Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಕಾಂಗ್ರೆಸ್​ ಸೋಲಿಸಲು ಸುಪಾರಿ ಪಡೆದಿದ್ದು ಸಿದ್ದರಾಮಯ್ಯನಾ..? ಜಮೀರಾ..?

ಕೃಷ್ಣ ಮಣಿ

ಕೃಷ್ಣ ಮಣಿ

January 22, 2023
Share on FacebookShare on Twitter

ಕರ್ನಾಟಕದಲ್ಲಿ ಕಾಂಗ್ರೆಸ್​ ಸೋಲಿಸಲು ಸುಪಾರಿ ಕೊಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ತೆಲಂಗಾಣ ಕಾಂಗ್ರೆಸ್​ ಅಧ್ಯಕ್ಷ ಕಿಶನ್​ ರೆಡ್ಡಿ ನೇರವಾಗಿ ಆರೋಪ ಮಾಡಿದ್ದಾರೆ. ಭಾರತೀಯ ರಾಷ್ಟ್ರೀಯ ಸಮಿತಿ ಪಕ್ಷದ (TRS = BRS) ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್​ ರಾವ್​ ಸುಪಾರಿ ನೀಡಿದ್ದಾರೆ ಎನ್ನುವುದು ಆರೋಪ. ಕರ್ನಾಟಕದ ರಾಜಕೀಯ ನಾಯಕನನ್ನು ಭೇಟಿ ಮಾಡಿದ್ದು, ಕಾಂಗ್ರೆಸ್​ ಪಕ್ಷವನ್ನು ಸೋಲಿಸುವ ಜಬಾವ್ದಾರಿ ನೀಡಲಾಗಿದೆ ಎಂದಿದ್ದರು. ಇನ್ನು ಇತ್ತೀಚಿಗೆ ಕಾಂಗ್ರೆಸ್​​ನಿಂದ ಅಂತರ ಕಾಯ್ದುಕೊಂಡಿರುವ ಚಾಮರಾಜಪೇಟೆ ಕಾಂಗ್ರೆಸ್​ ಶಾಸಕ ಜಮೀರ್​ ಅಹ್ಮದ್​ ಖಾನ್​ ಕಡೆಗೆ ಎಲ್ಲರ ದೃಷ್ಟಿ ನೆಟ್ಟಿತ್ತು. ಈ ನಡುವೆ ಮಹತ್ವದ ಬೆಳವಣಿಗೆ ನಡೆದಿದ್ದು, ಮೈಸೂರಿನಲ್ಲಿ ಗೌಪ್ಯವಾಗಿ ಸಿದ್ದರಾಮಯ್ಯ ಜೊತೆಗೆ ಜಮೀರ್​ ಅಹ್ಮದ್​ ಖಾನ್​ ಸಭೆ ನಡೆಸಿದ್ದು, ಮಾಧ್ಯಮಗಳು ಸಭೆಯ ಸುಳಿವು ಆಧರಿಸಿ ಸ್ಥಳಕ್ಕೆ ಹೋದಾಗ ಸಿದ್ದರಾಮಯ್ಯ ಕೆಂಡಾಮಂಡಲರಾಗಿದ್ದಾರೆ. ಈ ಸುಪಾರಿ ಹಿಂದೆ ಸಿದ್ದರಾಮಯ್ಯ ಇದ್ದಾರಾ..? ಜಮೀರ್​ ಇದ್ದಾರಾ..? ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ. 

ಹೆಚ್ಚು ಓದಿದ ಸ್ಟೋರಿಗಳು

ವಿಮಾನ ನಿಲ್ದಾಣಕ್ಕೆ ಯಾರ ಹೆಸರಾದರೂ ಇಡಲಿ, ಮೊದಲು ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲಿ: ಡಿ.ಕೆ. ಶಿವಕುಮಾರ್

D.K Shivakumar : ಏರ್‌ಪೋರ್ಟ್‌ಗೆ BSY ಹೆಸರು ಡಿಕೆಶಿ ರಿಯಾಕ್ಷನ್..! | #pratidhvaninews

ಬ್ರಾಹ್ಮಣ ಸಮೂಹವನ್ನು ನಾನು ನಿಂದಿಸಿಲ್ಲ: ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟನೆ

ಸಿದ್ದರಾಮಯ್ಯ ಮೇಲೆ ಅನುಮಾನ ಬಂದಿದ್ಯಾಕೆ..!?

ಜಮೀರ್​ ಅಹ್ಮದ್​ ಖಾನ್​ ಸಿದ್ದರಾಮಯ್ಯ ಪರಮಾಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ನಾಯಕ. ಆದರೆ ಕಳೆದ ನಾಲ್ಕೈದು ತಿಂಗಳಿಂದ ಸಿದ್ದರಾಮಯ್ಯ ಅವರಿಂದಲೂ ಅಂತರ ಕಾಯ್ದುಕೊಂಡಿದ್ದರು. ಆದರೆ 500 ಕೋಟಿ ಡೀಲ್​ ವಿಚಾರ ಬಹಿರಂಗ ಆಗುತ್ತಿದ್ದ ಹಾಗೆ ಸಿದ್ದರಾಮಯ್ಯ ಹಾಗು ಜಮೀರ್​ ಅಹ್ಮದ್​ ಖಾನ್​ ರಹಸ್ಯ ಸಭೆ ಮಾಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಿದ್ದರಾಮಯ್ಯ ಸೂಚನೆಯಿಂದಲೇ ಜಮೀರ್​ ಅಹ್ಮದ್​ ಖಾನ್​ ಕಾಂಗ್ರೆಸ್​ನಿಂದ ಅಂತರ ಕಾಯ್ದುಕೊಂಡಿದ್ದಾರಾ..? ಎನ್ನುವುದರ ಜೊತೆಗೆ 500 ಕೋಟಿ ಡೀಲನ್ನು ಜಮೀರ್​ ಅಹ್ಮದ್​ ಮೂಲಕ ಪಡೆದುಕೊಂಡಿದ್ದಾರಾ..? ಎನ್ನುವ ಅನುಮಾನಗಳೂ ಕಾಡುವುದಕ್ಕೆ ಶುರುವಾಗಿದೆ. ಸಿದ್ದರಾಮಯ್ಯ  ವಿರುದ್ಧ ಅನುಮಾನ ಪಡುವುದಕ್ಕೆ ಈ ಹಿಂದೆ ಸಿದ್ದರಾಮಯ್ಯ ನಡೆದುಕೊಂಡಿದ್ದ ರೀತಿ ನೀತಿಗಳು. 

ಯಡಿಯೂರಪ್ಪ ಹಾಗು ಸಿದ್ದರಾಮಯ್ಯ ನಡುವೆ ಒಪ್ಪಂದ..!

2018ರಲ್ಲಿ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಕಾಂಗ್ರೆಸ್​ ಪಕ್ಷ ಜೆಡಿಎಸ್​​ ಬೆಂಬಲಿಸಿತ್ತು, ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ಆದರೆ ಕೆಲವೇ ದಿನಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯ ಶಾಂತಿವನದಲ್ಲಿ ಕುಳಿತಿದ್ದ ಸಿದ್ದರಾಮಯ್ಯ, ರಹಸ್ಯ ತಂತ್ರಗಾರಿಕೆ ಮಾಡಿದ್ದರು. ಈ ಸಮ್ಮಿಶ್ರ ಸರ್ಕಾರ 5 ವರ್ಷ ಇರಲ್ಲ, ಮುಂದಿನ ಲೋಕಸಭಾ ಚುನಾವಣೆ ತನಕ ಮಾತ್ರ ಎಂದಿದ್ದರು. ತಾವು  ಹೇಳಿದ್ದ ಮಾತಿನಂತೆಯೇ ಲೋಕಸಭಾ ಚುನಾವಣೆ ಮುಗಿದ ಕೆಲವೇ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಪತನ ಆಗಿತ್ತು. ಈ ಎಲ್ಲಾ ಬೆಳವಣಿಗೆಗೂ ಮುನ್ನ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಮಾಡಿದ್ದ ಸಿದ್ದರಾಮಯ್ಯ, ಕಾಂಗ್ರೆಸ್​ ಪಕ್ಷದಿಂದ ತನ್ನ ಪರಮಾಪ್ತ ಬಳಗ ಎಂದೇ ಗುರುತಿಸಿಕೊಂಡಿದ್ದ ಶಾಸಕರನ್ನು ಬಿಜೆಪಿಗೆ ಕಳುಹಿಸಿದ್ದರು. ಯಡಿಯೂರಪ್ಪ ಮುಖ್ಯಮಂತ್ರಿಯೂ ಆದರು. ಇದೀಗ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ಸರದಿ. 

ಕಾಂಗ್ರೆಸ್​ ಗೆಲ್ಲುವುದು ಸಿದ್ದರಾಮಯ್ಯಗೆ ಯಾಕೆ ಬೇಕಿಲ್ಲ..!

ರಾಜ್ಯದಲ್ಲಿ ಕಾಂಗ್ರೆಸ್​ ಪರವಾದ ಅಲೆ ಸ್ವಲ್ಪ ಪ್ರಮಾಣದಲ್ಲಿ ಇದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಕಾಂಗ್ರೆಸ್​ ಸಂಪೂರ್ಣವಾಗಿ ಗೆಲುವು ಸಾಧಿಸಿದರೆ ಹೈಕಮಾಂಡ್​ ಹೇಳುವ ನಾಯಕ ಮುಖ್ಯಮಂತ್ರಿ ಆಗಲಿದ್ದಾರೆ. ಆದರೆ ಸಿದ್ದರಾಮಯ್ಯಗೆ ಸಂಪೂರ್ಣ ಬಹುಮತ ಬರುವುದು ಬೇಕಿಲ್ಲ. 90 ರಿಂದ 100ರ ಆಸುಪಾಸಿನಲ್ಲಿ ಗೆಲುವು ಸಾಧಿಸಿದರೆ ಸಿದ್ದರಾಮಯ್ಯ ಸರಳವಾಗಿ ಮುಖ್ಯಮಂತ್ರಿ ಆಗಬಹುದು. ಈಗಾಗಲೇ ಕಾಂಗ್ರೆಸ್​, ಜೆಡಿಎಸ್​ನಿಂದ ಬಿಜೆಪಿ ಸೇರಿರುವ ಶಾಸಕರು ಬಿಜೆಪಿಯಿಂದ ಮರು ಆಯ್ಕೆಯಾಗಿ ಬರಲಿದ್ದು, ಆಪರೇಷನ್​ ಕಮಲದ ರೀತಿ ಆಪರೇಷನ್​ ಹಸ್ತ ಮಾಡಿಕೊಂಡು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವ ತಂತ್ರಗಾರಿಕೆ ನಡೆದಿದೆ. ಹೈಕಮಾಂಡ್​ ಹೇಳಿದ ನಾಯಕರು ಮುಖ್ಯಮಂತ್ರಿ ಆಗಬಾರದು ಎನ್ನುವುದೇ ಸಿದ್ದರಾಮಯ್ಯ ಒನ್​ ಲೈನ್​ ಅಜೆಂಡಾ. 

ಸಿದ್ದರಾಮಯ್ಯಗೆ ಜೆಡಿಎಸ್​ ಬೆಂಬಲ ಸಿಗಲ್ಲ..!

ಒಂದು ವೇಳೆ 100 ಸ್ಥಾನಗಳಲ್ಲಿ ಕಾಂಗ್ರೆಸ್​ ಗೆದ್ದಾಗ ಜೆಡಿಎಸ್​ ಕಡೆಗೆ ಕಾಂಗ್ರೆಸ್​ ಹೈಕಮಾಂಡ್​ ನೋಡಬಹುದು, ಆದರೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲು ಜೆಡಿಎಸ್​ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಜೆಡಿಎಸ್ ಹೇಳಿದ ನಾಯಕರು ಮುಖ್ಯಮಂತ್ರಿ ಆಗುತ್ತಾರೆ. ಕಳೆದ ಬಾರಿಯೇ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಆಗಲಿ ಎನ್ನುವ ಆಫರ್​ ಜೆಡಿಎಸ್​ ಕಡೆಯಿಂದ ಬಂದಿತ್ತು. ಹೀಗಾಗಿ​ ಮುಖ್ಯಮಂತ್ರಿ ಆಗುವುದಕ್ಕೆ JDS ಬೆಂಬಲ ನೀಡುವುದಿಲ್ಲ ಎನ್ನುವ ಕಾರಣಕ್ಕೇ ಸಿದ್ದರಾಮಯ್ಯ  ಮೂರೂವರೆ ವರ್ಷಗಳ ಹಿಂದೆ ರಾಜಕೀಯ ರಣತಂತ್ರ ರೂಪಿಸಿದ್ದರು. 90 ರಿಂದ 100 ಸ್ಥಾನಗಳ ಆಸುಪಾಸಿನಲ್ಲಿ ಕಾಂಗ್ರೆಸ್​ ನಿಲ್ಲುವಂತೆ ಮಾಡುವುದು. ಆ ಬಳಿಕ ತನ್ನ ಬಿಜೆಪಿಯಲ್ಲಿರುವ 15 ಶಾಸಕರು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದಿದ್ದರೆ ನಾವು ಬೆಂಬಲಿಸುತ್ತೇವೆ ಎಂದು ಘೋಷಣೆ ಮಾಡುವುದು. ಆಗ ಜೆಡಿಎಸ್​ ಉಸಾಬರಿ ಇಲ್ಲದೆ ಕಾಂಗ್ರೆಸ್​​ ಸರ್ಕಾರ ರಚನೆ ಮಾಡುವುದು. 

500 ಕೋಟಿ ರಹಸ್ಯ ಬಿಚ್ಚಿಟ್ಟ ಕುಮಾರಸ್ವಾಮಿ..!

ರಾಜ್ಯದಲ್ಲಿ ಕಾಂಗ್ರೆಸ್​ ಸೋಲಿಸಲು ತೆಲಂಗಾಣ ಮುಖ್ಯಮಂತ್ರಿ 500 ಕೋಟಿ ಆಫರ್​ ಕೊಟ್ಟ ಬಗ್ಗೆ ಕುಮಾರಸ್ವಾಮಿ ಮಾತನಾಡಿದ್ದು, ಸಹಜವಾಗಿ ತೆಲಂಗಾಣ ಸಿಎಂ ಬಿಜೆಪಿ ವಿರೋಧಿ ಆಗಿದ್ದಾರೆ. ಆದರೆ ರಾಜ್ಯದಲ್ಲಿ ಕಾಂಗ್ರೆಸ್​ ಸೋಲಿಸುವುದರಿಂದ ತೆಲಂಗಾಣ ಸಿಎಂಗೆ ಆಗಬಹುದಾದ ಲಾಭ ಆದರೂ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಕುಮಾರಸ್ವಾಮಿ ಮಾಹಿತಿ ಸರಿಯಾಗಿದೆ. ಯಾಕಂದ್ರೆ ಇತ್ತೀಚಿಗೆ ನರೇಂದ್ರ ಮೋದಿ ತೆಲಂಗಾಣಕ್ಕೆ ಭೇಟಿ ನೀಡಿದ್ದ ವೇಳೆ ಸಿಎಂ ಚಂದ್ರಶೇಖರ್​ ರಾವ್​ ಸ್ವಾಗತ ಕೋರದ ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಚಂದ್ರಶೇಖರ್​ ರಾವ್​ ತೆಲಂಗಾಣ ಕಾಂಗ್ರೆಸ್​ ಪರವಾಗಿ ಇಲ್ಲದೇ ಇದ್ದರೂ ರಾಷ್ಟ್ರೀಯ ಮಟ್ಟದಲ್ಲಿ ಬಿಜೆಪಿಗೆ ನೇರ ವಿರೋಧಿ ಎನ್ನುವುದಂತೂ ಸತ್ಯ. ಇಷ್ಟೆಲ್ಲಾ ಮಾಹಿತಿ ಕೊಟ್ಟ ಬಳಿಕ ತೆಲಂಗಾಣ ಸಿಎಂ ಬಳಿ  500 ಕೋಟಿ ಪಡೆದಿದ್ದು ಸಿದ್ದರಾಮಯ್ಯನಾ..!? ಅಥವಾ ಸಿದ್ದರಾಮಯ್ಯ ಪರವಾಗಿ ಜಮೀರಾ..? ಎನ್ನುವುದಕ್ಕೆ ಉತ್ತರ ಸ್ವಯಂ ಕಂಡುಕೊಳ್ಳಬೇಕಿದೆ.

RS 500
RS 1500

SCAN HERE

Pratidhvani Youtube

«
Prev
1
/
3856
Next
»
loading
play
ಅಪ್ಪು ನೆನಪಿನಲ್ಲಿ ಯುವಕರಿಗೆ ಸ್ಫೂರ್ತಿ ಆಗಲಿ ಎಂದು ಆಯೋಜಿಸಿದ ಕ್ರೀಡೆ | Appu |
play
Cockroach Sudhi |ನಮ್ಮಂತ ವಿಲನ್‌ ಗಳಿಗೆಲ್ಲಾ ಯಾರ ಸರ್‌ ಹೀರೋಯಿನ್‌ ಕೊಡ್ತಾರೆ #pratidhvanidigital #cockroach
«
Prev
1
/
3856
Next
»
loading

don't miss it !

K.S.Eswarappa : CD ರಾಜಕಾರಣ ರಾಜ್ಯಕ್ಕೆ ಕಳಂಕ | #pratidhvaninews
ರಾಜಕೀಯ

K.S.Eswarappa : CD ರಾಜಕಾರಣ ರಾಜ್ಯಕ್ಕೆ ಕಳಂಕ | #pratidhvaninews

by ಪ್ರತಿಧ್ವನಿ
February 2, 2023
ನಮ್ಮ ಪಕ್ಷದ ಪ್ರತಿಯೊಬ್ಬ ಕನ್ನಡಿಗನಿಗೂ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ: ಡಾ.ಸಿ.ಎನ್. ಅಶ್ವತ್ಥನಾರಾಯಣ
ಕರ್ನಾಟಕ

ನಮ್ಮ ಪಕ್ಷದ ಪ್ರತಿಯೊಬ್ಬ ಕನ್ನಡಿಗನಿಗೂ ಮುಖ್ಯಮಂತ್ರಿಯಾಗುವ ಅರ್ಹತೆ ಇದೆ: ಡಾ.ಸಿ.ಎನ್. ಅಶ್ವತ್ಥನಾರಾಯಣ

by ಪ್ರತಿಧ್ವನಿ
February 7, 2023
ಬೀದರ್; ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ | Suicide | Pratidhvani |
ರಾಜಕೀಯ

ಬೀದರ್; ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿ ಶವ ಪತ್ತೆ | Suicide | Pratidhvani |

by ಪ್ರತಿಧ್ವನಿ
February 8, 2023
ಕರ್ನಾಟಕಕ್ಕೆ ಬರ್ತಿರೋ ಮೋದಿ ಕಾರ್ಯಕ್ರಮ ಮತ್ತು ಟ್ರಾಫಿಕ್​ ಸಮಸ್ಯೆ..
Top Story

ಕರ್ನಾಟಕಕ್ಕೆ ಬರ್ತಿರೋ ಮೋದಿ ಕಾರ್ಯಕ್ರಮ ಮತ್ತು ಟ್ರಾಫಿಕ್​ ಸಮಸ್ಯೆ..

by ಕೃಷ್ಣ ಮಣಿ
February 6, 2023
APPU | ಪುನೀತ್‌ ರಾಜ್ ಕುಮಾರ್‌ ಕಾರ್ಯಾಕ್ರಮದ ಸಿದ್ಧತೆಗೆ R Ashok ಭೇಟಿ!
ಸಿನಿಮಾ

APPU | ಪುನೀತ್‌ ರಾಜ್ ಕುಮಾರ್‌ ಕಾರ್ಯಾಕ್ರಮದ ಸಿದ್ಧತೆಗೆ R Ashok ಭೇಟಿ!

by ಪ್ರತಿಧ್ವನಿ
February 7, 2023
Next Post
‘ಕೋಲಾರದಲ್ಲಿ ನಾನೇ ಗೆಲ್ಲೋದು’ ಸಿದ್ದರಾಮಯ್ಯ ವಿಶ್ವಾಸಕ್ಕೆ ಹೊಡೆತ..!

‘ಕೋಲಾರದಲ್ಲಿ ನಾನೇ ಗೆಲ್ಲೋದು’ ಸಿದ್ದರಾಮಯ್ಯ ವಿಶ್ವಾಸಕ್ಕೆ ಹೊಡೆತ..!

Tiger Attack : ಸೌದೆ ತರಲು ಹೋಗಿ ಶವವಾದ | Pratidhvani

Tiger Attack : ಸೌದೆ ತರಲು ಹೋಗಿ ಶವವಾದ | Pratidhvani

JDS : ಜೆಡಿಎಸ್ ಪಕ್ಷ ಮಹಿಳೆ ಚಿಹ್ನೆಯನ್ನ ಇಟ್ಟುಕೊಂಡು ಮಹಿಳೆಯರ ಏಳಿಗೆಯನ್ನ ಸಹಿಸುತ್ತಿಲ್ಲ | Mysur | Pratidhvani

JDS : ಜೆಡಿಎಸ್ ಪಕ್ಷ ಮಹಿಳೆ ಚಿಹ್ನೆಯನ್ನ ಇಟ್ಟುಕೊಂಡು ಮಹಿಳೆಯರ ಏಳಿಗೆಯನ್ನ ಸಹಿಸುತ್ತಿಲ್ಲ | Mysur | Pratidhvani

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist