ಬೆಂಗಳೂರು : ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದ ಸದಸ್ಯರಿಗೆ ಖಾತೆಗಳನ್ನು ಹಂಚಿಕೆ ಮಾಡಿರುವ ಮಾಹಿತಿ ಲಭ್ಯವಾಗಿದೆ. ಪ್ರಮುಖವಾಗಿ ಮಂತ್ರಿಗಿರಿಯನ್ನು ನೀಡುವ ವೇಳೆಯಲ್ಲೂ ಹಲವು ಲೆಕ್ಕಾಚಾರಗಳನ್ನು ಮಾಡಿಕೊಂಡಿದ್ದ, ಹೈಕಮಾಂಡ್ ಖಾತೆಗಳ ಹಂಚಿಕೆಯಲ್ಲೂ ಜಾಣತನ ತೋರಿದೆ. ಈಗಾಗಲೇ ಖಾತೆ ಹಂಚಿಕೆಯ ಪಟ್ಟಿ ಸಿದ್ಧವಾಗಿದ್ದು, ರಾಜ್ಯಪಾಲರ ಅಂಕಿತಕ್ಕಾಗಿ ಲೋಕಭವನಕ್ಕೆ ರವಾನಿಸಲಾಗಿದ್ದು, ಅದಕ್ಕಾಗಿ ಸಿಎಂ ಕಾಯುತ್ತಿದ್ದಾರೆ.
ಎಲ್ಲವೂ ಅಂದುಕೊಂಡಂತೆ ಆದರೆ ರಾಜ್ಯಪಾಲರು ಅಂಕಿತ ನೀಡಿದ ಬಳಿಕ ಇಂದು ಸಂಜೆಯ ಹೊತ್ತಿಗೆ ಖಾತೆಗಳನ್ನು ಅಧಿಕೃತವಾಗಿ ಹಂಚಿಕೆ ಮಾಡಲಾಗುವುದು. ಅಲ್ಲದೆ ಈ ಮೂಲಕ ನಾಳೆಯಿಂದ ನಡೆಯುವ ಮುಂಗಾರು ಅಧಿವೇಶನದಲ್ಲಿ ಸಚಿವರು ಖಾತೆಗಳ ಜವಾಬ್ದಾರಿಯೊಂದಿಗೆ ಭಾಗಿಯಾಗಲಿದ್ದಾರೆ.
ಯಾರಿಗೆ ಯಾವ ಖಾತೆ..?
ಕೆ.ಎಸ್. ಬಸವಂತಪ್ಪ – ಬಂದರು ಮತ್ತು ಮೀನುಗಾರಿಕೆ ಇಲಾಖೆ
ಮಧು ಬಂಗಾರಪ್ಪ –ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ
ಎಚ್.ಸಿ. ಬಾಲಕೃಷ್ಣ – ಸಣ್ಣ ನೀರಾವರಿ ಇಲಾಖೆ
ಕೆ. ಎಚ್. ಮುನಿಯಪ್ಪ – ಸಮಾಜ ಕಲ್ಯಾಣ ಇಲಾಖೆ
ಸಂತೋಷ್ ಲಾಡ್ – ಕಾರ್ಮಿಕ ಇಲಾಖೆ
ಬಸವರಾಜ ರಾಯರೆಡ್ಡಿ – ಉನ್ನತ ಶಿಕ್ಷಣ ಇಲಾಖೆ
ಬಿ. ಝಡ್. ಜಮೀರ್ ಅಹ್ಮದ್ ಖಾನ್ – ವಸತಿ ಇಲಾಖೆ
ಯು. ಟಿ. ಖಾದರ್ – ಆರೋಗ್ಯ, ಅಲ್ಪಸಂಖ್ಯಾತರ ಕಲ್ಯಾಣ ಹಾಗೂ ವಕ್ಫ್ ಇಲಾಖೆ
ಲಕ್ಷ್ಮಣ್ ಸವದಿ – ಸಹಕಾರ ಇಲಾಖೆ
ಡಾ. ಅಜಯ್ ಸಿಂಗ್ – ಅರಣ್ಯ ಇಲಾಖೆ
ಎಸ್. ಎಸ್. ಮಲ್ಲಿಕಾರ್ಜುನ – ಗಣಿ ಮತ್ತು ಭೂವಿಜ್ಞಾನ ಇಲಾಖೆ
ಪುಟ್ಟರಂಗಶೆಟ್ಟಿ – ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
ಎಸ್.ಎಸ್. ಮಲ್ಲಿಕಾರ್ಜುನ : ಗಣಿ ಮತ್ತು ಭೂ ವಿಜ್ಞಾನ ಇಲಾಖೆ
ಡಾ. ಅಜಯ್ ಸಿಂಗ್ : ಅರಣ್ಯ ಇಲಾಖೆ
ರಿಜ್ವಾನ್ ಅರ್ಷದ್ : ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ
ಎಚ್.ಸಿ. ಬಾಲಕೃಷ್ಣ : ಸಣ್ಣ ನೀರಾವರಿ ಇಲಾಖೆ
ಎನ್.ಚಲುವರಾಯಸ್ವಾಮಿ : ಕೃಷಿ ಇಲಾಖೆ






