ಪಾಕಿಸ್ತಾನ ಮತ್ತು ಚೀನಾ ದೇಶಗಳಿಂದ ಬರುವ ಬೆದರಿಕೆ ಹಾಗೂ ಇನ್ನಿತರ ದಾಳಿಗಳನ್ನು ಎದುರಿಸಲು ಶ್ರೀನಗರದ ವಾಯುನೆಲೆಯಲ್ಲಿ ನವೀಕರಿಸಿದ ಮಿಗ್-29 ಫೈಟರ್ ಜೆಟ್‌ಗಳ ತಂಡವೊಂದನ್ನು (ಸ್ಕ್ವಾಡ್ರನ್) ಭಾರತ ನಿಯೋಜಿಸಿದೆ.
ಈ ಫೈಟರ್ ಜೆಟ್‌ಗಳ ಗುಂಪನ್ನು ಉತ್ತರದ ರಕ್ಷಕ ಎಂದು ಕರೆಯಲಾಗುತ್ತದೆ. ಪ್ರಮುಖವಾಗಿ ಪಾಕಿಸ್ತಾನದಿಂದ ಎದುರಾಗುವ ಬೆದರಿಕೆ, ದಾಳಿಗಳನ್ನು ಎದುರಿಸುವ ಸಾಮರ್ಥ್ಯವನ್ನು ಈ ಮಿಗ್-29 ಫೈಟರ್ ಜೆಟ್ ಹೊಂದಿದೆ.
ಶ್ರೀನಗರದಂತಹ ಎತ್ತರ ಪ್ರದೇಶದಲ್ಲಿ ಈ ಯುದ್ಧ ವಿಮಾನ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಇಲ್ಲಿ ಒತ್ತಡವೂ ಹೆಚ್ಚಾಗಿರುವುದರಿಂದ ಈ ಪರಿಸ್ಥಿತಿಯಲ್ಲಿ ಈ ಯುದ್ಧ ವಿಮಾನಗಳು ಶತ್ರುಗಳನ್ನು ಎದುರಿಸಲು ಸಮರ್ಥವಾಗಿದೆ ಎಂದು ಭಾರತೀಯ ವಾಯುಪಡೆಯ ಪೈಲಟ್ ಸ್ಕ್ಯಾಡ್ರನ್ ಲೀಡರ್ ವಿಪುಲ್ ಶರ್ಮಾ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಂದ್ರಯಾನ 3 ಹಾರಿದ ವಾರದ ಬಳಿಕ ಚಂದ್ರನತ್ತ ಜಿಗಿದ ರಷ್ಯಾದ ನೌಕೆ
ಸಂಘರ್ಷದ ಸಮಯದಲ್ಲಿ ಶತ್ರುಗಳ ವಿಮಾನಗಳನ್ನು ನಿಷ್ಕ್ರಿಯಗೊಳಿಸುವ ಶಕ್ತಿಯನ್ನೂ ಮಿಗ್-29 ಹೊಂದಿದೆ. ಈ ಯುದ್ಧ ವಿಮಾನ ರಾತ್ರಿಯಲ್ಲಿ ಕಾರ್ಯನಿರ್ವಹಿಸಬಲ್ಲದು. ಆಕಾಶದ ಮಧ್ಯದಲ್ಲೇ ವಿಮಾನಕ್ಕೆ ಇಂಧನ ತುಂಬುವ ಸಾಮರ್ಥ್ಯವಿರುವ ಕಾರಣದಿಂದಾಗಿ ದೀರ್ಘ ವ್ಯಾಪ್ತಿಯನ್ನು ಹೊಂದಿರುತ್ತದೆ. ಈ ವಿಮಾನಗಳಲ್ಲಿ ಸೇವೆ ಸಲ್ಲಿಸಲು ಭಾರತೀಯ ವಾಯುಪಡೆಯಿಂದ ಆಯ್ಕೆಯಾದ ಪೈಲಟ್ಗಳು ವಿಮಾನದ ದೊಡ್ಡ ಶಕ್ತಿ ಎಂದು ಫೈಟ್ ಜೆಟ್ ತಂಡದ ನಾಯಕ ಶಿವಮ್ ರಾಣಾ ತಿಳಿಸಿದ್ದಾರೆ.