• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Friday, April 24, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ದೇಶ

ದೆಹಲಿ ಸಿಎಂ ಅಧಿಕಾರ ಸ್ವೀಕಾರ.. ಮೋದಿ ಏನಂತ ಗುಟ್ಟು ಹೇಳಿದ್ರು..?

ಕೃಷ್ಣ ಮಣಿ by ಕೃಷ್ಣ ಮಣಿ
February 21, 2025
in ದೇಶ, ರಾಜಕೀಯ
0
ದೆಹಲಿ ಸಿಎಂ ಅಧಿಕಾರ ಸ್ವೀಕಾರ.. ಮೋದಿ ಏನಂತ ಗುಟ್ಟು ಹೇಳಿದ್ರು..?
Share on WhatsAppShare on FacebookShare on Telegram

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ದರ್ಬಾರ್‌ ಶುರುವಾಗಿದೆ. ದೆಹಲಿಯ ಮುಖ್ಯಮಂತ್ರಿ ಆಗಿ ಇವತ್ತು ರೇಖಾ ಗುಪ್ತ ದೆಹಲಿಯಲ್ಲಿ 4ನೇ ಮಹಿಳಾ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಮಲೀಲಾ ಮೈದಾನದಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಈಶ್ವರನ ಹೆಸರಲ್ಲಿ ರೇಖಾ ಗುಪ್ತ ಪ್ರತಿಜ್ಞಾವಿಧಿ ಸ್ವೀಕರಿಸಿದ್ದಾರೆ.. ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಪ್ರಮಾಣ ವಚನ ಬೋಧಿಸಿದ್ರು..

ADVERTISEMENT

ರೇಖಾ ಗುಪ್ತಾ ಅವರೊಂದಿಗೆ ಪರ್ವೇಶ್ ವರ್ಮಾ, ಆಶಿಶ್ ಸೂದ್, ಮಂಜಿಂದರ್ ಸಿಂಗ್ ಸಿರ್ಸಾ, ಕಪಿಲ್ ಮಿಶ್ರಾ, ರವೀಂದರ್ ಇಂದ್ರಜ್ ಸಿಂಗ್ ಮತ್ತು ಪಂಕಜ್ ಸಿಂಗ್ ದೆಹಲಿಯ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಷಾ, ಕೇಂದ್ರ ಸಚಿವರು, ಬಿಜೆಪಿ ಆಡಳಿತ ಇರೋ ರಾಜ್ಯಗಳ ಸಿಎಂಗಳು.. ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌ ಭಾಗಿಯಾಗಿ ನೂತನ ಸರ್ಕಾರಕ್ಕೆ ಶುಭಹಾರೈಸಿದ್ರು..

Siddaramaiah : ಹೆಸರನ್ನು ಹೇಳದೆ ಕುಮಾರಸ್ವಾಮಿನ ಹೊಗಳಿದ ಸಿಎಂ ಸಿದ್ದರಾಮಯ್ಯ #pratidhvani

ಪ್ರಮಾಣ ವಚನ ಸ್ವೀಕಾರ ಬಳಿಕ ಸಿಎಂ ಅಧಿಕೃತ ಕಚೇರಿಗೆ ತೆರಳಿದ ಸಿಎಂ ರೇಖಾ ಗುಪ್ತ ವಿಕಸಿತ ದೆಹಲಿಗಾಗಿ ನಿಷ್ಠೆಯಿಂದ ಕೆಲಸ ಮಾಡುವುದಾಗಿ ಹೇಳಿದ್ರು.. ವಿಕಸಿತ ದೆಹಲಿಯ ಧ್ಯೇಯ ಸಾಧಿಸಬೇಕು, ಅದಕ್ಕಾಗಿ ನಿರಂತರವಾಗಿ ಕೆಲಸ ಮಾಡುತ್ತೇವೆ. ಒಂದು ದಿನವೂ ವ್ಯರ್ಥ ಮಾಡುವುದಿಲ್ಲ. ನಾವು ಕೊಟ್ಟ ಭರವಸೆಗಳನ್ನೆಲ್ಲಾ ಈಡೇರಿಸುತ್ತೇವೆ ಎಂದಿದ್ದಾರೆ. ದೆಹಲಿ ನೂತನ ಸಿಎಂ ರೇಖಾ ಗುಪ್ತ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಅಭಿನಂದಿಸಿದ್ದಾರೆ..

ರೇಖಾ ಗುಪ್ತಾ ಅವರು ತಳಮಟ್ಟದಿಂದ ಬೆಳೆದು ಬಂದವರು. ಕ್ಯಾಂಪಸ್ ರಾಜಕೀಯ, ರಾಜ್ಯ ಸಂಘಟನೆ, ಪುರಸಭೆ ಆಡಳಿತದಲ್ಲಿ ಸಕ್ರಿಯರಾಗಿದ್ದಾರೆ ಮತ್ತು ಈಗ ಶಾಸಕಿ ಹಾಗೂ ಮುಖ್ಯಮಂತ್ರಿಯಾಗಿದ್ದಾರೆ. ದೆಹಲಿಯ ಅಭಿವೃದ್ಧಿಗಾಗಿ ಅವರು ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡುತ್ತಾರೆ ಎಂಬ ವಿಶ್ವಾಸ ನನಗಿದೆ. ಅವರ ಅಧಿಕಾರಾವಧಿ ಫಲಪ್ರದವಾಗಲಿ ಎಂದು ಹಾರೈಸುವೆ ಎಂದಿದ್ದಾರೆ.

Siddaramaiah : ಹೆಸರನ್ನು ಹೇಳದೆ ಕುಮಾರಸ್ವಾಮಿನ ಹೊಗಳಿದ ಸಿಎಂ ಸಿದ್ದರಾಮಯ್ಯ #pratidhvani

ದೆಹಲಿ ಬಿಜೆಪಿ ಮಾಜಿ ಅಧ್ಯಕ್ಷ ವಿಜೇಂದ್ರ ಗುಪ್ತ ಅವರು ವಿಧಾನಸಭಾ ಸ್ಪೀಕರ್ ಆಗುವುದು ಬಹುತೇಕ ಖಚಿತವಾಗಿ… ಉಪಸಭಾಪತಿ ಹುದ್ದೆಗೆ ಮೋಹನ್ ಸಿಂಗ್ ಬಿಶ್ತ್ ಅವರ ಹೆಸರನ್ನು ಘೋಷಿಸಲಾಗಿದೆ.. ಒಟ್ಟಾರೆ 26 ವರ್ಷಗಳ ಬಳಿಕ ದೆಹಲಿಯಲ್ಲಿ ಕೇಸರಿ ಯುಗ ಆರಂಭವಾಗಿದ್ದು ಡಬಲ್‌‌ ಇಂಜಿನ್‌ ಸರ್ಕಾರದ ಬಗ್ಗೆ ಭಾರೀ ನಿರೀಕ್ಷೆ ಮೂಡಿಸಿದೆ.

ಪ್ರಮಾಣ ವಚನ ಸಮಾರಂಭದಲ್ಲಿ ಆಂಧ್ರ ಡಿಸಿಎಂ ಪವನ್‌ ಕಲ್ಯಾಣ್‌‌ ಕೈ ಹಿಡಿದು ನಗುನಗುತ್ತ ಮಾತಾಡಿದ ಪ್ರಧಾನಿ ಮೋದಿ, ಕೇಸರಿ ಉಡುಪಿನಲ್ಲಿದ್ದ ಪವನ್‌ ಕಲ್ಯಾಣ್‌ ಅವರನ್ನ ನೋಡಿ, ನೀನು ಮತ್ತೊಬ್ಬ ಯೋಗಿ ಆದಿತ್ಯನಾಥ್ ಆಗ್ತಿದ್ಯಾ..? ಹಿಮಾಲಯಕ್ಕೆ ಹೋಗ್ತಿದ್ಯಾ ಅಂತ ಕೇಳಿದ್ರು ಅಂತೆಲ್ಲಾ ಜನ ಜಾಲತಾಣದಲ್ಲಿ ಕಮೆಂಟ್‌ ಮಾಡ್ತಿದ್ದಾರೆ..

Tags: delhi bjp new cmDelhi CMdelhi cm announcementdelhi cm livedelhi cm newsdelhi cm oathdelhi cm oath ceremonydelhi cm oath ceremony datedelhi cm rekha guptadelhi new cmdelhi new cm 2025delhi new cm facedelhi new cm livedelhi new cm namedelhi new cm newsdelhi new cm rekha guptanew cm of delhi updatenew delhi cmrekha gupta delhi cmrekha gupta delhi new cmrekha gupta new delhi cmwho will be delhi new cm
Previous Post

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಮುಗಿ ಬಿದ್ದ ಮಾಜಿ ಸಿಎಂ..

Next Post

ಮುಡಾ ಕೇಸ್‌ ರಿಪೋರ್ಟ್‌.. ಸಿಎಂ ವಿರೋಧಿಗಳು ಏನಂತಾರೆ..?

Related Posts

ಬೆಸ್ಕಾಂನ ‘ಹೆಚ್‌ಟಿ ಮಿತ್ರ’  ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್
Top Story

ಬೆಸ್ಕಾಂನ ‘ಹೆಚ್‌ಟಿ ಮಿತ್ರ’ ಪೋರ್ಟಲ್‌ಗೆ ಚಾಲನೆ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್

by ಪ್ರತಿಧ್ವನಿ
April 23, 2026
0

ಬೆಂಗಳೂರು: ಬೆಸ್ಕಾಂನ ಹೈ ಟೆನ್ಷನ್ ಗ್ರಾಹಕರಿಗಾಗಿ ಸಂಸ್ಥೆಯ ಇಂಜಿನಿಯರ್‌ಗಳು ಅಭಿವೃದ್ಧಿಪಡಿಸಿರುವ ಸೇವೆ ಕೋರಿಕೆ/ಕುಂದುಕೊರತೆ ಪರಿಹಾರ ಪೋರ್ಟಲ್ 'ಹೆಚ್‌ಟಿ ಮಿತ್ರ'ಗೆ ಇಂಧನ ಸಚಿವ ಕೆ.ಜೆ. ಜಾರ್ಜ್ ಅವರು ಗುರುವಾರ...

Read moreDetails
ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

ಇನ್ನು ಮುಂದೆ ಬೆಂಗಳೂರು ಒನ್ ಕೇಂದ್ರಗಳಲ್ಲೂ ಇ-ಸ್ವತ್ತು ಅರ್ಜಿ ಸಲ್ಲಿಸಬಹುದು. ಸಚಿವ ಪ್ರಿಯಾಂಕ ಖರ್ಗೆ

April 23, 2026
ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

ಮಹಿಳಾ ಮೀಸಲಾತಿ ಡಿಎಂಕೆ ರಾಜಕೀಯ ಹುನ್ನಾರಕ್ಕೆ ರಾಜ್ಯದ ಹಿತ ಬಲಿ:ಬಸವರಾಜ ಬೊಮ್ಮಾಯಿ

April 23, 2026
ತಮಿಳುನಾಡು ಅಭಿವೃದ್ಧಿಗೆ ಮತದಾನ ಮಾಡಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ

ತಮಿಳುನಾಡು ಅಭಿವೃದ್ಧಿಗೆ ಮತದಾನ ಮಾಡಿ: ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕರೆ

April 23, 2026
ಅಬ್ಬರ, ಆರ್ಭಟದ ಬಳಿಕ ಇಂದು ಬಂಗಾಳದಲ್ಲಿ ಮತದಾನ : ದೀದಿ ಮಣಿಸಲು ಮೋದಿ ಸಕಸ್ಸ್ ಆಗ್ತಾರಾ..

ಅಬ್ಬರ, ಆರ್ಭಟದ ಬಳಿಕ ಇಂದು ಬಂಗಾಳದಲ್ಲಿ ಮತದಾನ : ದೀದಿ ಮಣಿಸಲು ಮೋದಿ ಸಕಸ್ಸ್ ಆಗ್ತಾರಾ..

April 23, 2026
Next Post
ಮುಡಾ ಕೇಸ್‌ ರಿಪೋರ್ಟ್‌.. ಸಿಎಂ ವಿರೋಧಿಗಳು ಏನಂತಾರೆ..?

ಮುಡಾ ಕೇಸ್‌ ರಿಪೋರ್ಟ್‌.. ಸಿಎಂ ವಿರೋಧಿಗಳು ಏನಂತಾರೆ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada