• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, May 2, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಅಧಿವೇಶನದ ಬಳಿಕ ಡಿಕೆಶಿ ಸಿಎಂ ಆಗೇ ಆಗ್ತಾರೆ…!! ‌ ಯತೀಂದ್ರಗೆ ಕೌಂಟರ್‌ ನೀಡಿದ ಇಕ್ಬಾಲ್‌ ಹುಸೇನ್.

ಪ್ರತಿಧ್ವನಿ by ಪ್ರತಿಧ್ವನಿ
December 12, 2025
in Top Story, ಅಂಕಣ, ಇದೀಗ, ಕರ್ನಾಟಕ, ದೇಶ, ರಾಜಕೀಯ, ವಾಣಿಜ್ಯ, ವಿಶೇಷ, ಸರ್ಕಾರಿ ಗೆಜೆಟ್
0
Share on WhatsAppShare on FacebookShare on Telegram

ADVERTISEMENT

ಬೆಳಗಾವಿ : ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ವಿಚಾರ ಅಧಿವೇಶದನದ ಸಮಯದಲ್ಲಿಯೂ ನಿಲ್ಲುವಂತೆ ಕಾಣುತ್ತಿಲ್ಲ. ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ ಇಬ್ಬರೂ ಬ್ರೇಕ್‌ ಫಾಸ್ಟ್‌ ಮೀಟಿಂಗ್‌ ನಡೆಸಿದ್ದಾರೆ. ಎರಡು ಸುತ್ತಿನ ಮೀಟಿಂಗ್‌ ಮೂಲಕ ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ, ನಾವಿಬ್ರೂ ಬ್ರದರ್ಸ್‌ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಎಂದಿದ್ದರು. ಅಲ್ಲದೆ ನಾವು ಭೇಟಿಯಾಗಿ ಅಧಿವೇಶನದಲ್ಲಿ ಪಕ್ಷದ ಹಾಗೂ ಸರ್ಕಾರಗಳ ಮುಂದಿನ ನಡೆಯ ಬಗ್ಗೆ ಚರ್ಚಿಸಿದ್ದೇವೆ ಎಂದು ಹೇಳಿದ್ದರು.

ಬೆಂಗಳೂರಿನಲ್ಲಿ ನಡೆಯುತ್ತಿದ್ದ ಪಟ್ಟದ ಆಟಕ್ಕೆ ತೆರೆ ಬಿದ್ದಂತೆ ಕಂಡು ಬಂದಿತ್ತು. ಇಡೀ ರಾಜ್ಯ ಸರ್ಕಾರವೇ ಬೆಳಗಾವಿಯಲ್ಲಿದೆ. ಈ ಹೊತ್ತಿನಲ್ಲಿಯೇ ಸಿದ್ದರಾಮಯ್ಯ ಪುತ್ರ ವಿಧಾನಪರಿಷತ್‌ ಸದಸ್ಯ ಡಾ.ಯತೀಂದ್ರ ಡಿಕೆ ಬಣವನ್ನು ಕೆರಳಿಸುವ ಕೆಲಸ ಮಾಡಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ 3 ಬಾರಿ ನಾಯಕತ್ವದ ಬದಲಾವಣೆಯ ಬಗ್ಗೆ ಸರಣಿ ಹೇಳಿಕೆಗಳನ್ನು ನೀಡಿದ್ದರು. ನಾಯಕತ್ವ ಬದಲಾವಣೆಯ ಬಗ್ಗೆ ಹೈಕಮಾಂಡ್‌ ತೀರ್ಮಾನಿಸಿಲ್ಲ, ಸಿದ್ದರಾಮಯ್ಯನವ್ರೇ ಪೂರ್ಣಾವಧಿ ಮುಂದುವರೆಯುತ್ತಾರೆ ಎಂದಿದ್ದರು. ಇದಾದ ಬಳಿಕ ತಕ್ಷಣ ಡಿಕೆಶಿ ಆಪ್ತ ಶಾಸಕ, ಸಚಿವರ ಡಿನ್ನರ್‌ ಮೀಟಿಂಗ್‌ ನಡೆಸಿ ಮುಂದಿನ ಹೆಜ್ಜೆಯ ಬಗ್ಗೆ ಚರ್ಚಿಸಿದ್ದಾರೆ.

ಇನ್ನೂ ಬೆಳಗಾವಿಯ ಉದ್ಯಮಿಯೊಬ್ಬರ ಎಸ್ಟೇಟ್‌ನಲ್ಲಿ ಖುದ್ದು ಡಿಸಿಎಂ ಸಹೋದರ ಮಾಜಿ ಸಂಸದ ಡಿಕೆ ಸುರೇಶ್‌ ಇಡೀ ಡಿನ್ನರ್‌ ಸಭೆಯನ್ನು ಆಯೋಜಿಸಿದ್ದರು. ಅದರಲ್ಲಿ ಯತೀಂದ್ರ ಹೇಳಿಕೆಗಳು, ಹೈಕಮಾಂಡ್‌ ಮುಂದೆ ತಮ್ಮ ಬೇಡಿಕೆ ಮಂಡನೆಯ ಬಗ್ಗೆ ಸಮಾಲೋಷನೆಯಾಗಿದೆ. ಇದಾದ ಬಳಿಕವೇ ಡಿಕೆ ಬಣ ಈಗ ವೈಲೆಂಟ್‌ ಆಗಿದ್ದು ಅಧಿವೇಶನದ ಬಳಿಕವೇ ಡಿಕೆ ಸಿಎಂ ಎಂಬ ಸ್ಫೋಟಕ ಹೇಳಿಕೆ ಹೊರಬಿದ್ದಿದೆ.

ಸಂಕ್ರಾಂತಿ ಅಲ್ಲ, ಅಧಿವೇಶನ ಮುಗಿದ ಕೂಡಲೇ ಡಿ. ಕೆ. ಶಿವಕುಮಾರ್ ಸಿಎಂ ಆಗ್ತಾರೆ. ನನ್ನ ಹಣೆಯಲ್ಲಿ ಬರೆದಿದ್ದಕ್ಕೆ ನಾನು ಎಂಎಲ್ಎ ಆಗಿಲ್ಲವೇ?. ಹಾಗೆಯೇ ಡಿ. ಕೆ. ಶಿವಕುಮಾರ್ ಅವರ ಹಣೆಯಲ್ಲಿ ಬರೆದಿದೆ. ಅವರು ಸಿಎಂ ಆಗುತ್ತಾರೆ. ನಿನ್ನೆ ನಾವು 55 ಜನ ಶಾಸಕರು ಊಟಕ್ಕೆ ಸೇರಿದ್ದೆವು. ಊಟ ಮಾಡಿದ್ದೇವೆ ಅಷ್ಟೇ. ನಮಗೆ ಡಿ. ಕೆ. ಶಿವಕುಮಾರ್ ಸಿಎಂ ಆಗಬೇಕು, ಆಗುತ್ತಾರೆ ಎನ್ನುವ ಮೂಲಕ ರಾಮನಗರ ಶಾಸಕ ಇಕ್ಬಾಲ್‌ ಹುಸೇನ್‌ ಸಂಚಲನ ಮೂಡಿಸಿದ್ದಾರೆ.

ಡಿ. ಕೆ. ಶಿವಕುಮಾರ್ ಕಷ್ಟ ಪಟ್ಟಿದ್ದಾರೆ ಅದಕ್ಕೆ ಫಲ ಸಿಗುತ್ತದೆ. ಆದಷ್ಟು ಬೇಗ ಈಡೇರುತ್ತದೆ. ಅಧಿವೇಶನ ಮುಗಿದ ಬಳಿಕ ಆದಷ್ಟು ಬೇಗ ಆಗಿಯೇ ಆಗುತ್ತದೆ. ಇಲ್ಲಿ ನಂಬರ್ ಮುಖ್ಯ ಅಲ್ಲ, ಹೈಕಮಾಂಡ್​ನ ನಿರ್ದೇಶನ ಮುಖ್ಯವಾಗಿದೆ. ಹೈಕಮಾಂಡ್ ಎಲ್ಲವನ್ನೂ ತೀರ್ಮಾನಿಸುತ್ತದೆ. ಹೈಕಮಾಂಡ್ ಹೇಳಿದರೆ ಯಾರು ಯಾಕೆ ಕೇಳಲ್ಲ?. ಎಲ್ಲರೂ ಆದೇಶ ಪಾಲನೇ ಮಾಡಲೇಬೇಕು. ಯಾರ್ಯಾರಿಗೆ ಯಾವ್ಯವಾ ಕನಸುಗಳು ಬೀಳುತ್ತವೆ ಎಂದು ಯತೀಂದ್ರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

50 ರಿಂದ 60 ಜನರು ಡಿನ್ನರ್​ಗೆ ಕೂಡಿದ್ರು. ಆದರೆ, ಅಲ್ಲಿ ರಾಜಕೀಯ ಚರ್ಚೆ ಆಗಿಲ್ಲ. ಡಿ. ಕೆ. ಶಿವಕುಮಾರ್ ಕರೆದರೆ ಎಲ್ಲ 224 ಜನ ಶಾಸಕರೂ ಊಟಕ್ಕೆ ಬರ್ತಾರೆ. ಇದರಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಎಂಬುದು ಏನಿಲ್ಲ. ವಿಶ್ವಾಸ, ಪ್ರೀತಿ, ಒಂದು ಬಾಂಧವ್ಯವಿರುತ್ತದೆ. ಎಲ್ಲರೂ ಡಿಕೆಶಿಗೆ ಆತ್ಮೀಯರೇ, ಎಲ್ಲರೂ ಸ್ನೇಹಿತರೇ. ಅವರವರ ಪಕ್ಷದಲ್ಲಿ ಗುರುತಿಸಿಕೊಳ್ತಾರೆ. ಕಾಂಗ್ರೆಸ್ ಪಕ್ಷ ಶಿಸ್ತಿನ ಪಕ್ಷವಾಗಿದೆ. ಹೈಕಮಾಂಡ್‌ ನಮಗೆ ಅಂತಿಮವಾಗಿದೆ ಎಂದು ಶಾಸಕ ಇಕ್ಬಾಲ್‌ ಹುಸೇನ್‌ ಡಿಕೆಶಿ ಪರ ಬ್ಯಾಟ್‌ ಬೀಸಿದ್ದಾರೆ.

Tags: dj yatindra edm mixDK ShivakumaDK ShivakumarIqbal Hussainmlc yatindraYateendrayateendra siddaramaiahyateendrapravanayathindra news updateYathindra Siddaramaiahyathindra siddaramaiah statementYatindrayatindra controversyyatindra latestyatindra shocking statementYatindra Siddaramaiahyatindra siddaramaiah latest newsyatindra siddaramaiah speechyatindra siddaramaihyatindra statementyatindra statement sparks buzz
Previous Post

Winter Session 2025: ʼಬಗರ್ ಹುಕುಂ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣʼ

Next Post

ಬಗರ್ ಹುಕುಂ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು-ಭೂ ಮಾಫಿಯಾ ವಿರುದ್ಧ ಕ್ರಿಮಿನಲ್ ಪ್ರಕರಣ: ಕೃಷ್ಣ ಬೈರೇಗೌಡ

Related Posts

ಜೀವಾವಧಿ ಶಿಕ್ಷೆ ಹಿನ್ನೆಲೆ ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅಮಾನ್ಯ – ಧಾರವಾಡ ಕ್ಷೇತ್ರ ಖಾಲಿ
ರಾಜಕೀಯ

ಜೀವಾವಧಿ ಶಿಕ್ಷೆ ಹಿನ್ನೆಲೆ ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅಮಾನ್ಯ – ಧಾರವಾಡ ಕ್ಷೇತ್ರ ಖಾಲಿ

by ಪ್ರತಿಧ್ವನಿ
May 2, 2026
0

ಧಾರವಾಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ಶಾಸಕ ಸ್ಥಾನವನ್ನು ಸರ್ಕಾರ ಅಧಿಕೃತವಾಗಿ ಅಮಾನ್ಯಗೊಳಿಸಿರುವುದು ರಾಜ್ಯ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ...

Read moreDetails
ಕೊಹಿನೂರ್ ವಿಚಾರದಿಂದ ವಿವಾದ: ನ್ಯೂಯಾರ್ಕ್ ಮೇಯರ್ ಮಮ್ದಾನಿ ಹೇಳಿಕೆಗೆ ಟೀಕೆಗಳ ಮಳೆ

ಕೊಹಿನೂರ್ ವಿಚಾರದಿಂದ ವಿವಾದ: ನ್ಯೂಯಾರ್ಕ್ ಮೇಯರ್ ಮಮ್ದಾನಿ ಹೇಳಿಕೆಗೆ ಟೀಕೆಗಳ ಮಳೆ

May 2, 2026
ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

ಮಿತಿಮೀರಿದ ವ್ಹೀಲಿಂಗ್‌ ಪುಂಡರ ಅಟ್ಟಹಾಸ : ಬುದ್ಧಿವಾದ ಹೇಳಿದ ದಂಪತಿ ಮೇಲೆ ಮನಸೋ ಇಚ್ಚೆ ಹಲ್ಲೆ..

May 2, 2026
ನಗರ ಸಂಚಾರಕ್ಕೆ ತಾತ್ಕಾಲಿಕ ತಡೆ: ಪ್ರಮುಖ ಮೇಲ್ಸೇತುವೆ ಬಂದ್, ವಾಹನ ಸವಾರರಿಗೆ ಎಚ್ಚರಿಕೆ

ನಗರ ಸಂಚಾರಕ್ಕೆ ತಾತ್ಕಾಲಿಕ ತಡೆ: ಪ್ರಮುಖ ಮೇಲ್ಸೇತುವೆ ಬಂದ್, ವಾಹನ ಸವಾರರಿಗೆ ಎಚ್ಚರಿಕೆ

May 2, 2026
ಖಮೇನಿ ಆರೋಗ್ಯದ ಬಗ್ಗೆ ವದಂತಿಗಳಿಗೆ ತೆರೆ:  ಇರಾನ್ ಸ್ಪಷ್ಟನೆ

ಖಮೇನಿ ಆರೋಗ್ಯದ ಬಗ್ಗೆ ವದಂತಿಗಳಿಗೆ ತೆರೆ:  ಇರಾನ್ ಸ್ಪಷ್ಟನೆ

May 2, 2026
Next Post

ಬಗರ್ ಹುಕುಂ ಅಕ್ರಮದಲ್ಲಿ ಭಾಗಿಯಾದ ಅಧಿಕಾರಿಗಳು-ಭೂ ಮಾಫಿಯಾ ವಿರುದ್ಧ ಕ್ರಿಮಿನಲ್ ಪ್ರಕರಣ: ಕೃಷ್ಣ ಬೈರೇಗೌಡ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada