ಕೇತಗಾನಹಳ್ಳಿ ಸರ್ಕಾರಿ ಜಮೀನು ಒತ್ತುವರಿ ಪ್ರಕರಣ (Ketaganahalli encroachment) ಸದ್ಯ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಅವರಿಗೆ ಕಂಟಕವಾಗೋ ಸಾಧ್ಯತೆ ಎದುರಾಗಿದೆ. ಒಂದೆಡೆ ಈ ಪ್ರಕರಣ ಕೋರ್ಟ್ ನಲ್ಲಿದ್ದು ಕೂಡಲೇ ಒತ್ತುವರಿ ತೆರವು ಮಾಡಬೇಕೆಂದು ನ್ಯಾಯಾಲಯ ಆದೇಶಿಸಿದೆ.

ಇತ್ತ ಹೆಚ್.ಡಿ ಕುಮಾರಸ್ವಾಮಿ ತಮ್ಮ ಮೇಲಿನ ಈ ಆರೋಪಗಳಿಗೆ ಸಂಬಂಧಪಟ್ಟಂತೆ ಇದು ದ್ವೇಷದ ರಾಜಕಾರಣ ಎಂದು ಪರೋಕ್ಷವಾಗಿ ಡಿಕೆ ಶಿವಕುಮಾರ್ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಅಲರ್ಟ್ ಆಗಿದ್ದು, ಈ ಬಗ್ಗೆ ಮಾಹಿತಿ ಕಲೆಹಾಕಲು ಮುಂದಾಗಿದೆ.
ಹೌದು ಈ ಕೇಸ್ ನಲ್ಲಿ ಈಗ ಕೇಂದ್ರ ಸರ್ಕಾರ ಅಲರ್ಟ್ ಆಗಿದೆ. ಈ ಕೇಸ್ ನಲ್ಲಿ ಒತ್ತುವರಿ ಆರೋಪದಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಪಾತ್ರ ಇದ್ಯಾ?ಇಲ್ಲವೇ ಕುಮಾರಸ್ವಾಮಿ ಹಾಗೂ ಕುಟುಂಬವನ್ನ ರಾಜಕೀಯವಾಗಿ ಟಾರ್ಗೆಟ್ ಮಾಡಲಾಗ್ತಿದೆಯಾ? ಎಂಬುದರ ಕುರಿತು ಮಾಹಿತಿ ಸಂಗ್ರಹಿಸಲು ಮುಂದಾಗಿದೆ.

ರಾಜ್ಯ ಸರ್ಕಾರ ಕುಮಾರಸ್ವಾಮಿ ವಿಚಾರವಾಗಿ ದ್ವೇಷದ ರಾಜಕಾರಣ ಮಾಡ್ತಿದೆಯಾ..? ಒಂದುವೇಳೆ ಈ ಕೇಸ್ ನಲ್ಲಿ ಕುಮಾರಸ್ವಾಮಿ ಪಾತ್ರ ಸಾಬೀತಾದ್ರೆ ಕೇಂದ್ರಕ್ಕೆ ಮುಜುಗರ ಉಂಟಾಗಬಹುದ ಎಂಬ ಆಯಾಮಗಳಲ್ಲಿ ಕೇಂದ್ರ ಅಲರ್ಟ್ ಆಗಿದೆ. ಹೀಗಾಗಿ ಈ ಕೇಸ್ ನನ್ಸಂಪೂರ್ಣ ಮಾಹಿತಿ ಕಲೆಹಾಕಲು ಮುಂದಾಗಿದೆ.