ಮಾಜಿ ಮುಖ್ಯಮಂತ್ರಿ ಹಿರಿಯ ರಾಜಕಾರಣಿ ಎಸ್ ಎಂ ಕೃಷ್ಣ ಅವರ ನಿಧನದ ಹಿನ್ನಲೆ, ಅವರನ್ನು ನೆನೆದು ಡಿಸಿಎಂ ಡಿಕೆ ಶಿವಕುಮಾರ್ ಭಾವುರಾಗಿ ಕಣ್ಣೀರು ಹಾಕಿದ್ದಾರೆ.
ಬೆಂಗಳೂರಿನ ಸದಾಶಿವ ನಗರದ ಕೃಷ್ಣ ಅವರ ನಿವಾಸಕ್ಕೆ ಆಗಮಿಸಿದ್ದ ಡಿಕೆ ಶಿವಕುಮಾರ್, ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದುಕೊಂಡರು. ಈ ವೇಳೆ ಮಾತನಾಡಿದ ಡಿಕೆ, ಕೃಷ ಅವರ ಜೊತೆಗಿನ ರಾಜಕೀಯ ಹಾಗೂ ವಯಕ್ತಿಕ ಒಡನಾಟವನ್ನು ನೆನಪಿಸಿಕೊಂಡು ದುಃಖತಪ್ತರಾದರು.
![](https://pratidhvani.com/wp-content/uploads/2024/12/IMG_4714.jpeg)
ಎಸ್.ಎಂ ಕೃಷ್ಣ ಅವರು ಡಿಕೆ ಶಿವಕುಮಾರ್ ಪಾಲಿಗೆ ರಾಜಕೀಯ ಗುರುವಿನಂತೆ. ಜೊತೆಗೆ ವಯಕ್ತಿಕವಾಗಿ ಡಿಕೆ ಶಿವಕುಮಾರ್ ಕೃಷ್ಣ ಅವರಿಗೆ ಸಂಬಂಧಿ ಕೂಡ ಹೌದು. ಅವರು ನಂಗೆ ತಂದೆ ಸಮಾನರು ಎಂದು ಡಿಕೆ ಕಣ್ಣೀರು ಹಾಕಿದ್ದಾರೆ.