ಹೈದ್ರಾಬಾದ್ (Hydrabad) ಲೋಕಸಭಾ ಕ್ಷೇತ್ರದ ಮೇಲೆ ಈ ಬಾರಿ ಬಿಜೆಪಿ ಹೈಕಮಾಂಡ್ (BJP highcommand) ತನ್ನ ಸಂಪೂರ್ಣ ಗಮನವನ್ನು ಕೇಂದ್ರೀಕರಿಸಿದೆ . ಎ ಐ ಎಂ ಐ ಎಂ (AIMIM) ಪಕ್ಷದಿಂದ ಅಸಾಸುದ್ದೀನ್ ಓವೈಸಿ (asaasuddin) ಪ್ರತಿನಿಧಿಸುವ ಹೈದರಾಬಾದ್ ಕ್ಷೇತ್ರ 1984 ರಿಂದಲೂ ಎಐಎಂಐಎಮ್ (AIMIM) ಪಕ್ಷದ ಹಿಡಿತದಲ್ಲಿಯೇ ಇದೆ . ಈ ಬಾರಿ ಹೇಗಾದ್ರೂ ಮಾಡಿ ಅಸಾಸುದ್ದಿನ್ ಓವೈಸಿಯನ್ನ ಸೋಲಿಸುವ ಪಣತೊಟ್ಟಿರುವ ಬಿಜೆಪಿ , ಹಿಂದೂ ಫೈಯರ್ ಬ್ರಾಂಡ್ (Hindu fire brand) ಎಂದೇ ಖ್ಯಾತಿಗಳಿಸಿರುವ ಮಾಧವಿ ಲತಾ (Maadhavi latha) ಅವರನ್ನು ಅಖಾಡಕ್ಕೆ ಇಳಿಸಿದೆ.
ಬಿಜೆಪಿ ಅಭ್ಯರ್ಥಿಯಾಗಿರುವ ಮಾಧವಿ ಲತಾ ತಮ್ಮ ಹೇಳಿಕೆಗಳು ಮತ್ತು ನಡವಳಿಕೆಯ ಮೂಲಕ ಹಿಂದೂ ಫೈರ್ ಬ್ರಾಂಡ್ ಎಂದೇ ಖ್ಯಾತಿ ಪಡೆದಿರುವ ಜನಪ್ರಿಯ ವ್ಯಕ್ತಿಯಾಗಿದ್ದಾರೆ (popular leader). ಹೈದರಾಬಾದ್ ನಲ್ಲಿ ತಮ್ಮ ಸ್ವಂತ ಪ್ರಖ್ಯಾತ ಹೋಟೆಲ್ (Famous hotel ) ಒಂದನ್ನು ಕೂಡ ಹೊಂದಿದ್ದಾರೆ . ಈ ಬಾರಿ ಶತಾಯಗತಾಯ ಅಸಾಸುದ್ದೀನ್ ಓವೈಸಿ ಸೋಲಿಸಲು ಇವರೇ ಸಮರ್ಥ ಅಭ್ಯರ್ಥಿ ಎಂದು ಬಿಜೆಪಿ ಚಿಂತನೆ ಮಾಡಿ ಇವರನ್ನ ಕಣಕ್ಕೆ ಇಳಿಸಿದೆ.
ಹೈದ್ರಾಬಾದ್ ನಲ್ಲಿ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳಿದ್ದು (7 MLA constituency) ,ಈ ಪೈಕಿ ಆರು ಕ್ಷೇತ್ರಗಳಲ್ಲಿ AIMIM ಪಕ್ಷದ ಶಾಸಕರು ಹಾಗೂ ಒಂದು ಕ್ಷೇತ್ರದಲ್ಲಿ ಮಾತ್ರ ಬಿಜೆಪಿಯ (BJP)ಶಾಸಕರು ಆಯ್ಕೆಯಾಗಿದ್ದಾರೆ. ಈ ಹಿಂದೆಯೂ ಕೂಡ ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳನ್ನ ಕಣಕ್ಕಿಳಿಸುವ ಮೂಲಕ ಈ ಕ್ಷೇತ್ರದಲ್ಲಿ ಪಾರುಪತ್ಯ ಸಾಧಿಸುವ ಪ್ರಯತ್ನ ನಡೆಸಿದ್ದವಾದರೂ ರಾಷ್ಟ್ರೀಯ ಪಕ್ಷಗಳು ಯಶಸ್ವಿಯಾಗಿರಲಿಲ್ಲ . ಆದರೆ ಈ ಬಾರಿ ಮಾಧವಿ ಲತಾ ಅವರ ಜನಪ್ರಿಯತೆ ಮತ್ತು ಹಿಂದೂ ಫೈರ್ ಬ್ರಾಂಡ್ ಎಂದು ಗುರುತಿಸಿಕೊಂಡಿರೋದ್ರಿಂದ ಹೈದ್ರಾಬಾದ್ ಕ್ಷೇತ್ರ ಕದನ ಕುತೂಹಲಕ್ಕೆ ಕಾರಣವಾಗಿದೆ.