ಸೋನು ಶ್ರೀನಿವಾಸ್ ಗೌಡಗೆ (Sonu Srinivas gowda) ಕೊನೆಗೂ ಬಿಗ್ ರಿಲೀಸ್ ಸಿಕ್ಕಿದೆ. ಮಗುವನ್ನ ದತ್ತು ಪಡೆಯುವ ಪ್ರಕ್ರಿಯೆಯಲ್ಲಿ ನಿಯಮಗಳನ್ನ ಉಲ್ಲಂಘಿಸಲಾಗಿದೆ ಎಂಬ ಕಾರಣಕ್ಕೆ ಬ್ಯಾಡರಹಳ್ಳಿ ಠಾಣೆಯ ಪೊಲೀಸರು (police) ಸೋನು ಶ್ರೀನಿವಾಸ್ ಗೌಡಾಳನ್ನ ಮಾರ್ಚ್ 22 ರಂದು ಬಂಧಿಸಿ ಕೋರ್ಟ್ನ ಮುಂದೆ ಹಾಜರುಪಡಿಸಿ ಕಸ್ಟಡಿಗೆ ಪಡೆದುಕೊಂಡಿದ್ದರು.

ಈ ಪ್ರಕರಣದಲ್ಲಿ ಸೋನು ಶ್ರೀನಿವಾಸ್ ಗೌಡ ಪರವಾಗಿ ವಕೀಲ ಪ್ರಕಾಶ್ (lawyer prakash) ಪಿಡಿಜೆ ನ್ಯಾಯಾಲಯದಲ್ಲಿ (PDJ court) ವಾದ ಮಂಡಿಸಿದ್ದು, ಕೋರ್ಟ್ ಸೋನು ಶ್ರೀನಿವಾಸ್ ಗೌಡಗೆ ಶರತ್ತು ಬದ್ಧ ಜಾಮೀನನ್ನ ಮಂಜೂರು ಮಾಡಿದ್ದು ,ಶೂರಿಟಿ ಒದಗಿಸಿ ಜಾಮೀನು ಪಡೆದುಕೊಳ್ಳಲು ಪಿಡಿಜೆ ಕೋಟ್ ಸೂಚನೆ ನೀಡಿದೆ.

ಸೋನು ಶ್ರೀನಿವಾಸ್ ಗೌಡ ಹೆಣ್ಣು ಮಗುವೊಂದನ್ನ ದತ್ತು ಪಡೆದಿದ್ದು , ಪ್ರಕ್ರಿಯೆಯಲ್ಲಿ ನಿಯಮಗಳ ಉಲ್ಲಂಘನೆಯಾಗಿದೆ. ಮಗುವಿನ ಐಡೆಂಟಿಟಿ(Identity) ಯನ್ನ ಬಿಟ್ಟು ಕೊಡಲಾಗಿದೆ . ಇನ್ನು ಉಳಿದ ಹಾಗೆ ಸಾಕಷ್ಟು ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂಬ ಕಾರಣಕ್ಕೆ ಸೋನು ಶ್ರೀನಿವಾಸ್ ಗೌಡ ಮೇಲೆ ಕೇಸ್ ದಾಖಲಿಸಿ ಬ್ಯಾಡರಹಳ್ಳಿ ಪೊಲೀಸರು ಆಕೆಯನ್ನ ಬಂಧಿಸಿ ಕಸ್ಟಡಿಗೆ ಪಡೆದುಕೊಂಡಿದ್ದರು . ಇದೀಗ ಈ ಪ್ರಕರಣದಲ್ಲಿ ಬೇಲ್ (Bail) ಲಭ್ಯವಾಗಿರುವುದರಿಂದ ಸೋಮು ಶ್ರೀನಿವಾಸ್ ಗೌಡಗೆ ತಾತ್ಕಾಲಿಕವಾಗಿ ರಿಲೀಫ್ (Relief) ಸಿಕ್ಕಂತಾಗಿದೆ.