ಬಿಗ್ ಬಾಸ್ ಸೀಸನ್ 11 , ಸದ್ಯ 11ನೇ ವಾರಕ್ಕೆ ಕಾಲಿಟ್ಟಿದ್ದಾರೆ. ಮನೆಯಲ್ಲಿ ಇದೀಗ ಒಟ್ಟು 12 ಸ್ಪರ್ಧಿಗಳಿದ್ದು ದಿನದಿಂದ ದಿನಕ್ಕೆ ಟಾಸ್ಕ್ ಜೋರಾಗಿಯೆ ನೆಡಿತ ಇದೆ. ಇನ್ನು ನಿನ್ನೆ ಬಿಗ್ ಬಾಸ್ ಮನೆಗೆ ಸೀಸನ್ ೧೦ರ ಸ್ಪರ್ಧಿಗಳು ಎಂಟ್ರಿ ಕೊಟ್ಟು ನಾಮಿನೇಷನ್ ಪ್ರಕ್ರಿಯೆಯನ್ನು ನೆಡೆಸಿಕೊಟ್ಟಿದ್ದಾರೆ.
ಮೊದಲಿಗೆ ಬಿಗ್ ಬಾಸ್ ಮನೆಗೆ ಪ್ರತಾಪ್ ಬಂದು ಮನೆಯ ಎಲ್ಲಾ ಕಂಟೆಸ್ಟೆಂಟ್ ಗಳಿಗೂ ನಾಮಿನೇಷನ್ ಪಾಸ್ ಸಿಗುವ ಒಂದು ಟಾಸ್ಕ್ ಅನ್ನ ಆಡಿಸ್ತಾರೆ, ಅದಕ್ಕೆ ತ್ರಿವಿಕ್ರಮ್, ಶಿಶಿರ್ ಹಾಗೂ ರಜತ್ ಅವರನ್ನು ಆಯ್ಕೆ ಮಾಡುತ್ತಾರೆ.
ಮನೆಯ ಲಿವಿಂಗ್ ಏರಿಯಾದ ತುಂಬಾ ಬಲೂನ್ಗಳನ್ನ ಹಾಕಲಾಗಿರುತ್ತದೆ, ಆ ಬಲೂನ್ಗಳಲ್ಲಿ ಎರಡು ನಾಮಿನೇಷನ್ ಪಾಸ್ ಗಳನ್ನು ಕೂಡ ಇಡಲಾಗಿರುತ್ತೆ ಯಾವ ಸ್ಪರ್ಧಿ ಆ ಪಾಸ್ ಸಿಗುತ್ತದೆ,ಅವರು ಡೈರೆಕ್ಟ್ ನಾಮಿನೇಟ್ ಮಾಡಬಹುದು ಎಂಬ ಅಧಿಕಾರವಿರುತ್ತದೆ, ಈ ಟಾಸ್ಕ್ ಅಲ್ಲಿ ತ್ರಿವಿಕ್ರಮ್ ಗೆ ಎರಡೂ ಪಾಸ್ ಸಿಗುತ್ತದೆ.
ಹಾಗೂ ಇಂದಿನ ಬಿಗ್ ಬಾಸ್ ನ ಹೊಸ ಪ್ರೋಮೋ ಹೊರಬಿದ್ದಿದ್ದು ಸೀಸನ್ ೧೦ ರ ವಿನ್ನರ್ ಕಾರ್ತಿಕ್ ಬಿಗ್ ಬಾಸ್ ಮನೆಗೆ ಬಂದಿದ್ದಾರೆ, ಹಾಗೂ ನಮ್ರತಾ ಕೂಡ ಬಂದು ನಾಮಿನೇಷನ್ ಪ್ರಕ್ರಿಯೆಯನ್ನು ಮುಂದು ವರಿಸಿದ್ದಾರೆ..
ಇದೇ ನಾಮಿನೇಷನ್ ಗೆ ಕೊಟ್ಟ ಕಾರಣದಿಂದಾಗಿ ರಜತ್ ಹಾಗೂ ಧನರಾಜ್ ನಡುವೆ ಮಾತಿನ ಚಕಮಕಿ ಜೋರಾಗಿಯೇ ನಡೆಯುತ್ತದೆ. ರಜತ್ ನಿನಗೆ ಕಾರಣ ಕೊಡಲು ಬರುವುದಿಲ್ಲ ಅದಕ್ಕೆ ನಿನ್ನನ್ನ ಪಾಪು ಎನ್ನುವುದು ಅಂತಾರೆ. ಇದಕ್ಕೆ ಧನರಾಜ್ ಹೌದ ಹಾಗಾದ್ರೆ ನೀವು ಅಂಕಲ್ ಅಂತ ಹೇಳಿ ರಜತ್ ಹತ್ತಿರ ಹೋಗಿ ರಜತವರ ಕೆನ್ನೆಯನ್ನು ಮುಟ್ಟುತ್ತಾರೆ ಇದಕ್ಕೆ ಕೋಪಗೊಂಡ ರಜತ್ ಧನರಾಜ್ ಕೈ ಹಿಡಿದುಕೊಂಡು ಜಗಳಕ್ಕೆ ಹೋಗುತ್ತಾರೆ ಕೊನೆಯಲ್ಲಿ ಮಂಜು ಅವರ ಜಗಳವನ್ನ ಬಿಡಿಸುತ್ತಾರೆ.