ಮೈಸೂರು : ಮಾ.19: ಬ್ರಾಹ್ಮಣ ಸಮುದಾಯವಾಯ್ತು ಈಗ ಲಿಂಗಾಯತರ ಸರದಿ..ಹೌದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರನ್ನ ವೀರಶೈವ ಲಿಂಗಾಯತ ಮುಖಂಡರು ಭೇಟಿಯಾಗಿ ಎಸ್.ಎ.ರಾಮದಾಸ್ ಅವರಿಗೆ ಈ ಭಾರಿ ಟಿಕೆಟ್ ನೀಡಬೇಡಿ ಎಂದು ಮನವಿಮಾಡಿದ್ದಾರೆ.


ಯಡಿಯೂರಪ್ಪ ಅವರ ನಿವಾಸಕ್ಕೆ ಆಗಮಿಸಿದ ವೀರಶೈವ-ಲಿಂಗಾಯತ ಮತದಾರರ ಜಾಗೃತ ಒಕ್ಕೂಟ ಮುಖಂಡರು, ಮೈಸೂರಿನ ಜಿಲ್ಲೆಯ ಕೆ.ಆರ್.ಪೇಟೆ ಶಾಸಕರಾದ ರಾಮದಾಸ್ ವಿರುದ್ಧ ಅಸಮಾಧಾನ ಹೊರಹಾಕಿದರು. ಯಾರಿಗಾದರು ಟಿಕೆಟ್ ನೀಡಿ ಆದ್ರೆ ರಾಮದಾಸ್ ಅವರಿಗೆ ಮಾತ್ರ ಟಿಕೆಟ್ ನೀಡಬೇಡಿ ಎಂದು ಯಡಿಯೂರಪ್ಪ ಅವರ ಬಳಿ ಮನವಿ ಮಾಡಿಕೊಂಡರು.. ಇದರ ಜೊತೆ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಅವರಿಗೂ ಪತ್ರ ಬರೆದಿರುವ ವೀರಶೈವ-ಲಿಂಗಾಯತ ಮುಖಂಡರು ಶಾಸಕ ರಾಮದಾಸ್ ಅವರಿಗೆ
ಟಿಕೆಟ್ ನೀಡದಂತೆ ಮನವಿ ಮಾಡಿಕೊಂಡಿದ್ದಾರೆ..