ದೆಹಲಿಯ ಪ್ರಸಿದ್ದ ಜಾಮಾ ಮಸೀದಿಗೆ ಹೆಣ್ಣು ಮಕ್ಕಳಿಗೆ ಪ್ರವೇಶ ನಿರ್ಬಂಧಿಸಿ ಆದೇಶ ಹೊರಡಿಸಲಾಗಿದ್ದು ಈ ಬಗ್ಗೆ ಮುಖ್ಯದ್ವಾರ ಹಾಗೂ ಮಸೀರಿಯೊಳಗೆ ಬಿತ್ತಿಪತ್ರಗಳನ್ನ ಅಂಟಿಸಲಾಗಿದೆ.
ನೂತನ ಆದೇಶ ತೀವ್ರ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ಮಧ್ಯಪ್ರವೇಶಿಸಿರುವ ಆಡಳಿತ ಮಂಡಳಿ ಸದಸ್ಯ ಶಾಹಿ ಇಮಾಮ್ ಪ್ರಾರ್ಥನೆ ಸಲ್ಲಿಸಲು ಬರುವವರಿಗೆ ಯಾವ ನಿರ್ಬಂಧವಿರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಳೆದ ಕೆಲವು ದಿನಗಳಿಂದ ಮಸೀದಿಯ ಮೂರು ಮುಖ್ಯ ದ್ವಾರಗಳಲ್ಲಿ ಆದೇಶದ ಪ್ರತಿಗಳನ್ನು ಅಂಟಿಸಲಾಗಿತ್ತು ಮತ್ತು ಆಡಳಿತ ಮಂಡಳಿಯ ಗಮನಕ್ಕೆ ತಡವಾಗಿ ಬಂದಿದೆ ಎಂದು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಇದು ಮಹಿಳೆಯರಿಗೆ ಇರುವ ಹಕ್ಕುಗಳ ಉಲ್ಲಂಘನೆ ಮತ್ತು ಈ ಬಗ್ಗೆ ಸ್ಪಷ್ಟನೆ ಕೋರಿ ಆಯೋಗದಿಂದ ನೋಟಿಸ್ ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.
ಜಾಮಾ ಮಸೀದಿಗೆ ಮಹಿಳೆಯರಿಗೆ ಪ್ರವೇಶ ನಿರ್ಬಂಧಿಸಿರುವುದು ಸಂಪೂರ್ಣ ತಪ್ಪು ಒಬ್ಬ ಪುರುಷನಿಗೆ ಪ್ರಾರ್ಥಿಸಲು ಯಾವ ರೀತಿಯ ಹಕ್ಕಿದೆಯೋ ಅದೇ ರೀತಿ ಮಹಿಳೆಗೂ ಸಹ ಇದೆ. ಈ ರೀತಿ ಮಹಿಳೆಯರಿಗೆ ಪ್ರವೇಶ ನಿರ್ಬಂಧಿಸುವ ಹಕ್ಕು ಯಾರಿಗೂ ಇಲ್ಲ ಎಂದು ಕಿಡಿಕಾರಿದ್ದಾರೆ.