್ಸವ : ಬಿಜೆಪಿ ಪಾಲಿಗೆ ಮಹತ್ವವಾಗಿರುವ ಕಾರ್ಯಕ್ರಮದ ಸಿದ್ಧತೆ ಕೋಟೆ ನಾಡಲ್ಲಿ ಹೇಗಿದೆ..?

ರಾಜಾಹುಲಿಯ ಅಭಿಮಾನೋತ್ಸವ : ಬಿಜೆಪಿ ಪಾಲಿಗೆ ಮಹತ್ವವಾಗಿರುವ ಕಾರ್ಯಕ್ರಮದ ಸಿದ್ಧತೆ ಕೋಟೆ ನಾಡಲ್ಲಿ ಹೇಗಿದೆ..?

May 7, 2026
ಚುನಾವಣೆ ಪ್ರಜಾಪ್ರಭುತ್ವ ಮತ್ತು ಜನ

ಚುನಾವಣೆ ಪ್ರಜಾಪ್ರಭುತ್ವ ಮತ್ತು ಜನ

May 7, 2026
“ಕಾಂಗ್ರೆಸ್ ಬೆಂಬಲಿತ ಬುದ್ದಿಜೀವಿಗಳು ಎಂದರೆ ಯಾರು ಎನ್ನುವುದನ್ನು ಸ್ಪಷ್ಟಪಡಿಸಲಿ”

“ಕಾಂಗ್ರೆಸ್ ಬೆಂಬಲಿತ ಬುದ್ದಿಜೀವಿಗಳು ಎಂದರೆ ಯಾರು ಎನ್ನುವುದನ್ನು ಸ್ಪಷ್ಟಪಡಿಸಲಿ”

May 6, 2026
Next Post
ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

ದೋಸೆ ಹಿಟ್ಟು ದುರಂತಕ್ಕೆ ಹೊಸ ತಿರುವು: ಮಕ್ಕಳ ಸಾವು ಪ್ರಕರಣದಲ್ಲಿ  ಕಾರಣ ಬೇರೆ ಇದೆ!

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada