
ದೆಹಲಿ ಪ್ರವಾಸದಲ್ಲಿ ಇರುವ ಡಿಸಿಎಂ ಡಿ.ಕೆ ಶಿವಕುಮಾರ್ ಲೋಕಸಭಾ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ನವದೆಹಲಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದು, ರಾಜ್ಯ ರಾಜಕೀಯ ವಿದ್ಯಮಾನಗಳ ಬಗ್ಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.

ಮಾಧ್ಯಮಗಳ ಜೊತೆಗೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಕಾಂಗ್ರೆಸ್ ಕಚೇರಿ ನಮಗೆಲ್ಲ ಟೆಂಪಲ್ ಇದ್ದ ಹಾಗೆ. ಜನರಲ್ ಸೆಕ್ರೆಟರಿಯನ್ನು ಭೇಟಿ ಮಾಡಿದ್ದೇನೆ. ಹೊಸ ಕಾಂಗ್ರೆಸ್ ಕಚೇರಿ ಭೂಮಿ ಪೂಜೆಗೆ ಆಹ್ವಾನ ಕೊಟ್ಟಿದ್ದೇನೆ. ಪಕ್ಷದ ಬೆಳವಣಿಗೆ ಬಗ್ಗೆ ಹೈ ಕಮಾಂಡ್ ಅವರಿಗೆ ಗೊತ್ತಿದೆ. ಪ್ರತಿ ವಿಧಾನಸಭೆಯಲ್ಲಿ ಕೆಲಸ ಮಾಡಲು ಜಿಲ್ಲಾ ಮಂತ್ರಿಗಳಿಗೆ ಡೈರೆಕ್ಷನ್ ಕೊಟ್ಟಿದ್ದೇವೆ. ಎಲ್ಲಾ ಮಂತ್ರಿಗಳು ವರ್ಕರ್ಸ್ ಮೀಟಿಂಗ್ ಮಾಡಬೇಕು. ಅದರ ವರದಿ ಮತ್ತು ಫೋಟೋಸ್ ಗಳನ್ನು ಕಳಿಸಿ ಕೊಡಲು ತಿಳಿಸಿದ್ದಾರೆ.
ಸಿಎಂ ಕುರ್ಚಿ ಬದಲಾವಣೆ ಕುರಿತ ವಿಚಾರವಾಗಿ ಮಾತನಾಡಿ, ಸದ್ಯಕ್ಕೆ ಅದರ ಬಗ್ಗೆ ಸುದ್ದಿ ಇಲ್ಲ, ಯಾವ ವಿಚಾರದ ಬಗ್ಗೆನೂ ಮಾತನಾಡಲು ಹೋಗಲ್ಲ. ಲೋಕಲ್ ಎಲೆಕ್ಷನ್ ಬಗ್ಗೆ ಕೆಲಸ ಮಾಡಲು ಹೇಳಿದ್ದಾರೆ ಎಂದಿರುವ ಡಿ.ಕೆ ಶಿವಕುಮಾರ್, ರಾಮನಗರ ಹೆಸರು ಬದಲಾವಣೆ ವಿಚಾರದಲ್ಲಿ ಮಾತನಾಡಿ, ಅದು ನಮ್ಮ ಸ್ಟೇಟ್ ಸಬ್ಜೆಕ್ಟ್. ಕುಮಾರಸ್ವಾಮಿ ಹೋಮ್ ಮಿನಿಸ್ಟರ್ ಭೇಟಿ ಮಾಡಿ ಪ್ರಯತ್ನ ಪಟ್ಟು ಬರೆದಿದ್ದಾರೆ. ಇದು ರಾಜ್ಯದ ಸಬ್ಜೆಕ್ಟ್, ಅದರನ್ನು ಕೇಳುವ ಅವಶ್ಯಕತೆ ಇಲ್ಲ. ನಮಗೂ ಕಾನೂನು ಗೊತ್ತಿದೆ, ಹೇಗೆ ಇಂಪ್ಲಿಮೆಂಟ್ ಮಾಡಬೇಕು ಮಾಡ್ತೀವಿ ಎಂದಿದ್ದಾರೆ.