• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, June 3, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ದೀದಿ ಚಾವಣಿಯಲ್ಲಿ ಭಿನ್ನಮತ ಸ್ಫೋಟ : ಇಬ್ಬರು ಶಾಸಕರಿಗೆ ಗೇಟ್‌ ಪಾಸ್‌..!

ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಕಳೆದುಕೊಂಡ ನಂತರ ಪಕ್ಷ ಮರುಸಂಘಟಿಸಲು ಶಾಸಕರ ತುರ್ತು ಸಭೆ ಕರೆದಿದ್ದ ದೀದಿ..

ಪ್ರತಿಧ್ವನಿ by ಪ್ರತಿಧ್ವನಿ
June 1, 2026
in Top Story, ಇದೀಗ, ಕರ್ನಾಟಕ, ದೇಶ, ರಾಜಕೀಯ
0
ದೀದಿ ಚಾವಣಿಯಲ್ಲಿ ಭಿನ್ನಮತ ಸ್ಫೋಟ : ಇಬ್ಬರು ಶಾಸಕರಿಗೆ ಗೇಟ್‌ ಪಾಸ್‌..!
Share on WhatsAppShare on FacebookShare on Telegram

ನವದೆಹಲಿ : ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರದ ಮಧ್ಯೆ ಟಿಎಂಸಿ ಪಕ್ಷದಲ್ಲಿ ಭಿನ್ನಮತ ಸ್ಫೋಟವಾಗಿದೆ. ಈ ಹಿನ್ನೆಲೆಯಲ್ಲಿ ಇಬ್ಬರು ಶಾಸಕರನ್ನು ಮಾಜಿ ಸಿಎಂ ಹಾಗೂ ಟಿಎಂಸಿ ಅಧಿನಾಯಕಿ ಮಮತಾ ಬ್ಯಾನರ್ಜಿ ಉಚ್ಚಾಟಿಸಿದ್ದಾರೆ.

ADVERTISEMENT
Couple struck by lightning : ಚಿಕ್ಕಮಗಳೂರಿನಲ್ಲಿ ಭಾರಿ ಮಳೆಗೆ ಸಿಡಿಲು ಬಡಿದು ದಂಪತಿ ಸ್ಥಿತಿ ಗಂಭೀರ..!

ಇಂದು ಟಿಎಂಸಿಯ ಇಬ್ಬರು ಶಾಸಕರಾದ ಸಂದೀಪನ್ ಸಹಾ ಮತ್ತು ಋತಬ್ರತ ಬ್ಯಾನರ್ಜಿ ಅವರ ಮೇಲೆ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪದ ಹಿನ್ನೆಲೆಯಲ್ಲಿ ಟಿಎಂಸಿಯಿಂದ ಗೇಟ್‌ ಪಾಸ್‌ ನೀಡಲಾಗಿದೆ.

ಇನ್ನೂ ಪ್ರಮುಖವಾಗಿ ಬಂಗಾಳದ ವಿಧಾನಸಭೆಯಲ್ಲಿ ಸ್ಪೀಕರ್‌ಗೆ ಹಸ್ತಾಂತರಿಸುವ ವಿಪಕ್ಷ ಸ್ಥಾನದ ಆಯ್ಕೆ ಪಟ್ಟಿಯಲ್ಲಿ ‘ನಕಲಿ ಸಹಿ’ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ದೂರುಗಳನ್ನು ದಾಖಲಿಸಿರುವ ಬಗ್ಗೆ ಖುದ್ದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮಾಹಿತಿ ನೀಡಿದ್ದರು. ರಾಜ್ಯ ವಿಧಾನಸಭೆಯಲ್ಲಿ ಸೋಭಂದೇಬ್ ಚಟ್ಟೋಪಾಧ್ಯಾ  ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಟಿಎಂಸಿ ಅನುಮೋದಿಸಿದೆ.

ಇದನ್ನೂ ಓದಿ : ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟಿದ್ದ ಸುಮಲತಾಗೆ ಚಾನ್ಸ್!‌ : ರಾಜ್ಯಸಭೆ ಅವಕಾಶಕ್ಕೆ ಬಿಜೆಪಿ ಒಲವು..

ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಕಳೆದುಕೊಂಡ ನಂತರ ಪಕ್ಷವನ್ನು ಮರುಸಂಘಟಿಸಲು ಮಮತಾ ಕಳೆದ ಭಾನುವಾರ ಶಾಸಕರ ತುರ್ತು ಸಭೆ ಕರೆದಿದ್ದರು. ಆದರೆ, ಒಟ್ಟು 80 ಟಿಎಂಸಿ ಶಾಸಕರ ಪೈಕಿ ಕೇವಲ 20 ಶಾಸಕರು ಮಾತ್ರ ಈ ಸಭೆಗೆ ಹಾಜರಾಗಿದ್ದು, ಬರೋಬ್ಬರಿ 60 ಶಾಸಕರು ಸಭೆಯಿಂದ ದೂರ ಉಳಿದಿರುವುದು ದೀದಿ ಚಾವಣಿಯಲ್ಲಿ ಆತಂಕ ಮೂಡಿಸಿದೆ.

ಮುಖ್ಯವಾಗಿ ಪಕ್ಷದ ಅಧಿಕೃತ ಸಭೆಗಳಿಗೆ ನೀವು ಹಾಜರಾಗಿಲ್ಲ, ಅಲ್ಲದೆ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೀರಿ. ಹೀಗಾಗಿ ಪಕ್ಷದ ಸಕ್ಷಮ ಪ್ರಾಧಿಕಾರದ ಮೂಲಕ ಉಚ್ಚಾಟನೆಯ ಬಗ್ಗ ನಿಮ್ಮ ಗಮನಕ್ಕೆ ತರಲಾಗಿದೆ ಎಂದು ಉಚ್ಚಾಟಿತ  ಇಬ್ಬರೂ ಶಾಸಕರಿಗೆ ಟಿಎಂಸಿ ತಿಳಿಸಿದೆ.

ಟಿಎಂಸಿಯ ಹಿತಕ್ಕೆ ವಿರುದ್ಧವಾದ ಚಟುವಟಿಕೆಗಳಲ್ಲಿ ಭಾಗಿಯಾಗಿ, ಹೇಳಿಕೆಗಳನ್ನು ನೀಡಿದ್ದೀರಿ ಎಂದು ಗಮನಿಸಲಾಗಿದೆ. ಹೀಗಾಗಿ ನಿಮ್ಮನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಉಚ್ಚಾಟಿಸಲು ನಿರ್ಧರಿಸಲಾಗಿದೆ ಎಂದು ಪಕ್ಷದ ಉಪಾಧ್ಯಕ್ಷೆ ಚಂದ್ರಿಮಾ ಭಟ್ಟಾಚಾರ್ಯ ಸಹಿ ಮಾಡಿದ ಆದೇಶದಲ್ಲಿ ಉಲ್ಲೇಖಿಸಲಾಗಿದೆ.

Tags: BJP GovernmentMamata BanerjeeRutrbrat BanerjeeSandeepan SahaSuvendu AdhikariTMC Expelled MlasTMC MlasTrinmool Congresswest bengal politics
Previous Post

ಮಂಡ್ಯ ಕ್ಷೇತ್ರ ಬಿಟ್ಟುಕೊಟ್ಟಿದ್ದ ಸುಮಲತಾಗೆ ಚಾನ್ಸ್!‌ : ರಾಜ್ಯಸಭೆ ಅವಕಾಶಕ್ಕೆ ಬಿಜೆಪಿ ಒಲವು..

Next Post

ನ್ಯಾಯವಾದಿ ಮೇಲೆ ಖಾಕಿ ದೌರ್ಜನ್ಯ : ಅಥಣಿ ಪಿಎಸ್‌ಐ ಸೇರಿ ಸಿಬ್ಬಂದಿ ವಿರುದ್ಧ ದೂರು ದಾಖಲು..

