• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Wednesday, May 20, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಕರ್ನಾಟಕ

ಜಾತಿ ಜನಗಣತಿ ವಿರೋಧಿಸಿ ಕಾಂಗ್ರೆಸ್​ನಲ್ಲೇ ಇಂದು ಡಿಸಿಎಂ ಸಭೆ..

ಕೃಷ್ಣ ಮಣಿ by ಕೃಷ್ಣ ಮಣಿ
April 15, 2025
in ಕರ್ನಾಟಕ, ರಾಜಕೀಯ
0
ಜಾತಿ ಜನಗಣತಿ ವಿರೋಧಿಸಿ ಕಾಂಗ್ರೆಸ್​ನಲ್ಲೇ ಇಂದು ಡಿಸಿಎಂ ಸಭೆ..
Share on WhatsAppShare on FacebookShare on Telegram

ಜಾತಿಗಣತಿ ವರದಿ ವಿಚಾರವಾಗಿ ಡಿಸಿಎಂ ಡಿ.ಕೆ ಶಿವಕುಮಾರ್​ ಎಚ್ಚರಿಕೆ ನಡೆ ಇಡುತ್ತಿದ್ದಾರೆ. ಪಕ್ಷ ಸಿದ್ದಾಂತ ಎನ್ನುತ್ತಿದ್ದ ಡಿ.ಕೆ ಶಿವಕುಮಾರ್​ಗೆ ಸಮುದಾಯದ ಭಯ ಕಾಡ್ತಿದೆಯಾ ಎನ್ನುವಂತಾಗಿದೆ. ಜಾತಿಗಣತಿಗೆ ಸಮುದಾಯದಲ್ಲಿ ತೀವ್ರ ವಿರೋಧ ಹಿನ್ನೆಲೆ ಎಚ್ಚೆತ್ತಿರುವ ಡಿ.ಕೆ ಶಿವಕುಮಾರ್​, ವಿಶೇಷ ಕ್ಯಾಬಿನೆಟ್‌ಗೂ ಮುನ್ನವೇ ಸಮುದಾಯದ ಶಾಸಕರ ಅಭಿಪ್ರಾಯ ಕೇಳಲು ನಿರ್ಧಾರ ಮಾಡಿದ್ದಾರೆ. ಇಂದು ಒಕ್ಕಲಿಗ ಶಾಸಕರೊಂದಿಗೆ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲಿದ್ದಾರೆ.

ADVERTISEMENT
Marks Goalmall : ಮೈಸೂರು ವಿವಿಯಲ್ಲಿ ಪ್ರಾಧ್ಯಾಪಕನ ಕರ್ಮಕಾಂಡ .. #pratidhvani

ಡಿಸಿಎಂ ಡಿ.ಕೆ ಶಿವಕುಮಾರ್​​ ಸರ್ಕಾರಿ‌ ನಿವಾಸದಲ್ಲಿ ಕಾಂಗ್ರೆಸ್ ಒಕ್ಕಲಿಗ ಶಾಸಕರ ಸಭೆ ಕರೆದಿದ್ದು, ಸಭೆಯಲ್ಲಿ ಜಾತಿ ಜನಗಣತಿಯಿಂದ ಆಗುವ ಲಾಭ ನಷ್ಟದ ಬಗ್ಗೆ ಶಾಸಕರ ಜೊತೆಗೆ ಚರ್ಚೆ ನಡೆಸಲಿದ್ದಾರೆ. ಇಂದಿನ ಸಭೆಗೆ ಒಕ್ಕಲಿಗ ಕಾಂಗ್ರೆಸ್ ಶಾಸಕರು ತಪ್ಪದೇ ಹಾಜರಿರಲು‌ ಡಿ.ಕೆ ಶಿವಕುಮಾರ್​ ಸೂಚನೆ‌ ಕೊಟ್ಟಿದ್ದಾರೆ. ಈಗಾಗಲೇ ಒಕ್ಕಲಿಗ ಸಮುದಾಯದಲ್ಲಿ ಜಾತಿ ಜನಗಣತಿ ವರದಿಗೆ ವಿರೋಧ ಮಾಡುತ್ತಿದ್ದಾರೆ. ಬಿಜೆಪಿಯ ಕೆಲವು ಒಕ್ಕಲಿಗ ನಾಯಕರಿಂದಲೂ ವರದಿಗೆ ವಿರೋಧ ಮಾಡಿದ್ದಾರೆ. ಹೀಗಾಗಿ ಈ ಕುರಿತು ಸಮಗ್ರವಾಗಿ ಇಂದು ಚರ್ಚಿಸಲಿದ್ದಾರೆ ಡಿ.ಕೆ ಶಿವಕುಮಾರ್​.

ವಿಶೇಷ ಕ್ಯಾಬಿನೆಟ್​ ಸಭೆಯಲ್ಲಿ ಸಿಎಂ ಎದುರು ಹಾಜರಾಗಿ ಮಾತನಾಡುವ ಮುನ್ನವೇ ಜಾತಿಗಣತಿ ಪ್ರತಿಯನ್ನ ಒಕ್ಕಲಿಗ ಶಾಸಕರ ಮುಂದಿಟ್ಟು ಅಭಿಪ್ರಾಯ ಕೇಳಲು ಮುಂದಾಗಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಜಾತಿ ಜನಗಣತಿಯಿಂದ ಏನಾಗುತ್ತದೆ. ರಾಜಕೀಯ ನಷ್ಟ ಏನಾಗುತ್ತದೆ..? ಯಾವ ನಿಲುವು ತೆಗೆದುಕೊಳ್ಳಬೇಕು ಅನ್ನೋ ಬಗ್ಗೆ ಅಭಿಪ್ರಾಯ ಸಂಗ್ರಹ ಮಾಡಲಿದ್ದಾರೆ. ಶಾಸಕರೊಂದಿಗಿನ ಸಭೆ ಬಳಿಕ ಸ್ವಾಮೀಜಿಗಳ ಬಳಿಯೂ ಚರ್ಚಿಸಲು ಡಿ.ಕೆ ಶಿವಕುಮಾರ್​ ನಿರ್ಧಾರ ಮಾಡಿದ್ದಾರೆ.

ಈಗಾಗಲೇ ಬಿಜೆಪಿ-ಜೆಡಿಎಸ್​ ನಾಯಕರು ಸ್ವಾಮೀಜಿ ನೇತೃತ್ವದಲ್ಲಿ ಹೋರಾಟ ಮಾಡುವುದಾಗಿ ಘೋಷಣೆ ಮಾಡಿದ್ದು, ಒಂದು ವೇಳೆ ಸಮುದಾಯ ಕಾಂಗ್ರೆಸ್​ ವಿರುದ್ಧ ತಿರುಗಿ ಬಿದ್ದರೆ ಆಗುವ ನಷ್ಟದ ಬಗ್ಗೆ ಡಿಕೆ ಶಿವಕುಮಾರ್​ ಇಂದು ಚರ್ಚೆ ನಡೆಸಲಿದ್ದು, ಆ ಬಳಿಕ ಸ್ವಾಮೀಜಿ ಬಳಿ ಚರ್ಚೆ ನಡೆಸಲಿದ್ದಾರೆ. ನಂತರ ಸಮಗ್ರವಾಗಿ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲು ನಿರ್ಧಾರ ಮಾಡಿದ್ದಾರೆ. ಒಟ್ಟಾರೆ ಸಿದ್ದರಾಮಯ್ಯ ಒಂದು ರೀತಿಯ ಲೆಕ್ಕಾಚಾರ ಮಾಡ್ತಿದ್ದು, ಲಿಂಗಾಯತ ಹಾಗು ಒಕ್ಕಲಿಗ ಸಮುದಾಯ ಅಂತರ ಕಾಯ್ದುಕೊಳ್ತಿದೆ.

Tags: bihar caste censusbihar caste census newscaste based censuscaste based census in biharCaste Censuscaste census biharcaste census bihar newscaste census in biharcaste census in indiacaste census in karnatakacaste census reportcongresskarnataka caste census reportopposition meetingopposition meeting in bengaluruopposition meeting shift to bengalurusupreme court on caste census in bihar
Previous Post

ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧದ ಬಿ ರಿಪೋರ್ಟ್​ ಭವಿಷ್ಯ..

Next Post

ಜಾತಿ ಜನಗಣತಿ ವರದಿ ಬಗ್ಗೆ ಆಯೋಗದ ಮಾಜಿ ಅಧ್ಯಕ್ಷರು ಏನಂತಾರೆ..?

Related Posts

ನಾರ್ಡಿಕ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ “ಭಾರತ–ನಾರ್ಡಿಕ್” ಬಗ್ಗೆ ಹೇಳಿದ್ದೇನು ?
ರಾಜಕೀಯ

ನಾರ್ಡಿಕ್ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ “ಭಾರತ–ನಾರ್ಡಿಕ್” ಬಗ್ಗೆ ಹೇಳಿದ್ದೇನು ?

by ಪ್ರತಿಧ್ವನಿ
May 20, 2026
0

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಾರ್ಡಿಕ್ ಶೃಂಗಸಭೆಯಲ್ಲಿ ಮಾತನಾಡಿ, “ಪ್ರಜಾಪ್ರಭುತ್ವ, ಕಾನೂನಿನ ಆಡಳಿತ ಹಾಗೂ ಜನಪರ ಮೌಲ್ಯಗಳೇ ಭಾರತ ಮತ್ತು ನಾರ್ಡಿಕ್ ರಾಷ್ಟ್ರಗಳನ್ನು ಸಹಜ ಪಾಲುದಾರರನ್ನಾಗಿಸಿವೆ” ಎಂದು...

Read moreDetails
ಸಿದ್ದರಾಮಯ್ಯ ದೆಹಲಿ ಭೇಟಿ ಚರ್ಚೆ ಜೋರು: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಸುಳಿವೇ?

ಸಿದ್ದರಾಮಯ್ಯ ದೆಹಲಿ ಭೇಟಿ ಚರ್ಚೆ ಜೋರು: ಕರ್ನಾಟಕದಲ್ಲಿ ನಾಯಕತ್ವ ಬದಲಾವಣೆಯ ಸುಳಿವೇ?

May 20, 2026
ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ

ಕೊಳಚೆ ನಿರ್ಮೂಲನಾ ಮಂಡಳಿ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ: ಅಧಿಕಾರಿಗಳಲ್ಲಿ ಆತಂಕ

May 20, 2026
ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

ಬಿಜೆಪಿ ಮೆಗಾ ಪ್ಲಾನ್: ರಾಜ್ಯದ ನಾಲ್ಕು ಭಾಗಗಳಲ್ಲಿ ಬೃಹತ್ ಸಮಾವೇಶಕ್ಕೆ ಸಿದ್ಧತೆ

May 19, 2026
ದರ್ಶನ್–ವಿಜಯಲಕ್ಷ್ಮೀ ಬಾಂಧವ್ಯ: 23 ವರ್ಷದ ಪಯಣ ಹೇಗಿತ್ತು ?

ಹೈಕೋರ್ಟ್ ಸೂಚನೆಗೆ ಮಣಿದ ಸಾರಿಗೆ ನೌಕರರು: ರಾಜ್ಯವ್ಯಾಪಿ ಮುಷ್ಕರ ವಾಪಸ್

May 19, 2026
Next Post
ಜಾತಿ ಜನಗಣತಿ ವರದಿ ಬಗ್ಗೆ ಆಯೋಗದ ಮಾಜಿ ಅಧ್ಯಕ್ಷರು ಏನಂತಾರೆ..?

ಜಾತಿ ಜನಗಣತಿ ವರದಿ ಬಗ್ಗೆ ಆಯೋಗದ ಮಾಜಿ ಅಧ್ಯಕ್ಷರು ಏನಂತಾರೆ..?

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada