ನಟ ಮತ್ತು ಶಿವಸೇನೆ ನಾಯಕ ಗೋವಿಂದ (Govinda) ಅವರು ತಮ್ಮದೇ ಗನ್ನಿಂದ (Gun) ಕಾಲಿಗೆ ಶೂಟ್ (Shoot) ಮಾಡಿಕೊಂಡಿದ್ದಾರೆ. ಇದೀಗ ನಟ ಆಸ್ಪತ್ರೆಗೆ (Hospital) ದಾಖಲಾಗಿದ್ದಾರೆ. ಮುಂಬೈನ ಖಾಸಗಿ (Mubai) ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಐಸಿಯುನಲ್ಲಿ (ICU) ಚಿಕಿತ್ಸೆ ನೀಡಲಾಗುತ್ತಿದೆ.
ಮುಂಜಾನೆ 5 ಗಂಟಗೆ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ.ನಟನ ಮ್ಯಾನೇಜರ್ ಹೇಳಿದ್ದೇನು?:ಗೋವಿಂದ ಅವರ ಮ್ಯಾನೇಜರ್ ಶಶಿ ಸಿನ್ಹಾ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ. “ನಟ ಮತ್ತು ಶಿವಸೇನೆ ನಾಯಕ ಗೋವಿಂದ ಕೋಲ್ಕತ್ತಾಗೆ ತೆರಳಲು ತಯಾರಾಗುತ್ತಿದ್ದರು. ಈ ಸಂದರ್ಭದಲ್ಲಿ ಅವರು ರಿವಾಲ್ವರ್ ಅನ್ನು ಇಟ್ಟುಕೊಂಡಿದ್ದರು, ಅದು ಅವರ ಕೈಯಿಂದ ಬಿದ್ದು ಗುಂಡು ಅವರ ಕಾಲಿಗೆ ತಗುಲಿತು. ವೈದ್ಯರು ಗುಂಡನ್ನು ಹೊರತೆಗೆದಿದ್ದು, ಅವರ ಸ್ಥಿತಿ ಈಗ ಸ್ಥಿರವಾಗಿದೆ. ನಟ ಸದ್ಯ ಆಸ್ಪತ್ರೆಯಲ್ಲಿದ್ದಾರೆ. “ಎಂದು ಮಾಹಿತಿ ನೀಡಿದ್ದಾರೆ.
ಗೋವಿಂದ ಅವರು ಕೂಲಿ ನಂ. 1, ಹಸೀನಾ ಮಾನ್ ಜಾಯೇಗಿ, ಸ್ವರ್ಗ, ಸಾಜನ್ ಚಲೇ ಸಸುರಲ್, ರಾಜಾ ಬಾಬು, ರಾಜಾಜಿ, ಪಾಲುದಾರ ಮತ್ತು ಇತರ ಬ್ಲಾಕ್‌ಬಸ್ಟರ್ ಸಿನಿಮಾ ನೀಡಿದ್ದಾರೆ. ಪಹ್ಲಾಜ್ ನಿಹಲಾನಿ ನಿರ್ದೇಶನದ 2019 ರ ಚಲನಚಿತ್ರ ರಂಗೀಲಾ ರಾಜದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು .
ರಾಜಕೀಯಕ್ಕೆ ಎಂಟ್ರಿ! :90ರ ದಶಕದಲ್ಲಿ ಬಾಲಿವುಡ್ನ ಸೂಪರ್ ಸ್ಟಾರ್ ಅಗಿ ಮಿಂಚಿದ ನಟ ಗೋವಿಂದ ಅವರು ಇತ್ತೀಚೆಗಷ್ಟೇ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಶಿವಸೇನೆ ಸೇರಿದ್ದಾರೆ. ಸುದೀರ್ಘ ವಿರಾಮದ ನಂತರ ಗೋವಿಂದ ಮತ್ತೊಮ್ಮೆ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ.ಸಿಕ್ಕಿರುವ ಮಾಹಿತಿ ಪ್ರಕಾರ ಗೋವಿಂದ ವರ್ಷಕ್ಕೆ 12 ಕೋಟಿ ಗಳಿಸುತ್ತಿದ್ದಾರೆ. ಅವರು ಜಾಹೀರಾತಿಗೆ 1-2 ಕೋಟಿ ರೂ. ಚಾರ್ಜ್ ಮಾಡ್ತಾರೆ. ಸಿನಿಮಾ ಹೊರತಾಗಿ ಕೆಲವು ಬ್ಯುಸಿನೆಸ್ ಕೂಡ ಮಾಡ್ತಿದ್ದಾರೆ. ಪ್ರತಿ ವರ್ಷ ಕೋಟಿ ಕೋಟಿ ಆದಾಯ ಹರಿದು ಬರುತ್ತದೆ.