ಒಂದಡೇ ಸಿಎಂ ಸಿದ್ದರಾಮಯ್ಯಗೆ (Cm siddaramaiah) ಮುಡಾ ಟೆನ್ಸನ್ ಹೆಚ್ಚಾದ್ರೆ, ಮತ್ತೊಂಡೇ ಡಿಸಿಎಂ ಡಿಕೆ ಶಿವಕುಮಾರ್‌ಗೆ (Dcm Dk shivakumar) ಚನ್ನಪಟ್ಟಣದ್ದೆ ಚಿಂತೆ ಶುರುವಾಗಿದೆ. ಚನ್ನಪಟ್ಟಣ ಉಪಚುನಾವಣಾ ಕದನದ Channapattana bi election) ಮೇಲೆ ಕಣ್ಣಿಟ್ಟಿರೋ ಡಿಸಿಎಂ ಡಿಕೆಶಿ ಚನ್ನಪಟ್ಟಣಕ್ಕೆ ಭೇಟಿ ಮತ್ತೆ ಕೊಟ್ಟಿದ್ದಾರೆ.
ಇನ್ನು ಇದೇ ವೇಳೆ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (H D. kumaraswamy) ವಿರುದ್ಧ ಡಿಸಿಎಂ ಡಿಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ರು. ಕುಮಾರಸ್ವಾಮಿ ವಿನಾಃ ಕಾರಣ ಕಾಂಗ್ರಸ್ ಪಕ್ಷವನ್ನ ಅಥವಾ ತಮ್ಮನ್ನ ಎಳೆದು ತರ್ತಾರೆ ಅಂತ ಕಿಡಿಕಾರಿದ್ರು.
ಚನ್ನಪಟ್ಟಣ ಮತದಾರರನ್ನ ಉದ್ದೇಶಿಸಿ ಮಾತನಾಡಿದ ಡಿಕೆ ಇದು ಮಾಜಿ ಮುಖ್ಯಮಂತ್ರಿಗಳ ಕ್ಷೇತ್ರ. ಈ ಕ್ಷೇತ್ರದಲ್ಲಿ ಒಂದು ಗುರುಭವನ ಇಲ್ಲ, ನಾವೇ ಅವರನ್ನ ಮುಖ್ಯಮಂತ್ರಿ ಮಾಡಿದವು. ಆದ್ರೆ ಪ್ರಯೋಜನ ಆಗಲಿಲ್ಲ. ಶೀಘ್ರದಲ್ಲೇ ಜಾಗ ಗುರುತು ಮಾಡಿ ಗುರುಭವನ ನಿರ್ಮಾಣ ಮಾಡಿಕೊಡ್ತವೆ ಎಂದು ಡಿಸಿಎಂ ಡಿಕೆಶಿ ಹೇಳಿದ್ರು.