• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Saturday, August 29, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಹಾಸನ ವಿಧಾನಸಭಾ ಕ್ಷೇತ್ರವನ್ನು ಪಂಚರತ್ನಯಾತ್ರೆಯಿಂದ ದೂರವಿಟ್ಟ ದಳಪತಿಗಳು : ಇದರ ಹಿಂದಿದೆ ಈ ಕಾರಣ

ಪ್ರತಿಧ್ವನಿ by ಪ್ರತಿಧ್ವನಿ
March 7, 2023
in ಕರ್ನಾಟಕ, ರಾಜಕೀಯ
0
ಹಾಸನ ವಿಧಾನಸಭಾ ಕ್ಷೇತ್ರವನ್ನು ಪಂಚರತ್ನಯಾತ್ರೆಯಿಂದ ದೂರವಿಟ್ಟ ದಳಪತಿಗಳು : ಇದರ ಹಿಂದಿದೆ ಈ ಕಾರಣ
Share on WhatsAppShare on FacebookShare on Telegram

ಹಾಸನ : ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮೂರೂ ರಾಜಕೀಯ ಪಕ್ಷಗಳು ರಾಜ್ಯದಲ್ಲಿ ಯಾತ್ರೆ ಕೈಗೊಂಡಿವೆ. ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದ್ದರೆ ಕಾಂಗ್ರೆಸ್​ ಪ್ರಜಾಧ್ವನಿ ಯಾತ್ರೆಯಲ್ಲಿ ಬ್ಯುಸಿಯಾಗಿದೆ. ಇತ್ತ ನಾವೇನು ಕಮ್ಮಿ ಅಂತಾ ಜೆಡಿಎಸ್​ ಪಕ್ಷವು ಪಂಚರತ್ನ ಯಾತ್ರೆ ನಡೆಸುವ ಮೂಲಕ ರಾಜ್ಯದಲ್ಲಿ ತನ್ನ ಶಕ್ತಿ ಪ್ರದರ್ಶನ ಮಾಡುತ್ತಿದೆ. ಆದರೆ ಜೆಡಿಎಸ್​ನ ಭದ್ರಕೋಟೆ ಎನಿಸಿರುವ ಹಾಸನದಲ್ಲಿಯೇ ಜೆಡಿಎಸ್​ ಈ ಯಾತ್ರೆಯನ್ನು ಮಾಡಲು ಮನಸ್ಸು ಮಾಡದೇ ಇರೋದು ಸಾಕಷ್ಟು ರಾಜಕೀಯ ಚರ್ಚೆಗಳಿಗೆ ಕಾರಣವಾಗಿದೆ.

ADVERTISEMENT

ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ ಟಿಕೆಟ್​ ಕೊಡೋದು ಯಾರಿಗೆ ಅನ್ನೋ ಗೊಂದಲ ಬಗೆಹರಿಯುತ್ತಿಲ್ಲ. ಹೀಗಾಗಿ ಟಿಕೆಟ್​ ಗೊಂದಲ ಬಗೆಹರಿಯದೇ ಇರೋದ್ರಿಂದ ಕ್ಷೇತ್ರದಲ್ಲಿ ಸದ್ಯಕ್ಕೆ ಬೇಡ ಅನ್ನೋ ನಿರ್ಧಾರಕ್ಕೆ ದಳಪತಿಗಳು ಬಂದಿದ್ದಾರೆ ಎನ್ನಲಾಗಿದೆ. ಜೆಡಿಎಸ್​ ಟಿಕೆಟ್​ ಯಾರಿಗೆ ಎಂದು ಅಂತಿಮ ತೀರ್ಮಾನವಾದ ಬಳಿಕವೇ ಹಾಸನದಲ್ಲಿ ಪಂಚರತ್ನ ಯಾತ್ರೆ ನಡೆಸೋಣ ಎಂದು ದಳಪತಿಗಳು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.


ಮಾರ್ಚ್​ 10 ರಿಂದ 17ರವರೆಗೆ ಹಾಸನ ಜಿಲ್ಲೆಯಲ್ಲಿ ಪಂಚರತ್ನಯಾತ್ರೆ ನಡೆಯುತ್ತಿದೆ. ಹಾಸನ ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಪಂಚರತ್ನ ಯಾತ್ರೆ ನಡೆಯುತ್ತಿದೆ. ಆದರೆ ಹಾಸನ ಕ್ಷೇತ್ರವೊಂದರಲ್ಲಿ ಪಂಚರತ್ನ ಯಾತ್ರೆ ನಡೆಯುತ್ತಿಲ್ಲ. ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್​ಗಾಗಿ ಭವಾನಿ ರೇವಣ್ಣ ಹಾಗೂ ಸ್ವರೂಪ್​ ನಡುವೆ ಜಟಾಪಟಿ ನಡೆಯುತ್ತಿದೆ. ಪಂಚರತ್ನಯಾತ್ರೆ ನಡೆಸಿದರೆ ಇಬ್ಬರು ಟಿಕೆಟ್​ ಆಕಾಂಕ್ಷಿಗಳ ಬೆಂಬಲಿಗರು ಶಕ್ತಿ ಪ್ರದರ್ಶನ ಮಾಡುವ ಸಾಧ್ಯತೆ ಇದೆ. ಅಲ್ಲದೇ ಎರಡೂ ಬಣದವರು ಕಾರ್ಯಕ್ರಮ ಆಯೋಜನೆಗೆ ಪ್ರತ್ಯೇಕ ಸಿದ್ಧತೆ ಮಾಡುವ ಸಾಧ್ಯತೆ ಕೂಡ ಇದೆ. ಹೀಗಾಗಿ ಇವರಿಬ್ಬರ ಜಟಾಪಟಿಯಿಂದ ಜೆಡಿಎಸ್​ ಪಂಚರತ್ನ ಯಾತ್ರೆಯಲ್ಲಿ ಗೊಂದಲ ಏರ್ಪಡಬಾರದು ಎಂಬ ಕಾರಣಕ್ಕೆ ಜೆಡಿಎಸ್​ ವರಿಷ್ಠರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.

Tags: Bhavani RevannaHassanJDSpancharatna yatraSwaroop
Previous Post

D.V.SADANANDA GOWDA | ಮಂಡ್ಯ ಡೆವಲಪ್ ಆದ್ರೆ ಇಂಡಿಯಾ ಡೆವಲಪ್ ಆಗುತ್ತೆ..! |#PRATIDHAVNI

Next Post

ಮುಲ್ಕಿ ಸೇತುವೆ ಮೇಲೆ ಅಪಘಾತ: ದಂಪತಿ ಸಾವು

Related Posts

‘RSS ಬಗ್ಗೆ ಆಗ ವಿಷಕಾರಿ ಎಂದಿದ್ದರು, ಈಗ ಏಕಾಏಕಿ ಪ್ರೀತಿ ಏಕೆ?’: ಕುಮಾರಸ್ವಾಮಿಗೆ KPCC ಪ್ರಶ್ನೆ
Top Story

‘RSS ಬಗ್ಗೆ ಆಗ ವಿಷಕಾರಿ ಎಂದಿದ್ದರು, ಈಗ ಏಕಾಏಕಿ ಪ್ರೀತಿ ಏಕೆ?’: ಕುಮಾರಸ್ವಾಮಿಗೆ KPCC ಪ್ರಶ್ನೆ

by ಪ್ರತಿಧ್ವನಿ
August 28, 2026
0

ಬೆಂಗಳೂರು, ಆ.28: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಕರ್ನಾಟಕ ಸರ್ಕಾರ ಹಾಗೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಡಿರುವ ಆರೋಪಗಳಿಗೆ ಕೆಪಿಸಿಸಿ ಮಾಧ್ಯಮ ಮತ್ತು...

Read moreDetails
ಫಲಿಸಿದ ವಿಪಕ್ಷಗಳ ಅಸ್ತ್ರ: ಕಣ್ಣೀರು ಹಾಕುತ್ತಲೇ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ

ಫಲಿಸಿದ ವಿಪಕ್ಷಗಳ ಅಸ್ತ್ರ: ಕಣ್ಣೀರು ಹಾಕುತ್ತಲೇ ಸಚಿವ ಸ್ಥಾನಕ್ಕೆ ಬಿ.ನಾಗೇಂದ್ರ ರಾಜೀನಾಮೆ

August 28, 2026
ಕರ್ನಾಟಕ ಪೊಲೀಸರಿಗೆ ಸಿಹಿಸುದ್ದಿ: ಸಂಕಷ್ಟ ಭತ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಸಿಎಂ ಭರವಸೆ

ಕರ್ನಾಟಕ ಪೊಲೀಸರಿಗೆ ಸಿಹಿಸುದ್ದಿ: ಸಂಕಷ್ಟ ಭತ್ಯೆ ಶೇ.50ರಷ್ಟು ಹೆಚ್ಚಳಕ್ಕೆ ಸಿಎಂ ಭರವಸೆ

August 28, 2026
OMR ಶೀಟ್ ತಿದ್ದುಪಡಿ, ಸಿಸಿಟಿವಿ ಹಾಳು..ಅಕ್ರಮ ನೇಮಕಾತಿ ವಿರುದ್ಧ ಯುವ ಜನತೆ ಬೀದಿಗಿಳಿಯಿರಿ: ಕುಮಾರಸ್ವಾಮಿ

OMR ಶೀಟ್ ತಿದ್ದುಪಡಿ, ಸಿಸಿಟಿವಿ ಹಾಳು..ಅಕ್ರಮ ನೇಮಕಾತಿ ವಿರುದ್ಧ ಯುವ ಜನತೆ ಬೀದಿಗಿಳಿಯಿರಿ: ಕುಮಾರಸ್ವಾಮಿ

August 28, 2026
ರೈಲ್ವೆ ಚತುಷ್ಪಥ ಯೋಜನೆಯಲ್ಲಿ ರಾಜ್ಯಕ್ಕೆ ತೀವ್ರ ಅನ್ಯಾಯ: ಸಚಿವ ಎಂ.ಬಿ ಪಾಟೀಲ್‌ ಖಂಡನೆ

ರೈಲ್ವೆ ಚತುಷ್ಪಥ ಯೋಜನೆಯಲ್ಲಿ ರಾಜ್ಯಕ್ಕೆ ತೀವ್ರ ಅನ್ಯಾಯ: ಸಚಿವ ಎಂ.ಬಿ ಪಾಟೀಲ್‌ ಖಂಡನೆ

August 28, 2026
Next Post
ಮೈಸೂರು; KSRTC ಬಸ್‌ ಹರಿದು ಬಾಲಕ ದುರ್ಮರಣ

ಮುಲ್ಕಿ ಸೇತುವೆ ಮೇಲೆ ಅಪಘಾತ: ದಂಪತಿ ಸಾವು

Please login to join discussion
https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada