• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, May 1, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ಮೂವರು ಲೇಖಕರ ಪಠ್ಯಗಳನ್ನು ಕೈಬಿಟ್ಡಿರುವುದನ್ನು ಸಮರ್ಥಿಸಿದ ದೆಹಲಿ ವಿವಿ

ಫಾತಿಮಾ by ಫಾತಿಮಾ
August 28, 2021
in ದೇಶ
0
ಮೂವರು ಲೇಖಕರ ಪಠ್ಯಗಳನ್ನು ಕೈಬಿಟ್ಡಿರುವುದನ್ನು ಸಮರ್ಥಿಸಿದ ದೆಹಲಿ ವಿವಿ
Share on WhatsAppShare on FacebookShare on Telegram

ದೆಹಲಿ ವಿಶ್ವವಿದ್ಯಾನಿಲಯವು ತಮಿಳು ದಲಿತ ಬರಹಗಾರರಾದ ಬಾಮಾ ಫೌಸ್ಟಿನಾ ಸೂಸಾಯಿರಾಜ್ ಮತ್ತು ಸುಕೀರ್ಥರಾಣಿ ಹಾಗೂ ಬಂಗಾಳಿ ಲೇಖಕಿ ಮಹಾಶ್ವೇತಾದೇವಿ ಅವರ ಬರೆದಿರುವ ಪಠ್ಯವನ್ನು ಪದವಿಪೂರ್ವ ಶಿಕ್ಷಣದಿಂದ ಕೈಬಿಡುವ ನಿರ್ಧಾರವನ್ನು ಗುರುವಾರ ಸಮರ್ಥಿಸಿಕೊಂಡಿದೆ ಮತ್ತು ಪ್ರಜಾಪ್ರಭುತ್ವ ಪ್ರಕ್ರಿಯೆಯ ಮೂಲಕ ಪಠ್ಯಕ್ರಮವನ್ನು ಅನುಮೋದಿಸಲಾಗಿದೆ ಎಂದು ಹೇಳಿದೆ.

ADVERTISEMENT

“ಭಾಷಾ ಕೋರ್ಸ್‌ನಲ್ಲಿ ಪಠ್ಯದ ಭಾಗವಾಗಿರುವ ಸಾಹಿತ್ಯಿಕ ವಿಷಯವು ಯಾವುದೇ ವ್ಯಕ್ತಿಯ ಭಾವನೆಗಳನ್ನು ನೋಯಿಸದಂತಿರಬೇಕು ಮತ್ತು ನಮ್ಮ ಸಮಾಜದ ನೈಜ ಚಿತ್ರಣವನ್ನು ಚಿತ್ರಿಸಬೇಕು ಎಂಬ ಕಲ್ಪನೆಗೆ ವಿಶ್ವವಿದ್ಯಾಲಯವು ಬದ್ಧವಾಗಿದೆ” ಎಂದೂ‌ ಹೇಳಿದೆ.

ದೇವಿ ಅವರ ಸಣ್ಣ ಕಥೆ ‘ದ್ರೌಪದಿ’, ಸುಕೀರ್ಥಾರಿಣಿ ಅವರ ‘ಮೈ ಬಾಡಿ’ ಮತ್ತು ಸೂಸೈರಾಜ್ ಅವರ ‘ಸಂಗಾತಿ’ ಎಂಬ ಮೂರು ಪಠ್ಯಗಳನ್ನು ಅದರ ಬಿಎ (ಆನರ್ಸ್) ಇಂಗ್ಲಿಷ್ ಕೋರ್ಸ್‌ನಿಂದ ತೆಗೆದುಹಾಕಿದ್ದಕ್ಕಾಗಿ ಸಂಸ್ಥೆಯು ವ್ಯಾಪಕ ಟೀಕೆಗೆ ಒಳಗಾಗಿತ್ತು. ಅಲ್ಲದೆ ಬುಧವಾರ, ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಕೌನ್ಸಿಲ್‌ನ 15 ಸದಸ್ಯರೇ ಈ ಕ್ರಮವನ್ನು ವಿರೋಧಿಸಿ ಇದನ್ನು “ವಿಧ್ವಂಸಕ” ಎಂದು ಕರೆದಿದ್ದರು.

