2025ರ 18ನೇ ಸರಣಿಯ ಬಹುನಿರೀಕ್ಷಿತ ಐಪಿಎಲ್ (Ipl 2025) ಸೀಸನ್ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಈ ಮಧ್ಯೆ ಐಪಿಎಲ್ ಪಂದ್ಯಗಳ ಟಿಕೆಟ್ ದರ ಕಂಡು ಕ್ರಿಕೆಟ್ (Cricket) ಅಭಿಮಾನಿಗಳು ನಿಜಕ್ಕೂ ಕಂಗಾಲಾಗಿದ್ದಾರೆ.

ಹೌದು ಈಗಾಗಲೇ ಪ್ರಮುಖ ಪಂದ್ಯಗಳ ಟಿಕೆಟ್ ದರವನ್ನ ಬಹಳಷ್ಟು ಏರಿಕೆ ಮಾಡಲಾಗಿದೆ.ಈ ಬೆನ್ನಲ್ಲೇ IPL ದುಬಾರಿ ಟಿಕೆಟ್ ದರ ಕಡಿಮೆ ಮಾಡುವಂತೆ ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ.ಅದ್ರಲ್ಲೂ ಆರ್‌ಸಿಬಿ (RCB) ಪಂದ್ಯಗಳ ಟಿಕೆಟ್ ದರವನ್ನು ತಗ್ಗಿಸುವಂತೆ ಅಭಿಮಾನಿಗಳ ಬೇಡಿಕೆ ಹೆಚ್ಚಾಗಿದೆ.
ಹೀಗಾಗಿ ಟಿಕೆಟ್ ದರದ ಕುರಿತು RCB ಅಧ್ಯಕ್ಷರಿಗೆ ಪತ್ರದ ಮೂಲಕ ಕನ್ನಡ ಚಳವಳಿ ಕೇಂದ್ರ ಸಮಿತಿಗೆ ಮನವಿ ಮಾಡಲಾಗಿದೆ.ಈ ಬಾರಿ ಸೀಸನ್ ನ ಪ್ರಮುಖ ಪಂದ್ಯಾವಳಿಗಳಿಗೆ ಆರಂಭಿಕ ಟಿಕೆಟ್ ದರ 2,300 /- ರಿಂದ 47 ಸಾವಿರ ರೂಪಾಯಿವರೆಗೆ ನಿಗದಿಯಾಗಿದೆ.

ಈ ರೀತಿ ಅತಿ ದುಬಾರಿ ಟಿಕೆಟ್ ದರವನ್ನು ಪೂರೈಸಲು ಸಾಮಾನ್ಯ ಕ್ರಿಕೆಟ್ ಅಭಿಮಾನಿಗಳಿಗೆ ಅಸಾಧ್ಯವಾಗಿದೆ. ಹೀಗಾಗಿ ಈ ಮನವಿಯನ್ನು ಪರಿಗಣಿಸಿ ಟಿಕೆಟ್ ದರ ಕಡಿಮೆ ಮಾಡುವಂತೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.