• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, April 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಮಹಿಳೆಯರನ್ನು ಸಾವಿನ ದವಡೆಗೆ ದೂಡಬಲ್ಲ ಅನಿಯಮಿತ ನಿದ್ರೆ

by
April 24, 2021
in ಅಭಿಮತ
0
ಮಹಿಳೆಯರನ್ನು ಸಾವಿನ ದವಡೆಗೆ ದೂಡಬಲ್ಲ ಅನಿಯಮಿತ ನಿದ್ರೆ
Share on WhatsAppShare on FacebookShare on Telegram

ಹೊಸ ಅಧ್ಯಯನವೊಂದು ರಾತ್ರಿಯ ನಿದ್ರೆಯ ಸಮಯದ ಅರೆಸುಪ್ತಾವಸ್ಥೆ ಮತ್ತು ಹೃದಯ ಹಾಗೂ ರಕ್ತನಾಳಗಳ ಕಾಯಿಲೆಗಳಿಂದ ಸಾಯುವ ಅಪಾಯದ ನಡುವಿನ ಸ್ಪಷ್ಟ ಸಂಬಂಧವನ್ನು ತೋರಿಸಿದೆ.‌ ವಿಶೇಷವಾಗಿ ಮಹಿಳೆಯರ‌ ಆರೋಗ್ಯದ ಮೇಲೆ ಈ ಅರೆ ಸುಪ್ತಾವಸ್ಥೆ ಬೀರುವ ಪರಿಣಾಮಗಳ ಬಗ್ಗೆ ಈ ಅಧ್ಯಯನ ಬೆಳಕು ಚೆಲ್ಲಿದೆ. ಅಧ್ಯಯನದ ಆವಿಷ್ಕಾರಗಳನ್ನು ‘ಯುರೋಪಿಯನ್ ಹಾರ್ಟ್ ಜರ್ನಲ್‌’ನಲ್ಲಿ ಪ್ರಕಟಿಸಲಾಗಿದೆ.

ADVERTISEMENT

8001 ಪುರುಷರು ಮತ್ತು ಮಹಿಳೆಯರನ್ನೊಳಗೊಂಡ ಈ ಅಧ್ಯಯನವು ಅರೆಸುಪ್ತಾವಸ್ಥೆಯನ್ನು ದೀರ್ಘಕಾಲದವರೆಗೆ ಅನುಭವಿಸುವ ವಯಸ್ಕ ಮಹಿಳೆಯರು ಹೆಚ್ಚಾಗಿ ಹೃದಯರಕ್ತನಾಳದ ಕಾಯಿಲೆಯಿಂದ ಸಾಯುವ ಅಪಾಯವನ್ನು ಎದುರಿಸುತ್ತಾರೆ ಎಂದಿದೆ. ಸ್ತ್ರೀಯರ ಜನಸಂಖ್ಯೆಗೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು ಅಪಾಯಕಾರಿ ಇದು ಎಂದು ಅಧ್ಯಯನ ಅಭಿಪ್ರಾಯ ಪಟ್ಟಿದೆ.

ಪುರುಷರಲ್ಲಿ ಈ ಸಂಖ್ಯೆಯು ಇಷ್ಟು ಸ್ಪಷ್ಟವಾಗಿಲ್ಲ ಮತ್ತು ಪುರುಷ ಜನಸಂಖ್ಯೆಗೆ ಹೋಲಿಸಿದರೆ ಅವರ ಹೃದಯ ರಕ್ತನಾಳ ಕಾಯಿಲೆಯಿಂದ ಸಾಯುವ ಅಪಾಯವು ಕೇವಲ ಕಾಲು ಭಾಗದಷ್ಟು ಮಾತ್ರ ಎನ್ನುತ್ತದೆ.

ಅರೆ ಸುಪ್ತಾವಸ್ಥೆಯು ನಿದ್ರೆಯ ಒಂದು ಸಾಮಾನ್ಯ ಭಾಗ. ಇದು ಶಬ್ದ ಅಥವಾ ಉಸಿರಾಟದ ಅಡಚಣೆಯಂಥಹ ಅಪಾಯಕಾರಿ ಸಂದರ್ಭಗಳಿಗೆ ಪ್ರತಿಕ್ರಿಯಿಸುವ ದೇಹದ ಒಂದು ವಿಶಿಷ್ಟ ಸಾಮರ್ಥ್ಯವಾಗಿದೆ. ನೋಬಿ, ಅಂಗ ಚಲನೆಗಳು, ಆಘಾತ, ತಾಪಮಾನ ಮತ್ತು ಬೆಳಕಿನಂತಹ ಪ್ರಚೋದನೆಗಳಿಗೆ ದೇಹವು ಅರೆ ನಿದ್ರೆಯಲ್ಲಿ‌ ಪ್ರತಿಕ್ರಿಯಿಸುವುದೂ ಇದೇ ಸಾಮರ್ಥ್ಯದ ಭಾಗವಾಗಿ.

ಈ ಹಿಂದಿನ ಸಂಶೋಧನೆಗಳು ನಿದ್ರೆಯ ಅವಧಿಯು ತುಂಬಾ ಚಿಕ್ಕದಾದಾಗ ಅಥವಾ ತುಂಬಾ ಉದ್ದವಾದಾಗ‌ ಅದು ಹೃದಯರಕ್ತನಾಳ‌ ಅಥವಾ‌ ಇತರ ಕಾರಣಗಳಿಂದಾಗಿ ಸಾವಿನ‌‌ ಅಪಾಯ ಹೆಚ್ಚು ಎಂದು ಸಾಬೀತು ಪಡಿಸಿದ್ದವು. ಹೀಗಿದ್ದೂ ರಾತ್ರಿ ನಿದ್ರೆಯ ಸಮಯದಲ್ಲಿನ ಪ್ರಚೋದನೆಗಳು (ಪ್ರಚೋದನೆಗಳ ಸಂಖ್ಯೆ ಮತ್ತು ಅವುಗಳ ಅವಧಿಯ ಸಂಯೋಜನೆ) ಮತ್ತು ಸಾವಿನ ಸಂಭವನೀಯತೆಯ ನಡುವೆ ಸಂಬಂಧವಿದೆಯೇ ಎಂಬುವುದು ಸ್ಪಷ್ಟವಾಗಿಲ್ಲ.

ಈ ಸಂಶೋಧನೆಗಳು ಕೇವಲ ಹಿರಿಯ ನಾಗರಿಕರನ್ನು ಮತ್ತು ಬಿಳಿಯರನ್ನು ಮಾತ್ರ ಒಳಗೊಂಡಿದೆ. ಆದುದರರಿಂದ ಇತರ ವರ್ಣ, ಸಮುದಾಯ ಮತ್ತು ಯುವ ಜನಾಂಗಕ್ಕೆ ಈ ಸಂಶೋಧನೆಯ ಫಲಿತಾಂಶಗಳನ್ನು ಅನ್ವಯಿಸಲಾಗದು. ಸಂಶೋಧಕರು ಧ್ಯಾನ, ಯೋಗ ಮತ್ತು ಇತರ ಸಂಗತಿಗಳು ನಿದ್ರೆಯ ಮತ್ತು ಆರೋಗ್ಯದ ಮೇಲೆ ಬೀರಬಹುದಾಗಿರುವ ಸಂಭಾವ್ಯ ಪ್ರಭಾವವನ್ನು ಅಭ್ಯಸಿಸಿಲ್ಲ.

ನಿದ್ರೆ ಮತ್ತು ಸಿವಿಡಿ (ಹೃದಯರಕ್ತನಾಳದ ಕಾಯಿಲೆ) ನಡುವಿನ ಸಂಬಂಧದ ಕುರಿತು ಅನೇಕ ಜ್ಞಾನ ಶಾಖೆಗಳನ್ನು ಮುಂಬರುವ ವರ್ಷಗಳಲ್ಲಿ ಅಧ್ಯಯನ ಮಾಡಬೇಕಾಗಿದ್ದರೂ, ಈ ಅಧ್ಯಯನವು ಹೃದಯದ ಉತ್ತಮ ಆರೋಗ್ಯಕ್ಕಾಗಿ ಗುಣಮಟ್ಟದ ನಿದ್ರೆಯ ಮಹತ್ವ ಎಷ್ಟಿದೆ ಎಂಬುವುದಕ್ಕೆ ಸಾಕ್ಷ್ಯ ಒದಗಿಸುತ್ತದೆ.

Previous Post

ಕೊಡಗಿನಲ್ಲಿ covid ಸಾಂಕ್ರಮಿಕದ ನಡುವೆಯೇ ಸದ್ದಿಲ್ಲದೆ ನಡೆಯುತ್ತಿದೆ ಬೆಟ್ಟ ಅಗೆಯುವ ಅವೈಜ್ಞಾನಿಕ ಕಾಮಗಾರಿ

Next Post

ಮಡಿಕೇರಿ: ಒಂದು ಬೆಡ್‌ ನಲ್ಲಿ ನಾಲ್ಕು ರೋಗಿಗಳು: ಸಚಿವರಿಗೇ ಸುಳ್ಳು ಮಾಹಿತಿ ನೀಡಿದ ಅಧಿಕಾರಿಗಳ ವಂಚನೆ ಬಯಲು

Related Posts

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ
ಅಭಿಮತ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

by ಪ್ರತಿಧ್ವನಿ
April 27, 2026
0

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ 'ಗ್ಲೋಬಲ್ ರಾಜಸ್ಥಾನ ಅಗ್ರಿಟೆಕ್ ಮೀಟ್ 2026' ಅಂಗವಾಗಿ ಬೆಂಗಳೂರಿನ ರೋಡ್ ಶೋನಲ್ಲಿ ಹೂಡಿಕೆಗೆ ಕೈಗಾರಿಕೆಗಳ ಆಸಕ್ತಿ...

Read moreDetails
ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

ನಮ್ಮೊಡನಿದ್ದು ನಮ್ಮೊಳಗಿಲ್ಲದ ಅಂಬೇಡ್ಕರ್

April 17, 2026
ಭಾರತದಲ್ಲಿ ಸಮಕಾಲೀನ ಪ್ರಭುತ್ವ..

ಭಾರತದಲ್ಲಿ ಸಮಕಾಲೀನ ಪ್ರಭುತ್ವ..

March 21, 2026
ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

ಡಾ ಬಿ.ಆರ್. ಅಂಬೇಡ್ಕರ್‌ ದೃಷ್ಟಿಯಲ್ಲಿ ಪ್ರಭುತ್ವ ಮತ್ತು ಪ್ರಜಾತಂತ್ರ

March 18, 2026
ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

ಸಾಮಾಜಿಕ ಒಳಬೇನೆಯೂ ನೈತಿಕ ಅಧಃಪತನವೂ..

March 1, 2026
Next Post

ಮಡಿಕೇರಿ: ಒಂದು ಬೆಡ್‌ ನಲ್ಲಿ ನಾಲ್ಕು ರೋಗಿಗಳು: ಸಚಿವರಿಗೇ ಸುಳ್ಳು ಮಾಹಿತಿ ನೀಡಿದ ಅಧಿಕಾರಿಗಳ ವಂಚನೆ ಬಯಲು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada