Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
No Result
View All Result
Pratidhvani
No Result
View All Result

ಪಂಚರತ್ನ ಯಶಸ್ಸಿನ ಅಲೆಯಲ್ಲಿದ್ದ ಜೆಡಿಎಸ್​ಗೆ ಎದುರಾಯ್ತು​ ಶಾಕ್​.. ಗೆಲ್ಲುವ ಅಭ್ಯರ್ಥಿ ಸಾವು!

ಕೃಷ್ಣ ಮಣಿ

ಕೃಷ್ಣ ಮಣಿ

January 22, 2023
Share on FacebookShare on Twitter

ಜೆಡಿಎಸ್​ ನಾಯಕ ಕುಮಾರಸ್ವಾಮಿ ನಡೆಸುತ್ತಿರುವ ಪಂಚರತ್ನ ಯಾತ್ರೆ ಹಳೇ ಮೈಸೂರು ಭಾಗ ಮಾತ್ರವಲ್ಲದೆ, ಉತ್ತರ ಕರ್ನಾಟಕ ಭಾಗದಲ್ಲೂ ಅಬ್ಬರಿಸುತ್ತಿದೆ. ಬೀದರ್​, ಕಲಬುರಗಿ ಬಳಿಕ ಇದೀಗ ವಿಜಯನಗರದಲ್ಲಿ ಜೆಡಿಎಸ್​ನ ರಥಯಾತ್ರೆ ಸಾಗುತ್ತಿದ್ದು, ಸಾವಿರಾರು ಜನರು ಸೇರುತ್ತಿದ್ದಾರೆ. ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್​ಗೆ ಸಿಗುತ್ತಿರುವ ಅಭೂತಪೂರ್ವ ಯಶಸ್ಸನ್ನು ನೋಡಿ ಕಾಂಗ್ರೆಸ್​, ಬಿಜೆಪಿಗೆ ಶಾಕ್​ ಆಗಿತ್ತು. ಈ ನಡುವೆ ಜೆಡಿಎಸ್​ ಪಂಚರತ್ನ ರಥ ಯಾತ್ರೆಯಲ್ಲಿ ಭಾಗಿಯಾಗಿದ್ದ ಜೆಡಿಎಸ್​ ಘೋಷಿತ ಅಭ್ಯರ್ಥಿ ದಿಢೀರ್​ ನಿಧನರಾಗಿದ್ದಾರೆ. ವಿಜಯಪುರ ಜಿಲ್ಲೆ  ಸಿಂದಗಿ ಜೆಡಿಎಸ್ ಘೋಷಿತ ಅಭ್ಯರ್ಥಿ ಸಾವನ್ನಪ್ಪಿರುವುದು ಚುನಾವಣೆ ಸಮಯದಲ್ಲಿ ಜೆಡಿಎಸ್ ನಾಯಕರಿಗೆ ಆಘಾತ ಉಂಟು ಮಾಡಿದೆ.

ಹೆಚ್ಚು ಓದಿದ ಸ್ಟೋರಿಗಳು

ವಿಮಾನ ನಿಲ್ದಾಣಕ್ಕೆ ಯಾರ ಹೆಸರಾದರೂ ಇಡಲಿ, ಮೊದಲು ಭೂಮಿ ಕಳೆದುಕೊಂಡವರಿಗೆ ಪರಿಹಾರ ನೀಡಲಿ: ಡಿ.ಕೆ. ಶಿವಕುಮಾರ್

D.K Shivakumar : ಏರ್‌ಪೋರ್ಟ್‌ಗೆ BSY ಹೆಸರು ಡಿಕೆಶಿ ರಿಯಾಕ್ಷನ್..! | #pratidhvaninews

ಬ್ರಾಹ್ಮಣ ಸಮೂಹವನ್ನು ನಾನು ನಿಂದಿಸಿಲ್ಲ: ಎಚ್‌.ಡಿ. ಕುಮಾರಸ್ವಾಮಿ ಸ್ಪಷ್ಟನೆ

ಜನವರಿ 18ರಂದು ಪಂಚರತ್ನ ಯಾತ್ರೆಯಲ್ಲಿ ಭಾಗಿ..!

ವಿಜಯಪುರ ಜಿಲ್ಲೆಯ ಸಿಂದಗಿ ಮತಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಆಗಿದ್ದ ಶಿವಾನಂದ ಪಾಟೀಲ್ ಸೋಮಜಾಳ್ ನಿಧನರಾಗಿದ್ದಾರೆ. 54  ವರ್ಷದ ಶಿವಾನಂದ ಪಾಟೀಲ್​ ಸೋಮಜಾಳ್​ಗೆ ನಿನ್ನೆ ರಾತ್ರಿ 11 ಗಂಟೆಗೆ ಹೃದಯಾಘಾತ ಸಂಭವಿಸಿದ್ದು, ಸಿಂದಗಿ ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. ನಿನ್ನೆ ಸಂಜೆ ತನಕ ಹೆಚ್​.ಡಿ ಕುಮಾರಸ್ವಾಮಿ ಜೊತೆಯಲ್ಲೇ ಪಂಚರತ್ನ ಯಾತ್ರೆಯಲ್ಲಿ ಭಾಗಿಯಾಗಿದ್ದ ಶಿವಾನಂದ ಪಾಟೀಲ್ ಸೋಮಜಾಳ್​, ಏಕಾಏಕಿ ವಿಧಿವಶ ಆಗಿರುವುದು ಜೆಡಿಎಸ್​ಗೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ವಿಜಯಪುರ ನಗರ ಹಾಗೂ ನಾಗಠಾಣ ಕ್ಷೇತ್ರದಲ್ಲಿ ನಡೆದ ಪಂಚರತ್ನ ಯಾತ್ರೆಯಲ್ಲಿ ಭಾಗಿಯಾಗಿದ್ದ ಶಿವಾನಂದ ಪಾಟೀಲ್​ ಸೋಮಜಾಳ್​, ಸಂಜೆ ಮನೆಗೆ ವಾಪಸ್​ ಆಗಿದ್ದರು. ಆ ಬಳಿಕ ಮನೆಯಲ್ಲಿ ಕುಸಿದುಬಿದ್ದ ಶಿವಾನಂದ ಪಾಟೀಲ್​ ಸೋಮಜಾಳ್​, ಆಸ್ಪತ್ರೆಗೆ ಶಿಫ್ಟ್​ ಮಾಡುವ ಮಾರ್ಗ ಮಧ್ಯೆ ಅಸುನೀಗಿದ್ದಾರೆ.

ಮಾಜಿ ಸೈನಿಕನಿಗೆ ಇತ್ತು ಈ ಬಾರಿ ಗೆಲುವಿನ ಅವಕಾಶ..!

ಸಿಂದಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್​ ಅಭ್ಯರ್ಥಿ ಆಗಿದ್ದ ಶಿವಾನಂದ ಪಾಟೀಲ್​ ಸೋಮಜಾಳ್​, ತಮ್ಮ ಕ್ಷೇತ್ರದಲ್ಲಿ ಭರ್ಜರಿ ಸಮಾವೇಶ ಮಾಡಿದ್ದರು. ಜನವರಿ 18ರಂದು ಶಿವಾನಂದ ಪಾಟೀಲ್ ಸೋಮಜಾಳ ಪರವಾಗಿ ಬೃಹತ್ ಸಮಾವೇಶ ಮಾಡಿದ್ದ ಕುಮಾರಸ್ವಾಮಿಗೆ ಅಪಾರ ಜನರ ಬೆಂಬಲ ಸಿಕ್ಕಿತ್ತು. ಮಾಜಿ ಸೈನಿಕರಾಗಿದ್ದ ಶಿವಾನಂದ ಪಾಟೀಲ್ ಸೋಮಜಾಳ್​ಗೆ ಕ್ಷೇತ್ರದಲ್ಲಿ ಉತ್ತಮ ಹೆಸರು ಕೂಡ ಇತ್ತು. ಮಾಜಿ ಸೈನಿಕ ಎನ್ನುವ ಬಲವೂ ಇತ್ತು. ಜೊತೆಗೆ ಪ್ರಾದೇಶಿಕ ಪಕ್ಷದ ಮೇಲೆ ಈ ಬಾರಿ ಜನರಿಗೆ ಮೂಡಿರುವ ವಿಶ್ವಾಸದ ಅಲೆಯಲ್ಲಿ ಗೆದ್ದುವ ಬರುವ ನಿರೀಕ್ಷೆಯಲ್ಲಿದ್ದರು. ಆದರೆ 16 ವರ್ಷಗಳ ಕಾಲ ಸೇನೆಯಲ್ಲಿ ಮಳೆ ಗಾಳೀ ಚಳಿ ಎನ್ನದೆ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಶಿವಾನಂದ ಪಾಟೀಲ್ ಸೋಮಜಾಳ್, ದಿಢೀರ್​ ಸಾವು ನೋವುಂಟು ಮಾಡಿದೆ.

RS 500
RS 1500

SCAN HERE

Pratidhvani Youtube

«
Prev
1
/
3856
Next
»
loading
play
ಅಪ್ಪು ನೆನಪಿನಲ್ಲಿ ಯುವಕರಿಗೆ ಸ್ಫೂರ್ತಿ ಆಗಲಿ ಎಂದು ಆಯೋಜಿಸಿದ ಕ್ರೀಡೆ | Appu |
play
Cockroach Sudhi |ನಮ್ಮಂತ ವಿಲನ್‌ ಗಳಿಗೆಲ್ಲಾ ಯಾರ ಸರ್‌ ಹೀರೋಯಿನ್‌ ಕೊಡ್ತಾರೆ #pratidhvanidigital #cockroach
«
Prev
1
/
3856
Next
»
loading

don't miss it !

