ಬೆಂಗಳೂರು: ಕರ್ನಾಟಕದಲ್ಲಿ ಸಿಎಂ ಕುರ್ಚಿಗಾಗಿ ಕದನದ ಕಾವು ಜೋರಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಶೀತನ ಸಮರ ಜೋರಾಗುತ್ತಿದ್ದಂತೆ ಇದೀಗ ಅಧೀಕೃತವಾಗಿ ಕಾಂಗ್ರೆಸ್ ಹೈಕಮಾಂಡ್ ಪ್ರವೇಶ ಮಾಡಿದೆ.

ಈ ಮೊದಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿಗೆ ಭೇಟಿ ನೀಡಿದ್ದು, ಸಿಎಂ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಪ್ರಮುಖ ನಾಯಕರನ್ನು ಭೇಟಿಯಾಗಿ ಅವರ ಅಭಿಪ್ರಾಯ ಸಂಗ್ರಹಿಸಿದ್ದರು. ರಾಜ್ಯ ನಾಯಕರ ಅಭಿಪ್ರಾಯವನ್ನು ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಹೈಕಮಾಂಡ್ ನಾಯಕರಿಗೆ ಮುಟ್ಟಿಸಿದ್ದಾರೆ.

ಈ ಬೆನ್ನಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಡಿಸಿಎಂ ಡಿ.ಕೆ ಶಿವಕುಮಾರ್‌ಗೆ ಮಹತ್ವದ ಸಂದೇಶ ರವಾನಿಸಿದ್ದಾರೆ. ದಯವಿಟ್ಟು ಕಾಯಿರಿ, ನಾನು ಕರೆ ಮಾಡುತ್ತೇನೆ ಎನ್ನುವ ಹೈಮಾಂಡ್ ಸಂದೇಶ ಡಿ.ಕೆ. ಶಿವಕುಮಾರ್‌ಗೆ ತಲುಪಿದ್ದು, ವರಿಷ್ಠರ ಮುಂದಿನ ನಿರ್ಧಾರದವರೆಗೂ ಡಿ.ಕೆ ಶಿವಕುಮಾರ್ ಕಾಯಲೇಬೇಕಿದೆ. ಒಟ್ಟಾರೆಯಾಗಿ ತಮ್ಮ ಅಂಗಳದಲ್ಲಿರುವ ಕರ್ನಾಟಕ ಸಿಎಂ ಸ್ಥಾನದ ಚಂಡನ್ನು ಕಾಂಗ್ರೆಸ್ ಹೈಕಮಾಂಡ್ ಯಾರತ್ತ ಎಸೆಯಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.












