• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Tuesday, July 7, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಸಿನಿರಂಗಕ್ಕೆ ಕಾಲಿಟ್ಟ ಸಿ.ಪಿ.ಯೋಗಿಶ್ವರ್ ಪುತ್ರ ಧ್ಯಾನ್‌: ಸಿಎಂ ಡಿಕೆಶಿ-ಕೇಂದ್ರ ಸಚಿವ ಸೋಮಣ್ಣ ಶುಭಾಶಯ

ಪ್ರತಿಧ್ವನಿ by ಪ್ರತಿಧ್ವನಿ
July 6, 2026
in Top Story, ಕರ್ನಾಟಕ, ಸಿನಿಮಾ
0
ಸಿನಿರಂಗಕ್ಕೆ ಕಾಲಿಟ್ಟ ಸಿ.ಪಿ.ಯೋಗಿಶ್ವರ್ ಪುತ್ರ ಧ್ಯಾನ್‌: ಸಿಎಂ ಡಿಕೆಶಿ-ಕೇಂದ್ರ ಸಚಿವ ಸೋಮಣ್ಣ ಶುಭಾಶಯ
Share on WhatsAppShare on FacebookShare on Telegram

ಈಗಾಗಲೇ ಕನ್ನಡ ಚಿತ್ರರಂಗಕ್ಕೆ ಹಲವು ರಾಜಕಾರಣಿಗಳ ಮಕ್ಕಳು ಎಂಟ್ರಿ ಕೊಟ್ಟಿದ್ದಾರೆ. ಆ ಸಾಲಿಗೆ ಇದೀಗ ಶಾಸಕ ಸಿ.ಪಿ.ಯೋಗೀಶ್ವರ್‌ ಅವರ ಪುತ್ರ ಧ್ಯಾನ್‌ ಹೊಸದಾಗಿ ಕನ್ನಡ ಸಿನಿಮಾರಂಗದ ನೆಲವನ್ನು ಸ್ಪರ್ಶಿಸಿದ್ದಾರೆ. ಅಂದಹಾಗೆ, ಪಿ.ಎಂ.ಜಿ ಫಿಲಂ ಫ್ಯಾಕ್ಟರಿ ನಿರ್ಮಾಣದ ಎರಡು ಚಿತ್ರಗಳಿಗೆ ಮಹೂರ್ತ ನೆರವೇರಿದೆ. ಶಾಸಕ ಸಿ.ಪಿ.ಯೋಗೀಶ್ವರ್ ತಮ್ಮ ಪುತ್ರ ಧ್ಯಾನ್ ಯೋಗೀಶ್ವರ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಅಲ್ಲಿಗೆ 25 ವರ್ಷಗಳ ನಂತರ ಸಿ.ಪಿ.ಯೋಗೀಶ್ವರ್ ಬಣ್ಣ ಹಚ್ಚುತ್ತಿದ್ದಾರೆ.

ADVERTISEMENT
Vijayalakshmi Darshan : ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೇಳಿದ್ದು ಯಾರಿಗೆ? #pratidhvani

ಹೌದು, ಸುಮಾರು 40 ವರ್ಷಗಳಿಂದ ಕನ್ನಡ ಚಿತ್ರರಂಗದೊಂದಿಗೆ ನಂಟಿರುವ ಹಾಗೂ 25 ವರ್ಷಗಳ ಹಿಂದೆ “ಸೈನಿಕ” ಎಂಬ ಜನಪ್ರಿಯ ಚಿತ್ರದ ಮೂಲಕ ಎಲ್ಲರ ಮನೆ ಮಾತಾಗಿದ್ದ ಸಿ.ಪಿ.ಯೋಗೀಶ್ವರ್ ಅವರ ಪುತ್ರ ಧ್ಯಾನ್ ಯೋಗೀಶ್ವರ್ “ಕರ್ಣಾಟಬಲಂ ಅಜೇಯಂ” ಹಾಗೂ “ಸೈನಿಕ 2” ಚಿತ್ರಗಳಲ್ಲಿ ನಾಯಕನಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಎರಡು ಚಿತ್ರಗಳಲ್ಲಿ ಯೋಗೀಶ್ವರ್ ಅವರು ಸಹ ಅಭಿನಯಿಸುತ್ತಿದ್ದು, 25 ವರ್ಷಗಳ ನಂತರ ನಟನೆಗೆ‌ ಮರಳಿ ಬಂದಿದ್ದಾರೆ.

“ಕರ್ಣಾಟಬಲಂ ಅಜೇಯಂ” ಚಿತ್ರವನ್ನು ನಾಗಣ್ಣ ನಿರ್ದೇಶನ ಮಾಡುತ್ತಿದ್ದಾರೆ. “ಸೈನಿಕ‌2” ಚಿತ್ರಕ್ಕೆ ಪುನೀತ್ ರುದ್ರನಾಗ್ ನಿರ್ದೇಶಕರು. ಸಿ.ಎಂ. ಡಿ.ಕೆ.ಶಿವಕುಮಾರ್ ಅವರು “ಕರ್ಣಾಟಬಲಂ ಅಜೇಯಂ” ಚಿತ್ರಕ್ಕೆ ಆರಂಭ ಫಲಕ ತೋರಿಸುವ ಮೂಲಕ ಚಾಲನೆ ನೀಡಿದರು. ಕೇಂದ್ರ ಸಚಿವ ವಿ.ಸೋಮಣ್ಣ “ಸೈನಿಕ2” ಚಿತ್ರಕ್ಕೆ ಆರಂಭ ಫಲಕ ತೋರಿಸುವ ಮೂಲಕ ಚಾಲನೆ ನೀಡಿದರು. ಬೆಮಲ್ ಅಧ್ಯಕ್ಷ ಡಿ.ಕೆ.ಸುರೇಶ್ ಕ್ಯಾಮೆರಾ ಚಾಲನೆ ಮಾಡಿದರು. ಮಾಜಿ ಸಚಿವರಾದ ಸುಧಾಕರ್, ಶಾಸಕರಾದ ಉದಯ್, ರವಿ, ಮೋಹನ್. ಸಾ.ರಾ.ಗೋವಿಂದು, ವಿಶ್ವಪ್ರಸಾದ್ (ಪೀಪಲ್ ಮೀಡಿಯಾ ಫ್ಯಾಕ್ಟರಿ), ನಿರ್ಮಾಪಕ ರಾಕ್‌ ಲೈನ್‌ ವೆಂಕಟೇಶ್, ಲಹರಿ ವೇಲು, ನಿರ್ದೇಶಕ ಸಂತೋಷ್ ಆನಂದರಾಮ್ ಇತರರು ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು. ಈ ಎರಡು ಚಿತ್ರಗಳನ್ನು ಶೀಲಾ ಯೋಗೀಶ್ವರ್ ನಿರ್ಮಿಸುತ್ತಿದ್ದಾರೆ. ಈ ವೇಳೆ ಎರಡು ಚಿತ್ರಗಳ ಫಸ್ಟ್ ಲುಕ್ ಟೀಸರ್ ರಿಲೀಸ್‌ ಮಾಡಲಾಯಿತು.

GRAAMAAYANA |  Honest Review By | Vijay Bharamasagara | Vinay Rajkumar | Meghashetty #pratidhvani

 