ಅಮೆರಿಕೆಯ ಸಿಯಾಟಲ್‌ನಲ್ಲಿ ದಲಿತ ಪಕ್ಷಪಾತದ ವಿರುದ್ಧ ಮೊದಲ ಹೆಜ್ಜೆ
ಅಂಕಣ

ಅಮೆರಿಕೆಯ ಸಿಯಾಟಲ್‌ನಲ್ಲಿ ದಲಿತ ಪಕ್ಷಪಾತದ ವಿರುದ್ಧ ಮೊದಲ ಹೆಜ್ಜೆ

by ಡಾ | ಜೆ.ಎಸ್ ಪಾಟೀಲ
February 3, 2023
Gunnalli school problem: ಗುನ್ನಳ್ಳಿ ಗ್ರಾಮದಲ್ಲಿ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸುವಂತೆ ತಿಳಿಸಿದ್ದೇವೆ
ರಾಜಕೀಯ

Gunnalli school problem: ಗುನ್ನಳ್ಳಿ ಗ್ರಾಮದಲ್ಲಿ ಸಮಸ್ಯೆಗಳನ್ನು ಹಂತಹಂತವಾಗಿ ಪರಿಹರಿಸುವಂತೆ ತಿಳಿಸಿದ್ದೇವೆ

by ಪ್ರತಿಧ್ವನಿ
February 8, 2023
Madhu bangarappa v/s Kumara bangarappa : ಶಿವಮೊಗ್ಗದಲ್ಲಿ ಸಹೋದರರ ಸವಾಲು ಜಿದ್ದಾ ಜಿದ್ದಿಗೆ ಸೊರಬ ಯಾರ ಪಾಲು
ರಾಜಕೀಯ

Madhu bangarappa v/s Kumara bangarappa : ಶಿವಮೊಗ್ಗದಲ್ಲಿ ಸಹೋದರರ ಸವಾಲು ಜಿದ್ದಾ ಜಿದ್ದಿಗೆ ಸೊರಬ ಯಾರ ಪಾಲು

by ಪ್ರತಿಧ್ವನಿ
February 3, 2023
ಹಾಸನದಲ್ಲಿ ಕುಮಾರಸ್ವಾಮಿ ಮಾತಿಗೆ ಸಿಗ್ತಿಲ್ಲ ಕಿಂಚಿತ್ತು ಮರ್ಯಾದೆ..!!
ರಾಜಕೀಯ

ಹಾಸನದಲ್ಲಿ ಕುಮಾರಸ್ವಾಮಿ ಮಾತಿಗೆ ಸಿಗ್ತಿಲ್ಲ ಕಿಂಚಿತ್ತು ಮರ್ಯಾದೆ..!!

by ಕೃಷ್ಣ ಮಣಿ
February 6, 2023
Basavaraj Bommai: ಹೆಚ್​.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ನನಗೆ ನಂಬಿಕೆ ಇಲ್ಲ | #pratidhvaninews
ರಾಜಕೀಯ

Basavaraj Bommai: ಹೆಚ್​.ಡಿ.ಕುಮಾರಸ್ವಾಮಿ ಹೇಳಿಕೆ ಬಗ್ಗೆ ನನಗೆ ನಂಬಿಕೆ ಇಲ್ಲ | #pratidhvaninews

by ಪ್ರತಿಧ್ವನಿ
February 8, 2023
Next Post
ಕಾಂಗ್ರೆಸ್​ ಸೋಲಿಸಲು ಸುಪಾರಿ ಪಡೆದಿದ್ದು ಸಿದ್ದರಾಮಯ್ಯನಾ..? ಜಮೀರಾ..?

ಕಾಂಗ್ರೆಸ್​ ಸೋಲಿಸಲು ಸುಪಾರಿ ಪಡೆದಿದ್ದು ಸಿದ್ದರಾಮಯ್ಯನಾ..? ಜಮೀರಾ..?

‘ಕೋಲಾರದಲ್ಲಿ ನಾನೇ ಗೆಲ್ಲೋದು’ ಸಿದ್ದರಾಮಯ್ಯ ವಿಶ್ವಾಸಕ್ಕೆ ಹೊಡೆತ..!

‘ಕೋಲಾರದಲ್ಲಿ ನಾನೇ ಗೆಲ್ಲೋದು’ ಸಿದ್ದರಾಮಯ್ಯ ವಿಶ್ವಾಸಕ್ಕೆ ಹೊಡೆತ..!

Tiger Attack : ಸೌದೆ ತರಲು ಹೋಗಿ ಶವವಾದ | Pratidhvani

Tiger Attack : ಸೌದೆ ತರಲು ಹೋಗಿ ಶವವಾದ | Pratidhvani

  • About Us
  • Privacy Policy
  • Terms & Conditions

© 2021 Pratidhvani – Copy Rights Reserved by Pratidhvani News.

No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಇತರೆ
    • ಸರ್ಕಾರಿ ಗೆಜೆಟ್
    • ಶೋಧ
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ

© 2021 Pratidhvani – Copy Rights Reserved by Pratidhvani News.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist