ಬ್ಯಾಂಕ್ ಸಿಬ್ಬಂದಿಯ ಸೋಗಿನಲ್ಲಿ ಯಾರಾದರೂ ನಿಮಗೆ ಕರೆ ಮಾಡಿ ನಿಮ್ಮ ಮೊಬೈಲ್ ನಂಬರ್ ಗೆ ಬಂದಿರುವ ಓಟಿಪಿ(OTP) ಹೇಳಿ ಅಥವಾ ನಿಮ್ಮ ಮೊಬೈಲ್ಗೆ ಒಂದು ಲಿಂಕ್ (Link) ಕಳುಹಿಸಲಾಗಿದೆ ಆ ಲಿಂಕ್ ನ ಟಚ್ ಮಾಡಿ ಅಂದ್ರೆ ಅಥವಾ ಯಾವುದಾದರೂ App ಗಳನ್ನ ಡೌನ್ಲೋಡ್ ಮಾಡಲು ಸೂಚಿಸಿದ್ರೆ ಖಂಡಿತ ಅಂತ ಮೋಸಕ್ಕೆ ಒಳಗಾಗಬೇಡಿ ಅಂತ ಐಸಿಐಸಿಐ (ICICI) ಬ್ಯಾಂಕ್ ತನ್ನ ಗ್ರಾಹಕರಿಗೆ ಎಚ್ಚರಿಸಿದೆ.

ಇತ್ತೀಚೆಗಂತೂ ಸೈಬರ್ ಕ್ರೈಂ (Cyber crime) ಪ್ರಕರಣಗಳು ವ್ಯಾಪಕವಾಗಿ ವರದಿಯಾಗ್ತನೇ ಇದೆ . ಸಾವಿರಾರು ಸಂಖ್ಯೆಯಲ್ಲಿ ಪ್ರಕರಣಗಳು ದಾಖಲಾದರೂ ಈ ಖದೀಮರನ್ನ ಪತ್ತೆ ಹಚ್ಚುವಲ್ಲಿ ಪೊಲೀಸರು (Police) ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಿಲ್ಲ ,ಕಾರಣ ಸೈಬರ್ ವಿಭಾಗ ಇನ್ನಷ್ಟು ಗಟ್ಟಿಗೊಳ್ಳಬೇಕಾಗಿದೆ . ಆನ್ಲೈನ್ ನಲ್ಲಿ ವಂಚಿಸುವ ಈ ಕದೀಮರ ಜಾಲವನ್ನು ಪತ್ತೆ ಹಚ್ಚೋದು ಬಹಳ ಕಷ್ಟದ ಕೆಲಸ.

ಹೀಗಾಗಿ ಒಮ್ಮೆ ಈ ಖದೀಮರ ಜಾಲಕ್ಕೆ ಸಿಲುಕಿ ನೀವೇನಾದರೂ ಖಾತೆಯಲ್ಲಿರುವ ಹಣ ಕಳೆದುಕೊಂಡರೆ ಅದನ್ನ ಮರಳಿ ಪಡೆಯುವುದು ಅಸಾಧ್ಯ ಅಥವಾ ಕಷ್ಟ ಸಾಧ್ಯ ಅಂತ ಹೇಳಬಹುದು. ಸಾವಿರ ಪ್ರಕರಣಗಳು ಈ ರೀತಿ ನಡೆದಿದ್ದರೆ ಆ ಪೈಕಿ ಬೆರಳೆಣಿಕೆಯ ಪ್ರಕರಣಗಳಲ್ಲಷ್ಟೇ ಹಣ ಮರಳಿ ಸಿಕ್ಕಿರೋದು . ಹೀಗಾಗಿ ಬ್ಯಾಂಕ್ ಸಿಬ್ಬಂದಿ ಹೆಸರಿನಲ್ಲಿ ಓಟಿಪಿ (OTP) ಅಥವಾ ಆಪ್ ಗಳನ್ನು ಡೌನ್ಲೋಡ್ ಮಾಡಿ ಅಂತ ಹೇಳಿ ನಿಮಗೆ ಕರೆಗಳು ಬಂದರೆ ಅಂತ ಕರೆಗಳನ್ನು ನಿರ್ಲಕ್ಷಿಸಿ ನಿಮ್ಮ ಅಕೌಂಟ್ ನ ಸೇಫ್ ಆಗಿ ಇರಿಸಿಕೊಳ್ಳಿ ಅಂತ ಬ್ಯಾಂಕ್ ತನ್ನ ಗ್ರಾಹಕರಿಗೆ ಸೂಚಿಸಿದೆ.