“ಮೇಲ್ವಿಚಾರಣಾ ಸಮಿತಿಯು ಯಾವಾಗಲೂ ದಲಿತರು, ಬುಡಕಟ್ಟುಗಳು, ಮಹಿಳೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರ ಪ್ರಾತಿನಿಧ್ಯದ ವಿರುದ್ಧ ಪೂರ್ವಾಗ್ರಹವನ್ನು ತೋರಿಸುತ್ತಾ ಬಂದಿದೆ. ಅಂತಹ ಎಲ್ಲಾ ಧ್ವನಿಗಳನ್ನು ಪಠ್ಯಕ್ರಮದಿಂದ ತೆಗೆದುಹಾಕಲು ಅದು ಮಾಡುತ್ತಿರುವ ಸಂಘಟಿತ ಪ್ರಯತ್ನಗಳು ಸ್ಪಷ್ಟವಾಗಿವೆ” ಎಂದು ಸದಸ್ಯರು ಹೇಳಿದ್ದಾರೆ.

ಆದರೆ ಟೀಕೆಗಳ ಹೊರತಾಗಿಯೂ, ವಿಶ್ವವಿದ್ಯಾನಿಲಯವು ಗುರುವಾರ ತನ್ನ ಪಠ್ಯಕ್ರಮವನ್ನು ಸಮರ್ಥಿಸಿಕೊಂಡಿದೆ. ಸಂಸ್ಥೆಯು ತನ್ನ ಪಠ್ಯಕ್ರಮವು “ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ವಿದ್ವಾಂಸರ ಕೃತಿಗಳನ್ನು ಅವರ ಬಣ್ಣ, ಜಾತಿ ಅಥವಾ ಮತವನ್ನು ಪರಿಗಣಿಸದೆ ಒಳಗೊಂಡಿದೆ” ಎಂದು ಹೇಳಿದೆ. ಭಾರತೀಯ ಸೈನ್ಯವನ್ನು ಕೆಟ್ಟ ರೀತಿಯಲ್ಲಿ ತೋರಿಸಿದ ಮತ್ತು ಭಯಾನಕ ಲೈಂಗಿಕ ವಿಷಯವನ್ನು ಹೊಂದಿದ್ದ ಕಾರಣ ಈ ಮೂರು ಪಠ್ಯಗಳನ್ನು ಕೋರ್ಸ್‌ನಿಂದ ತೆಗೆದುಹಾಕಲಾಗಿದೆ ಎಂದು ವಿಶ್ವವಿದ್ಯಾಲಯದ ಹೆಸರು ಹೇಳಲಿಚ್ಛಿಸದ ಅಧಿಕಾರಿಗಳು ಬುಧವಾರ ‘ದಿ ಪ್ರಿಂಟ್‌’ಗೆ ತಿಳಿಸಿದ್ದಾರೆ.

ಡಿಯು ಶಿಕ್ಷಕರ ಸಂಘದ ಖಜಾಂಚಿ ಅಭಾ ದೇವ್ ಹಬೀಬ್ ಅವರು ವಿಶ್ವವಿದ್ಯಾನಿಲಯದ ಆಡಳಿತವು ಪಠ್ಯಕ್ರಮದಿಂದ ‘ಅನೈತಿಕ ಮತ್ತು ಅನೌಪಚಾರಿಕ ಲೇಖಕರನ್ನು ಕತ್ತರಿಸುವಲ್ಲಿ’ ಸಹಭಾಗಿತ್ವ ಹೊಂದಿದೆ ಎಂದು ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

“ವಿಶ್ವವಿದ್ಯಾನಿಲಯವು ಶೈಕ್ಷಣಿಕ ಸ್ವಾತಂತ್ರ್ಯವನ್ನು ಎತ್ತಿಹಿಡಿಯುವ ತನ್ನ ಜವಾಬ್ದಾರಿಯನ್ನು ಸಂಪೂರ್ಣವಾಗಿ ಕೈಬಿಟ್ಟಿದೆ ಮತ್ತು ನಂಬಿಕೆಗೆ ಘಾಸಿ ಎನ್ನುವ ಹೆಸರಿನಲ್ಲಿ ಉನ್ನತ ಶಿಕ್ಷಣದಲ್ಲಿ ಕಠಿಣ ವಿಮರ್ಶೆಯ ಪಠ್ಯಗಳನ್ನು ಕೈ ಬಿಡುತ್ತಿದೆ” ಎಂದು ಅವರು ಹೇಳಿದ್ದಾರೆ

ಭಾರತೀಯ ಜನತಾ ಪಕ್ಷ ಮತ್ತು ಅದರ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಆದೇಶದಂತೆ ಹಿರಿಯ ಶಿಕ್ಷಣತಜ್ಞರು ಕೋರ್ಸ್‌ಗಳ ಮೇಲೆ ಸೆನ್ಸಾರ್‌ಶಿಪ್ ಹೇರುವ ಸಾಧನಗಳಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಹಬೀಬ್ ವಿಷಾದ ವ್ಯಕ್ತಪಡಿಸಿದ್ದಾರೆ.

Tags: Delhi University
Previous Post

ಏಕಾಂಗಿ ರಾಜ್ಯ ಪ್ರವಾಸ ಕೈಬಿಟ್ಟ ಬಿ.ಎಸ್ ಯಡಿಯೂರಪ್ಪ; ಕಾರಣ ಏನು ಗೊತ್ತಾ?

Next Post

ಕೊಡಗಿನತ್ತ ಪ್ರವಾಸಿಗರನ್ನು ಸೆಳೆಯುತ್ತಿದೆ ನೀಲಕುರುಂಜಿ ಹೂವುಗಳು

Related Posts

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..
Top Story

ಕಾಂಗ್ರೆಸ್ ಪಕ್ಷ ಅಧಃಪತನಕ್ಕೆ ಹೋಗಿ, ಬಿಜೆಪಿ ಆಕಾಶದೆತ್ತರಕ್ಕೆ ಹಾರೋ ಕಾಲ ಸಮೀಪಿಸುತ್ತಿದ್ದೆ..

by ಪ್ರತಿಧ್ವನಿ
April 30, 2026
0

ಹಾವೇರಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿ ಆಗುವ ಆಸೆ ಇದೆ ಅಂದಿದ್ದಾರೆ ಮೇ 4 ರ ನಂತರ ಸಿಎಂ ಸಿದ್ದರಾಮಯ್ಯ ಅವರ ಕುರ್ಚಿ ಇರುತ್ತದೆಯೋ ಇಲ್ವವೊ...

Read moreDetails
ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಅವಘಡ ; ಕಾರ್ಯಪಾಲಕ ಇಂಜಿನಿಯರ್ ಅಮಾನತಿಗೆ ಸಿಎಂ ಸಿದ್ದರಾಮಯ್ಯ ಸೂಚನೆ

April 30, 2026
ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

ರಾಜಕೀಯವನ್ನೂ ಮೀರಿದ್ಧು ಮಾನವೀಯತೆ : ಮುಖ ಸುಟ್ಟುಕೊಂಡಿದ್ದ ಬಿಜೆಪಿ ಶಾಸಕಿ ಭೇಟಿಯಾಗಿ ಎಸ್‌ಪಿ ನಾಯಕ ಹೇಳಿದ್ದೇನು..?

April 29, 2026
“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

“ಖರ್ಗೆ AICC ಅಧ್ಯಕ್ಷರಾಗಿರೋದೆ ನಮ್ಮ ಸೌಭಾಗ್ಯ, ಅವ್ರು ರಾಜ್ಯದ ಸಿಎಂ ಆಗಲಿ”

April 29, 2026
ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

ಇವರು ಪಂಚರೋ..? ನೀಚರೋ..? : ಸಚಿವೆ ಹೆಬ್ಬಾಳ್ಕರ್‌ ಕ್ಷೇತ್ರದಲ್ಲೇ ಕುರುಬ ಸಮುದಾಯದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ..!

April 29, 2026
Next Post
ಕೊಡಗಿನತ್ತ ಪ್ರವಾಸಿಗರನ್ನು ಸೆಳೆಯುತ್ತಿದೆ ನೀಲಕುರುಂಜಿ ಹೂವುಗಳು

ಕೊಡಗಿನತ್ತ ಪ್ರವಾಸಿಗರನ್ನು ಸೆಳೆಯುತ್ತಿದೆ ನೀಲಕುರುಂಜಿ ಹೂವುಗಳು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada