ಇಂದು ಮಾಜಿ ಸಿಎಂ ಎಸ್.ಎಂ.ಕೃಷ್ಣ ಸಾಹೇಬ್ರ ನಿಧನದಿಂದ ದೇಶಕ್ಕೆ ನಷ್ಟವಾಗಿದೆ. ಅವರು ಬಹಳ ಅಪರೂಪದ ರಾಜಕಾರಣಿಯಾಗಿದ್ದರು. ಕರ್ನಾಟಕ, ದೆಹಲಿಯಲ್ಲಿ ಯಾವುದೇ ಪಕ್ಷದವರನ್ನ ಕೇಳಿದ್ರೂ gentleman ರಾಜಕಾರಣಿ ಅಂತಾರೆ ಎಂದು ಕೃಷ್ಣರನ್ನ ನೆನಪಿಸಿಕೊಂಡಿದ್ದಾರೆ.
ಎಸ್.ಎಂ.ಕೃಷ್ಣ ಅವರು ಯಾವ ರೀತಿ ವಿದೇಶಾಂಗ ಸಚಿವರಾಗಿ ಕೆಲಸಮಾಡಿದ್ದು ಮಾದರಿಯಾಗಿದೆ. ದೇಶದ ಬಗ್ಗೆ ವಿದೇಶದಲ್ಲಿ ಹೆಮ್ಮೆಯಿಂದ ಮಾತಾನಾಡ್ತಿದ್ರು. ಕರ್ನಾಟಕ, ಬೆಂಗಳೂರಿಗೆ ಕೃಷ್ಣರ ಕೊಡುಗೆ ಅಪಾರವಾದದ್ದು ಎಂದಿದ್ದಾರೆ.
ನಾನು ಐಟಿಬಿಟಿ ಸಚಿವನಾದಾಗ ಕೃಷ್ಟ ಸರ್ ರನ್ನ ಬೇಟಿಯಾಗಿದ್ದೆ. ನನಗೆ ಐಟಿಬಿಟಿ ಬಗ್ಗೆ ಹಲವು ಸಲಹೆಗಳನ್ನ ನೀಡಿದ್ರು. ಅವರು ಜನ ಸೇವೆಯಲ್ಲಿದ್ದು ಲಕ್ಷಾಂತರ ಜನರ ಬದುಕನ್ನ ರೂಪಿಸಿದ್ದಾರೆ.ಈಗ ನಾವು ಬ್ರಾಂಡ್ ಬೆಂಗಳೂರು ಅಂತೀವಿ ಅದಕ್ಕೆ ಅಡಿಪಾಯ ಅವರೇ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕಾರ್ಪೊರೇಟ್ ಲೆವೆಲ್ ಗವರ್ನೆನ್ಸ್ ಕೊಟ್ಟವರು ಎಸ್ ಎಂಕೃಷ್ಟ ಸಾಹೇಬ್ರು. ರಾಜಕೀಯವಾಗಿ ಮಾತ್ರವಲ್ಲದೆ ವೈಯಕ್ತಿಕವಾಗಿ ಕೂಡ ತುಂಬಾ ನಷ್ಟವಾಗಿದೆ. ನನಗೆ ಪ್ರತಿಬಾರಿ ಸಿಕ್ಕಾಗಲೂ ರಾಜಕೀಯ ಸಲಹೆಗಳನ್ನ ನೀಡ್ತಿದ್ರು.ಇದು ಕರ್ನಾಟಕಕ್ಕೆ ತುಂಬಲಾರದ ನಷ್ಟ.ಅವರ ಕುಟುಂಬಕ್ಕೆ ಈ ದುಖಃ ಭರಿಸುವ ಶಕ್ತಿ ಸಿಗಲಿ ಎಂದು ಹೇಳಿದ್ದಾರೆ.