Related Posts

ನೆಹರೂ ಅವರ 72 ವರ್ಷದ ದಾಖಲೆಗೆ ಬ್ರೇಕ್? ಜೂನ್ 10ರಂದು ಇತಿಹಾಸ ಬರೆಯಲಿರುವ ಪ್ರಧಾನಿ ಮೋದಿ!
Top Story

ವೈರಲ್ ಫೋಟೋ ನೋಡಿ ಕಳವಳಗೊಂಡ ಅಭಿಮಾನಿಗಳು: ದರ್ಶನ್ ಆರೋಗ್ಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ

by ಪ್ರತಿಧ್ವನಿ
June 2, 2026
0

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಅವರದ್ದು ಎನ್ನಲಾದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ಫೋಟೋದಲ್ಲಿ ದರ್ಶನ್ ಅವರ ಆರೋಗ್ಯ...

Read moreDetails
ದುರ್ಗಾ ಸ್ಟಾಲಿನ್–ಜಿ.ಟಿ. ದೇವೇಗೌಡ ಭೇಟಿ ರಾಜಕೀಯ ಸಂಚಲನ: ಪ್ರವಾಸದ ನಡುವೆ ನಡೆದ ಮಾತುಕತೆ ?

ದುರ್ಗಾ ಸ್ಟಾಲಿನ್–ಜಿ.ಟಿ. ದೇವೇಗೌಡ ಭೇಟಿ ರಾಜಕೀಯ ಸಂಚಲನ: ಪ್ರವಾಸದ ನಡುವೆ ನಡೆದ ಮಾತುಕತೆ ?

June 2, 2026
ನೆಹರೂ ಅವರ 72 ವರ್ಷದ ದಾಖಲೆಗೆ ಬ್ರೇಕ್? ಜೂನ್ 10ರಂದು ಇತಿಹಾಸ ಬರೆಯಲಿರುವ ಪ್ರಧಾನಿ ಮೋದಿ!

ಸಿಎಂ ಕುರ್ಚಿಗೆ ವಾಸ್ತು ಸ್ಪರ್ಶ: ಪ್ರಮಾಣವಚನಕ್ಕೂ ಮುನ್ನ ಡಿಕೆ ಶಿವಕುಮಾರ್ ಕೊಠಡಿಯಲ್ಲಿ ಅಜ್ಜಯ್ಯನ ಚಿತ್ರ ಅಳವಡಿಕೆ

June 2, 2026
ನೆಹರೂ ಅವರ 72 ವರ್ಷದ ದಾಖಲೆಗೆ ಬ್ರೇಕ್? ಜೂನ್ 10ರಂದು ಇತಿಹಾಸ ಬರೆಯಲಿರುವ ಪ್ರಧಾನಿ ಮೋದಿ!

ನೆಹರೂ ಅವರ 72 ವರ್ಷದ ದಾಖಲೆಗೆ ಬ್ರೇಕ್? ಜೂನ್ 10ರಂದು ಇತಿಹಾಸ ಬರೆಯಲಿರುವ ಪ್ರಧಾನಿ ಮೋದಿ!

June 2, 2026
ಅಥಣಿ PSI ದೌರ್ಜನ್ಯದ ವಿರುದ್ಧ ಸಿಡಿದೆದ್ದ ವಕೀಲರ ಸಂಘ : FIR ದಾಖಲಿಸದಿದ್ರೆ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ..!

ಅಥಣಿ PSI ದೌರ್ಜನ್ಯದ ವಿರುದ್ಧ ಸಿಡಿದೆದ್ದ ವಕೀಲರ ಸಂಘ : FIR ದಾಖಲಿಸದಿದ್ರೆ ರಾಜ್ಯಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ..!

June 2, 2026
Next Post
ನ್ಯಾಯವಾದಿ ಮೇಲೆ ಖಾಕಿ ದೌರ್ಜನ್ಯ : ಅಥಣಿ ಪಿಎಸ್‌ಐ ಸೇರಿ ಸಿಬ್ಬಂದಿ ವಿರುದ್ಧ ದೂರು ದಾಖಲು..

ನ್ಯಾಯವಾದಿ ಮೇಲೆ ಖಾಕಿ ದೌರ್ಜನ್ಯ : ಅಥಣಿ ಪಿಎಸ್‌ಐ ಸೇರಿ ಸಿಬ್ಬಂದಿ ವಿರುದ್ಧ ದೂರು ದಾಖಲು..

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada