ಭಾರತದ ಬ್ಯಾಡ್ಮಿಂಟನ್ ತಾರೆ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ರೋಚಕ ಜಯದೊಂದಿಗೆ ಸೆಮಿಫೈನಲ್ ಪ್ರವೇಶಿಸುವ ಮೂಲಕ ಪದಕತ್ತ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದ್ದಾರೆ.
ಬರ್ಮಿಂಗ್ ಹ್ಯಾಂನಲ್ಲಿ ಶನಿವಾರ ನಡೆದ ಕ್ವಾರ್ಟರ್ ಫೈನಲ್ ನಲ್ಲಿ ಪಿವಿ ಸಿಂಧು 21-18, 21-14, 18-21ರಿಂದ ಮಲೇಷ್ಯಾದ ಜಿನ್ ವೇಹ್ ಗೋಹ್ ವಿರುದ್ಧ ರೋಚಕ ಜಯ ಸಾಧಿಸಿದರು.
ಒಲಿಂಪಿಕ್ಸ್ ನಲ್ಲಿ ಎರಡು ಬೆಳ್ಳಿ ಪದಕ ಗೆದ್ದ ದಾಖಲೆ ಬರೆದಿರುವ ಪಿವಿ ಸಿಂಧು ಮೊದಲ ಸೆಟ್ ನಲ್ಲಿ ಸೋಲುಂಡು ಹಿನ್ನಡೆ ಅನುಭವಿಸಿದರೂ ನಂತರದ ಎರಡೂ ಸೆಟ್ ಗಳಲ್ಲಿ ರೋಚಕ ಜಯ ಸಾಧಿಸಿ ನಾಲ್ಕರ ಘಟ್ಟ ಪ್ರವೇಶಿಸಿದರು.