ಕೋವಿಡ್ -19 ರೂಪಾಂತರ ತಳಿಯು ಪ್ರಬಲವಾಗಿ ಹರಡುವ ಗುಣ ಹೊಂದಿದ್ದು, ರೋಗ ಲಕ್ಷಣ ಉಳ್ಳ ಮಮತ್ತು ಲಕ್ಷಣಗಳಿಲ್ಲದ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿವೆ. ರೋಗ ಲಕ್ಷಣಗಳಿಲ್ಲದ ಜನರಿಂದ ಇತರರಿಗೆ ಸೋಂಕು ಹರಡುವುದಕ್ಕೆ ಕಡಿವಾಣ ಹಾಕುವ ಉದ್ದೇ ಶದಿಂದ ಕೋವಿಡ್ ಪತ್ತೆ ಪರೀಕ್ಷೆ ಮತ್ತು ಲಸಿಕೆ ಹೆಚ್ಚಿಸುವಂತೆ 7 ರಾಜ್ಯಗಳಿಗೆ ಕೇಂದ್ರ ಸರ್ಕಾರ ಗುರುವಾರ ಸೂಚಿಸಿದೆ ಎಂದು ಪಿಟಿಐ ವರದಿ ಮಾಡಿದೆ.
ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ದೆಹಲಿ, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಒಡಿಶಾ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಲ್ಲಿ ಹೆಚ್ಚುತ್ತಿರುವ ಕರೋನಾವೈರಸ್ ಹೆಚ್ಚಳವನ್ನು ಗಮನಿಸಿ ಪತ್ರ ಬರೆದಿದ್ದಾರೆ. ಮುಂಬರುವ ಹಬ್ಬದ ಸಮಯದಲ್ಲಿ ರೋಗದ ಹರಡುವಿಕೆ ಹೆಚ್ಚಾಗುವ ಬಗ್ಗೆ ಭೂಷಣ್ ಎಚ್ಚರಿಕೆ ನೀಡಿದ್ದಾದ್ದಾರೆ.
ಕಳೆದ ಒಂದು ತಿಂಗಳಿನಿಂದ ದೆಹಲಿಯಲ್ಲಿ ಹೆಚ್ಚಿನ ಸಂಖ್ಯೆಯ ದೈನಂದಿನ ಪ್ರಕರಣಗಳು ವರದಿಯಾಗುತ್ತಿವೆ ಎಂದು ಹಮನಿಸಿದ ಆರೋಗ್ಯ ಕಾರ್ಯದರ್ಶಿ, ರಾಷ್ಟ್ರ ರಾಜಧಾನಿ ಆರು ತಿಂಗಳಲ್ಲಿ ದೈನಂದಿನ ಪ್ರಕರಣಗಳ ಅತ್ಯಧಿಕ ಸೋಂಕಿನ ಪ್ರಮಾಣವನ್ನು ಗುರುವಾರ ವರದಿ ಮಾಡಿದೆ. ಸೋಂಕಿತರ ಸಂಖ್ಯೆ ಸತತ ಎರಡನೇ ದಿನಕ್ಕೆ 2,000ಕ್ಕಿಂತ ಹೆಚ್ಚಿದೆ, ಆದರೆ ಪಾಸಿಟಿವಿಟಿ ರೇಟ್ ಹೆಚ್ಚಿದೆ ಎಂದು ಹೇಳಿದ್ದಾರೆ.

ಶನಿವಾರ, ಭಾರತವು ಕಳೆದ 24 ಗಂಟೆಗಳಲ್ಲಿ 19,406 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿ ಮಾಡಿದೆ, ಪಾಸಿಟಿವಿಟಿ ದರವು 4.96% ರಷ್ಟಿದೆ ಎಂದು ಸರ್ಕಾರಿ ಅಂಕಿಅಂಶಗಳು ತಿಳಿಸಿದೆ. ದೇಶದ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 1,34,793 ಆಗಿದೆ.