• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 9, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

47.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಿಸಿದ ದೆಹಲಿ!

ಫಾತಿಮಾ by ಫಾತಿಮಾ
May 15, 2022
in ದೇಶ
0
47.2 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಿಸಿದ ದೆಹಲಿ!
Share on WhatsAppShare on FacebookShare on Telegram

ಕಳೆದ ಮೂರು ದಿನಗಳಿಂದ ದೆಹಲಿಯನ್ನು ಸುಡುತ್ತಿರುವ ಬಿಸಿಗಾಳಿಯು ಶನಿವಾರ ಉಲ್ಬಣಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮೊದಲೇ ಎಚ್ಚರಿಕೆ ನೀಡಿ ಆರೆಂಜ್ ಅಲರ್ಟ್ ಘೋಷಿಸಿತ್ತು. ನಗರದ ಕೆಲವು ಭಾಗಗಳಲ್ಲಿ 46-47 ಡಿಗ್ರಿ ಸೆಲ್ಸಿಯಸ್‌ ಉಷ್ಣತೆ ದಾಖಲಾಗಬಹುದೆಂದು ಅಂದಾಜು ಮಾಡಲಾಗಿತ್ತು.

ADVERTISEMENT

ದೆಹಲಿಯ ಮೂಲ ನಿಲ್ದಾಣವಾದ ಸಫ್ದರ್‌ಜಂಗ್ ವೀಕ್ಷಣಾಲಯದಲ್ಲಿ ಶುಕ್ರವಾರದ ಗರಿಷ್ಠ ತಾಪಮಾನವು 42.5 ಡಿಗ್ರಿಯನ್ನು ಆಧಾರವಾಗಿಟ್ಟು ಶನಿವಾರ ಈ ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ನಲ್ಲಿ ನೆಲೆಸಲಿದೆ ಎಂದು ಮೊದಲು ಊಹಿಸಲಾಗಿತ್ತು. ಆದರೆ ಶನಿವಾರ ಸಫ್ದರ್‌ಜಂಗ್‌ನಲ್ಲಿ 45.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು. ಇದು ದೆಹಲಿಯಲ್ಲಿ ದಾಖಲಾಗುವ ಸಾಮಾನ್ಯ ತಾಪಮಾನಕ್ಕಿಂತ ಐದು ಡಿಗ್ರಿ ಹೆಚ್ಚು ಮತ್ತು ಈ ಋತುವಿನಲ್ಲಿ ದಾಖಲಾದ ಅತ್ಯಂತ ಹೆಚ್ಚಿನ ತಾಪಮಾನವಾಗಿದೆ.

ಶನಿವಾರ ದೆಹಲಿಯ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ 46.9 ಡಿಗ್ರಿ ಸೆಲ್ಸಿಯಸ್, ಪಿತಾಂಪುರದಲ್ಲಿ 46.4 ಡಿಗ್ರಿ ಸೆಲ್ಸಿಯಸ್, ಜಾಫರ್‌ಪುರದಲ್ಲಿ 45.8 ಡಿಗ್ರಿ ಸೆಲ್ಸಿಯಸ್ ಮತ್ತು ರಿಡ್ಜ್ ಮತ್ತು ಅಯಾನಗರದಲ್ಲಿ 45.4 ಡಿಗ್ರಿ ಸೆಲ್ಸಿಯಸ್‌, ಮಂಗೇಶ್‌ಪುರ್‌ನಲ್ಲಿ 47.2 ಮತ್ತು ನಜಾಫ್‌ಗರ್‌ಲ್ಲಿ 47 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಕಂಡಿದೆ. ಸಾಮಾನ್ಯವಾಗಿ ಗರಿಷ್ಠ ತಾಪಮಾನವು 47 ಡಿಗ್ರಿ ಸೆಲ್ಸಿಯಸ್ ಮಾರ್ಕ್ ಅನ್ನು ದಾಟಿದರೆ ತೀವ್ರವಾದ ಶಾಖದ ಅಲೆಯನ್ನು ಘೋಷಿಸಲಾಗುತ್ತದೆ.

ಭಾನುವಾರದಂದು ಬಿಸಿಗಾಳಿಯು ಮತ್ತಷ್ಟು ಉಲ್ಬಣಗೊಳ್ಳಲಿದೆ ಎಂದು ಹವಾಮಾನ ಮುನ್ಸೂಚಕರು ತಿಳಿಸಿದ್ದಾರೆ. ಭಾನುವಾರವೂ ತೀವ್ರವಾದ ಶಾಖದ ಅಲೆಯ ಬಗ್ಗೆ ಜನರಿಗೆ ಎಚ್ಚರಿಕೆ ನೀಡಲು ‘ಆರೆಂಜ್’ ಅಲರ್ಟ್ ಘೋಷಿಸಲಾಗಿದೆ. ಹವಾಮಾನ ಎಚ್ಚರಿಕೆಗಳಿಗಾಗಿ IMD ನಾಲ್ಕು ಬಣ್ಣದ ಕೋಡ್‌ಗಳನ್ನು ಬಳಸುತ್ತಿದ್ದು ಹಸಿರು (ಯಾವುದೇ ಕ್ರಿಯೆಯ ಅಗತ್ಯವಿಲ್ಲ), ಹಳದಿ (ವೀಕ್ಷಿಸಿ ಮತ್ತು ), ಕಿತ್ತಳೆ (ಸಿದ್ಧರಾಗಿರಿ) ಮತ್ತು ಕೆಂಪು (ಕ್ರಮ ತೆಗೆದುಕೊಳ್ಳಿ).

ಈ ಬೇಸಿಗೆಯಲ್ಲಿ ಒಟ್ಟು ಐದು ಬಾರಿ ದೆಹಲಿಯಲ್ಲಿ ಬಿಸಿ ಗಾಳಿ ಬೀಸಿದ್ದು ಮೋಡ ಕವಿದ ಆಕಾಶ ಮತ್ತು ಗುಡುಗು ಮುಂದಿನ ವಾರ ತೀವ್ರವಾದ ಶಾಖದಿಂದ ಸ್ವಲ್ಪ ಮಟ್ಟಿಗಿನ ಮುಕ್ತಿ ನೀಡಬಹುದು ಎಂದು ನಿರೀಕ್ಷಿಸಲಾಗಿದೆ.

ದೆಹಲಿಯು ಈ ಬಾರಿ 122 ವರ್ಷಗಳಲ್ಲಿ ಅತ್ಯಂತ ಹೆಚ್ಚು ತಾಪಮಾನದ ಎಪ್ರಿಲ್‌ನ್ನು ಕಂಡಿದ್ದು ತಿಂಗಳಾಂತ್ಯದಲ್ಲಿ ಬಿಸಿಗಾಳಿಯು ನಗರದ ಹಲವಾರು ಭಾಗಗಳಲ್ಲಿ ಉಷ್ಣತೆಯನ್ನು 46 ಮತ್ತು 47 ಡಿಗ್ರಿ ಸೆಲ್ಸಿಯಸ್‌ಗೆ ಏರಿಸಿತ್ತು. ಅಲ್ಲದೆ ಸಾಧಾರಣವಾಗಿ ದೆಹಲಿಯಲ್ಲಿ ಏಪ್ರಿಲ್‌ನಲ್ಲಿ ಮಾಸಿಕ ಸರಾಸರಿ 12.2 ಮಿಮೀ ಮಳೆಯಾಗುತ್ತದೆ. ಈ ಬಾರಿ 0.3 ಮಿಮೀ ಕಡಿಮೆ ಮಳೆಯಾಗಿದೆ. ಮಾರ್ಚ್‌ನಲ್ಲಿ ಸರಾಸರಿ ಮಳೆ 15.9 ಮಳೆಯಾಗುತ್ತದೆ ಈ ಬಾರಿ ಮಳೆ ಬಂದೇ ಇಲ್ಲ.

Previous Post

ಕಾಂಗ್ರೆಸ್ಗೆ ಹಾರ್ದಿಕ್ ಪಟೇಲ್ ರಾಜೀನಾಮೆ ?

Next Post

ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಕಾಂಗ್ರೆಸ್ ಪಾದಯಾತ್ರೆ?

Related Posts

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ
Top Story

ಇಂಧನ ಕೊರತೆ ಆರೋಪ: ಕೇಂದ್ರದ ವಿರುದ್ಧ ಕೆ.ಹೆಚ್. ಮುನಿಯಪ್ಪ ವಾಗ್ದಾಳಿ

by ಪ್ರತಿಧ್ವನಿ
April 6, 2026
0

ಇಂಧನ ಕೊರತೆ ಮತ್ತು ಎಲ್‌ಪಿಜಿ ಸರಬರಾಜಿನ ಸಮಸ್ಯೆ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಟೀಕೆ ವ್ಯಕ್ತವಾಗಿದೆ. ಈ ಬಗ್ಗೆ ಕೆ.ಹೆಚ್. ಮುನಿಯಪ್ಪ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಪ್ರಾಯ...

Read moreDetails
ಟೆರಿಟೋರಿಯಲ್ ಆರ್ಮಿಯಲ್ಲಿ ಉದ್ಯೋಗ:ಯುವಕರಿಗೆ ಸುವರ್ಣಾವಕಾಶ

 ಮೊಹಮ್ಮದ್ ಇಕ್ಬಾಲ್ ‘ಪಲಾಯನಗೈದ ಆರ್ಥಿಕ ಅಪರಾಧಿ’ ಎಂದು ನ್ಯಾಯಾಲಯ ಘೋಷಣೆ

April 1, 2026
ಶೋಬಾ ಕರಂದ್ಲಾಜೆ ಕಾರು ಡಿಕ್ಕಿಯಾಗಿ ವ್ಯಕ್ತಿ ಬಲಿಯಾಗಿರುವ ಘಟನೆ

ರಾಜ್ಯ ಸರ್ಕಾರದ ವಿರುದ್ಧ ಶೋಭಾ ಕರಂದ್ಲಾಜೆ ವಾಗ್ದಾಳಿ

March 30, 2026
ಅಯೋಧ್ಯೆ ರಾಮಮಂದಿರದ ಸಮೀಪ ಬೆಂಕಿ: ಭಾರೀ ದುರಂತ 

ಅಯೋಧ್ಯೆ ರಾಮಮಂದಿರದ ಸಮೀಪ ಬೆಂಕಿ: ಭಾರೀ ದುರಂತ 

March 30, 2026
ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಆರ್‌ಸಿಬಿ : ತೀವ್ರ ಕುತೂಹಲ ಕೆರಳಿಸಿದ ಬಲಿಷ್ಠ ತಂಡಗಳ ಕಾದಾಟ..

ಟಾಸ್‌ ಗೆದ್ದು ಬೌಲಿಂಗ್‌ ಆಯ್ಕೆ ಮಾಡಿಕೊಂಡ ಆರ್‌ಸಿಬಿ : ತೀವ್ರ ಕುತೂಹಲ ಕೆರಳಿಸಿದ ಬಲಿಷ್ಠ ತಂಡಗಳ ಕಾದಾಟ..

March 28, 2026
Next Post
ಪಕ್ಷದಲ್ಲಿ ತುರ್ತು ಬದಲಾವಣೆ ಅಗತ್ಯ: ಸೋನಿಯಾ ಗಾಂಧಿ

ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ಕಾಂಗ್ರೆಸ್ ಪಾದಯಾತ್ರೆ?

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada