ಬೀದರ್ : ಮಾ.19 : ನಿನ್ನೆ ಜಿಲ್ಲಾ ಚುನಾವಣಾಧಿಕಾರಿಗಳು, ಜಿಲ್ಲೆಯ ಔರಾದ್ ತಾಲೂಕಿನಲ್ಲಿ ಚುನಾವಣಾ ಕಾರ್ಯ ನಿರ್ವಹಣೆ ಹಾಗೂ ತರಬೇತಿಯನ್ನು ಕೈಗೊಂಡಿರುತ್ತಾರೆ. ಈ ಬಗ್ಗೆ ಔರಾದ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಪ್ರ.ದ.ಸ. ವಿಠ್ಠಲರಾವ ಮತ್ತು ಔರಾದ(ಬಿ) ಸಹಾಯಕ ತೋಟಗಾರಿಕೆ ಅಧಿಕಾರಿ ರಾಜಕುಮಾರ ಇವರಿಗೆ ಮುಂಚಿತವಾಗಿ ತಿಳಿಸಿದರೂ ಯಾವುದೇ ಮುನ್ಸೂಚನೆ ನೀಡದೇ ಮೇಲಾಧಿಕಾರಿಗಳ ಅನುಮತಿ ಪಡೆಯದೇ ತರಬೇತಿಗೆ ಗೈರು ಹಾಜರಾಗಿರುತ್ತಾರೆ. ಚುನಾವಣಾಕಾರ್ಯ ಮಹತ್ವದಾಗಿರುತ್ತದೆ. ಗೈರು ಹಾಜರಾಗಿರುವುದರಿಂದ ಚುನಾವಣಾ ಕಾರ್ಯದಲ್ಲಿ ತೊಡಕನ್ನು ಉಂಟು ಮಾಡಿರುತ್ತಾರೆ.
ಇದರಿಂದಾಗಿ ತಾಳೂಕಿನಲ್ಲಿ ಸಮಾಜ ವಿರೋಧಿ ಕಾರ್ಯಗಳು ನೀತಿಗಳು ಉಲ್ಭಣಗೊಳ್ಳುವುದು, ಜಿಲ್ಲಾ ಚುನಾವಣಾಧಿಕಾರಿಗಳ ಗಮನಕ್ಕೆ ಬಾರದೇ ಇರುವುದರಿಂದ ಚುನಾವಣಾ ನೀತಿ ಉಲ್ಲಂಘನೆಯಾಗುವ ಸಾಧ್ಯತೆ ಇರುತ್ತದೆ. ಪ್ರಯುಕ್ತ ಕರ್ನಾಟಕ ನಾಗರೀಕ ಸೇವಾ ನಿಯಮಗಳು 1957ರ ನಿಯಮ 10(1)(ಡಿ) ಹಾಗೂ ಪ್ರಜಾ ಪ್ರತಿನಿಧಿ ಕಾಯ್ದೆ 1951ರ ನಿಯಮಗಳನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ ಔರಾದ(ಬಿ) ಪಂಚಾಯತ ರಾಜ್ ಇಂಜಿನಿಯರಿಂಗ್ ಉಪ ವಿಭಾಗದ ಪ್ರ.ದ.ಸ. ವಿಠ್ಠಲರಾವ ಮತ್ತು ಔರಾದ(ಬಿ) ಸಹಾಯಕ ತೋಟಗಾರಿಕೆ ಅಧಿಕಾರಿ ರಾಜಕುಮಾರ ಇವರಿಬ್ಬರನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಗೋವಿಂದರೆಡ್ಡಿ ಆದೇಶಿಸಿದ್ದಾರೆ.

ಹಾಗೂ ಸದರಿಯವರು ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡತಕ್ಕದ್ದಲ್ಲ ಹಾಗೂ ನಿಯಮಾನುಸಾರ ಜೀವನಾಂಶ ಭತ್ಯೆ ಪಡೆಯಲು ಅರ್ಹರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿಗಳ ಕಾರ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.