ಸಿಎಂ ಡಿಕೆಶಿ ಮಾತನಾಡಿ, “ನಾನು ಸಾಮಾನ್ಯವಾಗಿ ಯಾವುದೇ ಮುಹೂರ್ತ ಸಮಾರಂಭಗಳಿಗೆ ಹೋಗಲ್ಲ. ಶಾಸಕ ಮಿತ್ರ ಯೋಗೀಶ್ವರ್ ಅವರ ಪ್ರೀತಿಯ ಆಹ್ವಾನದ ಮೇರೆಗೆ ಬಂದಿದ್ದೇನೆ. “ಕರ್ಣಾಟಬಲಂ ಅಜೇಯಂ” ಚಿತ್ರದ ಮೂಲಕ ಯೋಗೀಶ್ವರ್ ಅವರ ಪುತ್ರ ಧ್ಯಾನ್, ನಾಯಕನಾಗಿ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಟೀಸರ್ ನೋಡಿದಾಗ ಧ್ಯಾನ್ ನಟನೆಯನ್ನು ಕಲಿತು ಬಂದು ಅಭಿನಯಿಸುತ್ತಿದ್ದಾರೆ ಎಂದು ತಿಳಿಯುತ್ತದೆ. ಯೋಗೀಶ್ವರ್ ಅವರು ಸಹ ಈ ಹಿಂದೆ ನಟರಾಗಿ ಜನಪ್ರಿಯರಾದವರು. ಅವರು ಸಹ ಈಗ ಅಭಿನಯಕ್ಕೆ ಮರಳಿ ಬಂದಿದ್ದಾರೆ. ಧ್ಯಾನ್ ನನ್ನ ಮಗ ಇದ್ದ ಹಾಗೆ. ಅವನ ಚಿತ್ರರಂಗದ ಭವಿಷ್ಯ ಉಜ್ವಲವಾಗಿರಲಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾರೈಸಿದರು.

ಸಿ.ಪಿ.ಯೋಗೀಶ್ವರ್ ಅವರು ನನ್ನ ಬಹ ವರ್ಷಗಳ ಸ್ನೇಹಿತರು ಅವರ ಮಗ ಹಾಗೂ ಅವರು ಇಬ್ಬರು ನಟಿಸುತ್ತಿರುವ “ಸೈನಿಕ2” ಚಿತ್ರಕ್ಕೆ ಚಾಲನೆ ನೀಡಿದ್ದು, ಬಹಳ ಖುಷಿಯಾಗಿದೆ. ಚಿತ್ರ ಯಶಸ್ವಿಯಾಗಲೆಂದು ಕೇಂದ್ರ ಸಚಿವ ವಿ.ಸೋಮಣ್ಣ ಅವರು ಶುಭ ಕೋರಿದರು.

Chetan Ahimsa Podcast : ರಾಜಕೀಯಕ್ಕೆ ಚೇತನ್ ಅಹಿಂಸಾ! ಮ್ಯಾಜಿಕ್ ಮಾಡ್ತಾರಾ ಸಾಮಾಜಿಕ ಹೋರಾಟಗಾರ..#pratidhvani

ಡಿ.ಕೆ.ಶಿವಕುಮಾರ್ ಅವರು 25 ವರ್ಷಗಳ ಹಿಂದೆ ನನ್ನ ಅಭಿನಯದ “ಸೈನಿಕ” ಚಿತ್ರದ ಮುಹೂರ್ತಕ್ಕೆ ಬಂದು ಕ್ಲಾಪ್ ಮಾಡಿದ್ದರು. ಇಂದು ನನ್ನ ಮಗ ನಾಯಕನಾಗಿ ನಟಿಸುತ್ತಿರುವ ಮೊದಲ ಚಿತ್ರಕ್ಕೂ ಅವರೆ ಬಂದು ಕ್ಲಾಪ್ ಮಾಡಿದ್ದಾರೆ. ಮುಖ್ಯಮಂತ್ರಿಗಳಿಗೆ, ಕೇಂದ್ರ ಸಚಿವರಾದ .ಸೋಮಣ್ಣ ಅವರಿಗೆ ಹಾಗೂ ಡಿ.ಕೆ.ಸುರೇಶ್ ಸೇರಿದಂತೆ ಸಮಾರಂಭಕ್ಕೆ ಆಗಮಿಸಿರುವ ಎಲ್ಲಾ ಗಣ್ಯರಿಗೆ ಧನ್ಯವಾದ. ನಾನು ನಟನಾಗಿಯೇ ನಲವತ್ತು ವರ್ಷಗಳ ಹಿಂದೆ ಚಿತ್ರರಂಗಕ್ಕೆ ಬಂದವನು. ಆನಂತರ ರಾಜಕೀಯಕ್ಕೆ ಬಂದೆ. ಈಗ ಮರಳಿ ಚಿತ್ರರಂಗಕ್ಕೆ ಬಂದಿದ್ದೇನೆ. ನನ್ನ ಮಗ ಧ್ಯಾನ್ ಯೋಗೀಶ್ವರ್, ಈ ಎರಡು ಚಿತ್ರಗಳ ಮೂಲಕ ನಾಯಕನಾಗಿ ಚಿತ್ರರಂಗ ಮಾಡುತ್ತಿದ್ದಾನೆ. ಅದರಲ್ಲಿ ಮೊದಲು “ಕರ್ಣಾಟಬಲಂ ಅಜೇಯಂ” ಚಿತ್ರ ಆರಂಭವಾಗಲಿದೆ.

 

ಮುಂದಿನ ಸಂಕ್ರಾಂತಿ ಸಮಯಕ್ಕೆ “ಕರ್ಣಾಟಬಲಂ ಅಜೇಯಂ” ಚಿತ್ರವನ್ನು ತೆರೆಗೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಹಿರಿಯ ನಿರ್ದೇಶಕ ನಾಗಣ್ಣ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದೊಂದು ಕನ್ನಡದ ಮಣ್ಣಿನ ಕಥೆ‌. ನಾಯಕನಾಗಲು ಬೇಕಾದ ಪೂರ್ವ ತಯಾರಿಗಳನ್ನೆಲ್ಲಾ ಮಾಡಿಕೊಂಡು ನನ್ನ ಮಗ ಚಿತ್ರರಂಗಕ್ಕೆ ಬರುತ್ತಿದ್ದಾನೆ. ಈ ಎರಡು ಚಿತ್ರಗಳಲ್ಲಿ ನನ್ನ ಮಗ ಹಾಗೂ ನಾನು ಇಬ್ಬರು ನಟಿಸುತ್ತಿದ್ದೇವೆ‌. ‘ಸೈನಿಕ2’ ಚಿತ್ರವನ್ನು ಪುನೀತ್ ರುದ್ರನಾಗ್ ನಿರ್ದೇಶಿಸುತ್ತಿದ್ದಾರೆ. ನಮ್ಮ ಎರಡು ಚಿತ್ರಗಳಿಗೂ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಸಿ.ಪಿ.ಯೋಗೀಶ್ವರ್.

ನಾನು ನಾಯಕನಾಗಿ ಕನ್ನಡ ಚಿತ್ರರಂಗ ಪ್ರವೇಶಿಸುತ್ತಿರುವುದು ಖುಷಿಯಾಗಿದೆ. ಈ ಅವಕಾಶ ಕಲ್ಪಿಸಿಕೊಟ್ಟ ನನ್ನ ತಂದೆ -ತಾಯಿಗೆ ಧನ್ಯವಾದ ತಿಳಿಸುತ್ತೇನೆ. ನಾನು ನಟನೆಗೆ ಬೇಕಾದ ಎಲ್ಲಾ ಪೂರ್ವತಯಾರಿ ಮಾಡಿಕೊಂಡಿದ್ದೇನೆ. ನನ್ನ ಎರಡು ಚಿತ್ರಗಳ ನಿರ್ದೇಶಕರಾದ ನಾಗಣ್ಣ ಹಾಗೂ ಪುನೀತ್ ರುದ್ರನಾಗ್ ಅವರಿಂದಲೂ ಸಾಕಷ್ಟು ಕಲಿಯುತ್ತಿದ್ದೇನೆ. ನನ್ನ ಮೊದಲ ಪ್ರಯತ್ನಕ್ಕೆ ನಿಮ್ಮೆಲ್ಲರ ಬೆಂಬಲವಿರಲಿ ಎಂದು ನಾಯಕ ಧ್ಯಾನ್ ಯೋಗೀಶ್ವರ್ ತಿಳಿಸಿದರು.

ಭಾರತ ಮಣ್ಣಿನಲ್ಲಿ ಸಾಕಷ್ಟು ಇತಿಹಾಸಗಳು ಸೃಷ್ಟಿಯಾಗಿದೆ. ಇದನ್ನು ನಾವು ನಮ್ಮ ಮಕ್ಕಳಿಗೆ ತಿಳಿಸುವುದು ಕರ್ತವ್ಯ. ಅದನ್ನು ಸಿನಿಮಾ ಮೂಲಕ ತೋರಿಸಿದಾಗ ಜನರಿಗೆ ಬೇಗ ತಲುಪುತ್ತದೆ. “ಕರ್ಣಾಟಬಲಂ ಅಜೇಯಂ” ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ. ಆರನೇ ಶತಮಾನದಲ್ಲಿ ಇಮ್ಮಡಿ ಪುಲಕೇಶಿಯ ಆಡಳಿತದಲ್ಲಿ ಬಾದಾಮಿ ಹೇಗಿತ್ತು. ಈಗ ಹೇಗಿದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡುತ್ತಿದ್ದೇವೆ. ಯೋಗಿಶ್ವರ್ ಅವರೇ ಕಥೆ ಜವಾಬ್ದಾರಿ ನಿರ್ವಹಣೆ ಮಾಡಿದ್ದಾರೆ. ಎಂ.ಎಸ್ ರಮೇಶ್, ವಿಶ್ವ ಹಾಗೂ ಗುರುರಾಜ್ ದೇಸಾಯಿ ಕಥಾವಿಭಾಗದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ವಿ.ಹರಿಕೃಷ್ಣ ಅವರು ಸಂಗೀತ ಸಂಯೋಜಿಸುತ್ತಿದ್ದಾರೆ. ಶೇಖರ್ ಚಂದ್ರ ಅವರ ಛಾಯಾಗ್ರಹಣ ಮಾಡುತ್ತಿದ್ದಾರೆ. ನುರಿತ ತಂತ್ರಜ್ಞರು ಹಾಗೂ ಅನುಭವಿ ಕಲಾವಿದರು ಈ ಚಿತ್ರದಲ್ಲಿರುತ್ತಾರೆ. ತಮ್ಮ ಮಗನನ್ನು ಚಿತ್ರರಂಗಕ್ಕೆ ನಾಯಕನಾಗಿ ಪರಿಚಯಿಸುವ ಮೊದಲ ಚಿತ್ರದ ನಿರ್ದೇಶನದ ಜವಾಬ್ದಾರಿಯನ್ನು ನನಗೆ ನೀಡಿರುವುದಕ್ಕೆ ಸಿ.ಪಿ.ಯೋಗೀಶ್ವರ್ ಅವರಿಗೆ ಧನ್ಯವಾದ ಎಂದರು ನಿರ್ದೇಶಕ ನಾಗಣ್ಣ.

Actor Darshan Case: ಸಾಕ್ಷಿದಾರನಿಗೆ ಬೆದರಿಕೆ ಹಾಕಿದ್ದ ದರ್ಶನ್ ಫ್ಯಾನ್ಸ್ ಅರೆಸ್ಟ್ #pratidhvani

“ಸೈನಿಕ ಚಿತ್ರ ಬಿಡುಗಡೆಯಾಗಿದ್ದಾಗ ನನಗೆ ಹದಿನಾರು ವರ್ಷ. ಆ ಚಿತ್ರದ ಹಾಡುಗಳು ಈಗಲೂ ಜನಪ್ರಿಯ. ಈಗ ಆ ಚಿತ್ರದ ಎರಡನೇ ಭಾಗದ ನಿರ್ದೇಶನವನ್ನು ನಾನು ಮಾಡುತ್ತಿರುವುದು ಖುಷಿಯಾಗುತ್ತಿದೆ. ಇದೊಂದು ನೈಜ ಕಥಾಹಂದರ ಹೊಂದಿರುವ ಚಿತ್ರ. ಕಥೆಯ ಜವಾಬ್ದಾರಿಯನ್ನು ಯೋಗೀಶ್ವರ್ ಅವರೆ ವಹಿಸಿಕೊಂಡಿದ್ದಾರೆ. ನಾಯಕ ಧ್ಯಾನ್ ಅವರಿಗೆ ನಾಯಕನಾಗಲು ಬೇಕಾದ ಎಲ್ಲಾ ಗುಣಗಳು ಇದೆ. ಕಥೆ ಇನ್ನೂ ಪೂರ್ಣವಾಗಿಲ್ಲ. ಮುಂದಿನ ವರ್ಷ ಈ ಚಿತ್ರಕ್ಕೆ ಚಾಲನೆ ಸಿಗಲಿದೆ ಎಂದು ನಿರ್ದೇಶಕ ಪುನೀತ್ ರುದ್ರನಾಗ್ ಹೇಳಿದರು.

Toxic Ladies & Ladies Teaser Released, : ಟಾಕ್ಸಿಕ್ ಟೀಸರ್ ಚಿಂದಿ ಗುರು! ಲೇಡೀಸ್ ಕ್ಯಾರೆಕ್ಟರ್ ರಿವೀಲ್

“ಕರ್ಣಾಟಬಲಂ ಅಜೇಯಂ” ಚಿತ್ರದ ಹಾಡುಗಳ ಕುರಿತು ವಿ.ಹರಿಕೃಷ್ಣ ಮಾಹಿತಿ ನೀಡಿದರು. ತೆಲುಗಿನ ಖ್ಯಾತ ನಟ ಜಗಪತಿಬಾಬು ಹಾಗೂ ಇಪ್ಪತ್ತು ವರ್ಷಗಳ ನಂತರ ಕನ್ನಡ ಚಿತ್ರದಲ್ಲಿ ನಟಿಸುತ್ತಿರುವ ತೆಲುಗು ನಟಿ ಲಯ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಮಿಸ್ ಯುನಿವರ್ಸ್ ಇಂಡಿಯಾ ಮಣಿಕ ವಿಶ್ವಕರ್ಮ ಹಾಗು ಮಿಸ್ ಯುನಿವರ್ಸ್ ಇಂಡಿಯಾ ರನ್ನರ್ ಅಪ್ ರೇಖಾ ಪಾಂಡೆ “ಕರ್ಣಾಟಬಲಂ ಅಜೇಯಂ” ಚಿತ್ರದ ನಾಯಕಿಯರಾಗಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಅಭಿನಯಿಸುತ್ತಿರುವುದಕ್ಕೆ ಬಹಳ ಖುಷಿಯಾಗಿದೆ ಎಂದರು. ಛಾಯಾಗ್ರಾಹಕರಾದ ಶೇಖರ್ ಚಂದ್ರ ಹಾಗೂ ಸಂಕೇತ್ ಮತ್ತು ಕಾರ್ಯಕಾರಿ ನಿರ್ಮಾಪಕ ಕೆ.ಪಿ.ಶ್ರೀಕಾಂತ್‌ ಇದ್ದರು.

Previous Post

ರಾಮನ ದೇಣಿಗೆ ಹಣದಲ್ಲಿ ಹೈಫೈ ಲೈಫು! ಪ್ರೇಯಸಿಗೆ ದುಬಾರಿ ಗಿಫ್ಟ್! ಇದು ಅವಿನಾಶ್ ಶುಕ್ಲಾ ಥ್ರಿಲ್ಲಿಂಗ್‌ ಸ್ಟೋರಿ

Next Post

ಸುರೇಶ್ ಕುಮಾರ್ ವಿರುದ್ಧ 300 ಕೋಟಿ ಟೆಂಡರ್ ಗೋಲ್ಮಾಲ್‌ ಆರೋಪ: ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

Related Posts

Pratap Simha Vs Priyank Kharge On SIR
Top Story

“ಹಿಂದೂಗಳು ಇರುವ ದೇವಸ್ಥಾನ, ಛತ್ರಗಳಲ್ಲಿ ಗುಂಪು ಕಟ್ಟಿಕೊಂಡು ಯಾಕೆ SIR ಅರ್ಜಿ ತುಂಬುತ್ತಿಲ್ಲ?”

by ಪ್ರತಿಧ್ವನಿ
July 6, 2026
0

ಮೈಸೂರು : ದೇಶದಲ್ಲಿಎಸ್ ಐ ಆರ್ ವಿರೋಧಿಸಿದ್ದ ಮಮತಾ ಬ್ಯಾನರ್ಜಿಯನ್ನು ಜನ ತಿಪ್ಪೆಗೆ ಎಸೆದಿದ್ದಾರೆ. ಇಲ್ಲಿನ ಎನ್.ಆರ್. ಕ್ಷೇತ್ರದಲ್ಲಿ ಖಾಲಿ ಸೈಟ್ ನಲ್ಲಿ 20 ಮತದಾರರಿದ್ದರು. ಚುನಾವಣೆ...

Read moreDetails
ಕುಮಾರಸ್ವಾಮಿ ಅವರನ್ನು ಪ್ರಹ್ಲಾದ್ ಜೋಶಿ ಹರಕೆ ಕುರಿ ಮಾಡ್ತಿದ್ದಾರೆ: ಬಿ.ಕೆ ಹರಿಪ್ರಸಾದ್‌

ಕುಮಾರಸ್ವಾಮಿ ಅವರನ್ನು ಪ್ರಹ್ಲಾದ್ ಜೋಶಿ ಹರಕೆ ಕುರಿ ಮಾಡ್ತಿದ್ದಾರೆ: ಬಿ.ಕೆ ಹರಿಪ್ರಸಾದ್‌

July 6, 2026
ಖಮೇನಿ ಅಂತ್ಯಕ್ರಿಯೆಯಲ್ಲಿ ಭಾರತ ಭಾಗಿ: ಕೃತಜ್ಞತೆ ಸಲ್ಲಿಸಿದ ಇರಾನ್‌

ಖಮೇನಿ ಅಂತ್ಯಕ್ರಿಯೆಯಲ್ಲಿ ಭಾರತ ಭಾಗಿ: ಕೃತಜ್ಞತೆ ಸಲ್ಲಿಸಿದ ಇರಾನ್‌

July 6, 2026
ಹೆಚ್ಎಂಟಿ ಪುನಶ್ಚೇತನ ಪ್ಯಾಕೇಜ್ ತಡೆಯಲು ರಾಜ್ಯ ಸರ್ಕಾರ ಸಂಚು: ಕುಮಾರಸ್ವಾಮಿ ಆರೋಪ

ಹೆಚ್ಎಂಟಿ ಪುನಶ್ಚೇತನ ಪ್ಯಾಕೇಜ್ ತಡೆಯಲು ರಾಜ್ಯ ಸರ್ಕಾರ ಸಂಚು: ಕುಮಾರಸ್ವಾಮಿ ಆರೋಪ

July 6, 2026
SIR Arena Fight

SIR ಅಖಾಡದಲ್ಲಿ ಏಟಿಗೆ ಎದಿರೇಟು : ದೋಸ್ತಿಗಳ ಮಾಸ್ಟರ್‌ ಸ್ಟ್ರೋಕ್‌ಗೆ ಪ್ಲಾಫ್‌ ಆಗುತ್ತಾ ಕಾಂಗ್ರೆಸ್‌ ಪ್ಲ್ಯಾನ್..?

July 6, 2026
Next Post
ಸುರೇಶ್ ಕುಮಾರ್ ವಿರುದ್ಧ 300 ಕೋಟಿ ಟೆಂಡರ್ ಗೋಲ್ಮಾಲ್‌ ಆರೋಪ: ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

ಸುರೇಶ್ ಕುಮಾರ್ ವಿರುದ್ಧ 300 ಕೋಟಿ ಟೆಂಡರ್ ಗೋಲ್ಮಾಲ್‌ ಆರೋಪ: ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada